ಬಂಟ್ವಾಳ

ಪರಿವರ್ತನೆಗೆ ಬಿಜೆಪಿ ನಡಿಗೆ – ಶುಕ್ರವಾರ ಸಮಾರೋಪ

ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಸಾರಥ್ಯದಲ್ಲಿ ಬಿಜೆಪಿ ಬಂಟ್ವಾಳ ಆಯೋಜಿಸಿರುವ ಬಂಟ್ವಾಳ ಪರಿವರ್ತನೆಗೆ ನಮ್ಮ ನಡಿಗೆ ಶುಕ್ರವಾರ ಸಮಾರೋಪಗೊಳ್ಳಲಿದೆ. ಈ ಸಂದರ್ಭ ರಾಜ್ಯದ ಪ್ರಮುಖ ನಾಯಕರು ಆಗಮಿಸಲಿದ್ದು, ಮಧ್ಯಾಹ್ನ 3 ಗಂಟೆಗೆ ಸ್ಪರ್ಶ ಕಲಾ ಮಂದಿರದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದು ಕ್ಷೇತ್ರದ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ತಿಳಿಸಿದ್ದಾರೆ.
12ನೇ ದಿನದ ಯಾತ್ರೆ:
ಬಿಜೆಪಿ ನೇತೃತ್ವದ ರಾಜೇಶ್ ನಾಯಕ್ ಸಾರಥ್ಯದಲ್ಲಿ ಬಂಟ್ವಾಳದ ಪರಿವರ್ತನೆಗೆ ನಮ್ಮ ನಡಿಗೆ 12ನೇ ದಿನಕ್ಕೆ ಕಾಲಿರಿಸಿದ್ದು, ಬುಧವಾರ ಸಂಜೆ ಪೊಳಲಿಯಲ್ಲಿ ನಡೆದ ಸಾರ್ವಜನಿಕ ಸಭೆಯ ಬಳಿಕ ಕರಿಯಂಗಳ ಗ್ರಾಮದ ಪೊಳಲಿ ಕಲ್ಕುಟ ಅಶೋಕ್ ಪೂಜಾರಿಯವರ ಮನೆಯಲ್ಲಿ ವಾಸ್ತವ್ಯ ಹೂಡಿದರು.
ಗುರುವಾರ  ಕಲ್ಕುಟದಿಂದ  ವಂದೇಮಾತರಂ ಗೀತೆಯೊಂದಿಗೆ ಆರಂಭವಾದ ಪಾದಯಾತ್ರೆ ಪಲ್ಲಿಪ್ಪಾಡಿಯಾಗಿ ಬಡಗಬೆಳ್ಳೂರು ಗ್ರಾಮವನ್ನು ಪ್ರವೇಶಿಸಿತು.
ಬಡಗಬೆಳ್ಳೂರಿನಲ್ಲಿ ಚೆಂಡೆ,ನಾಸಿಕ್ ಬ್ಯಾಂಡ್‌ನೊಂದಿಗೆ ಸುಮಂಗಲೀಯರು ರಾಜೇಶ್ ನಾಯ್ಕ್ ಅವರಿಗೆ ಆರತಿ ಬೆಳಗಿ ಸ್ವಾಗತಿಸಿದರೆ,ಯುವ ಕಾರ್ಯಕರ್ತರು ಉತ್ಸಾಹದಿಂದ ಅವರನ್ನು ಎತ್ತಿ ಕುಣಿದು ಕುಪ್ಪಳಿಸಿದರು.
ಗುರುವಾರ ರಾತ್ರಿ ಅಮ್ಟಾಡಿಯಲ್ಲಿ ರಾಜೇಶ್ ನಾಯ್ಕ್ ಅವರು ವಾಸ್ತವ್ಯ ಹೂಡಿ ಶುಕ್ರವಾರ ಬೆಳಿಗ್ಗೆ ಇಲ್ಲಿಂದ ಹೊರಡಲಿರುವ ಪಾದಯಾತ್ರೆ ಬಂಟ್ವಾಳ ನಗರದ ಮೂಲಕ  ಬಿ.ಸಿ.ರೋಡಿಗೆ ಅಗಮಿಸಿ ಮಧ್ಯಾಹ್ನ 3 ಗಂಟೆಗೆ ಬಿ.ಸಿ.ರೋಡಿನ ಉದ್ಯಾನವನದ ಬಳಿರುವ ಕಲಾಮಂದಿರದಲ್ಲಿ ಪಾದಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಪಕ್ಷದ ರಾಜ್ಯ ನಾಯಕರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ನಂತರ ಪಾದಯಾತ್ರೆ ತೆಂಕಬೆಳ್ಳೂರು ಗ್ರಾಮವನ್ನು ಪ್ರವೇಶಿಸಿತು. ಇಲ್ಲಿನ ಗ್ರಾಮ ದೇವರಾದ ಕಾವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಮದ್ಯಾಹ್ನ ಬೋಜನ ಸ್ವೀಕರಿಸಿ ವಿಶ್ರಾಂತಿ ಪಡೆದು ಪಾದಯಾತ್ರೆಯು ಅಮ್ಟಾಡಿ ಕಡೆ ತೆರಳಿತು. ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಧಾನ ಕಾರ‍್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ ,ಮಾಜಿ ಶಾಸಕರಾದ ರುಕ್ಮಯ ಪೂಜಾರಿ,ಪದ್ಮನಾಭ ಕೊಟ್ಟಾರಿ, ಜಿ.ಪಂ ಸದಸ್ಯರಾದ ಕಮಾಲಕ್ಷಿ ಪೂಜಾರಿ, ತುಂಗಪ್ಪ ಬಂಗೇರಾ,ತಾ.ಪಂ ಸದಸ್ಯಯಶವಂತ ಪೊಳಲಿ, ಮಾಜಿ ಜಿ.ಪಂ ಸದಸ್ಯೆ ನಳಿನಿ.ಬಿ ಶೆಟ್ಟಿ ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ,ಉಪಾಧ್ಯಕ್ಷ ದೇವಪ್ಪ ಪೂಜಾರಿ,ಮಾಜಿ ಪುರಸಭಾ ಅಧ್ಯಕ್ಷ  ದಿನೇಶ್ ಭಂಡಾರಿ,ತನಿಯಪ್ಪ ಗೌಡ  ಕಾರ‍್ಯದರ್ಶಿಗಳಾದ ಸೀತರಾಮ ಪೂಜಾರಿ, ರಮಾನಾಥ ರಾಯಿ, ಗಣೇಶ್ ರೈ ಮಾಣಿ,ಎಸ್.ಸಿ ಮೊರ್ಚಾ ಜಿಲ್ಲಾಧ್ಯಕ್ಷದಿನೇಶ್ ಅಮ್ಟೂರು, ಜಿಲ್ಲಾ ಸಮಿತಿ ಸದಸ್ಯ ರೋನಾಲ್ಡ್ ಡಿ ಸೋಜಾ,  ಯುವಮೋರ್ಚಾದ ವಜ್ರನಾಥ ಕಲ್ಲಡ್ಕ, ಸಂತೋಷ್ ರಾಯಿಬೆಟ್ಟು,ಸುದರ್ಶನ್ ಬಜ,ದಿನೇಶ್ ಶೆಟ್ಟಿ ದಂಬೆದಾರು,ಸುರೇಶ್ ಕೋಟ್ಯಾನ್,ಸಂಪತ್ ಕೋಟ್ಯಾನ್, ಕಾರ್ತಿಕ್ ಬಳ್ಳಾಲ್,ಲೋಕೇಶ್ ಭರಣಿ,ಸುಕೇಶ್ ಚೌಟ ,ತಿರುಲೇಶ್,ಸಾಕೇತ್ ಶೆಟ್ಟಿ,ಕಿಶೋರ್ ಪಲ್ಲಿಪಾಡಿ,ಪಂಚಾಯತ್ ಅಧ್ಯಕ್ಷ ಚಂದ್ರಾವತಿ,ಹರೀಶ್ ಶೆಟ್ಟಿ ಪಡು, ಉಪಾಧ್ಯಕ್ಷರಾದ ಚಂದ್ರಶೇಖರ್ ರಾವ್, ಬಿಜೆಪಿ ಅಧ್ಯಕ್ಷ ಗೋಪಾಲ ಪೂಜಾರಿ,ಜನಾರ್ಧನ ಕೊಟ್ಟಾರಿ ಪಕ್ಷದ ಪ್ರಮುಖರುಗಳಾದ ನಂದರಾಮ ರೈ,ಪ್ರಕಾಶ್ ಬೆಳ್ಳೂರು,ರಮೆಶ್ ಬಟ್ಟಾಜೆ,ಗುಣಪಾಲ ಶೆಟ್ಟಿ,ಸವಿತಾ ಶೆಟ್ಟಿ,ಉಮೇಶ್ ಶೆಟ್ಟಿ ವೇದಾವತಿ,ಶಶಿಕಿರಣ್,ಭಾರತಿ ಚೌಟ, ಪ್ರಸನ್ನ ಭಂಡಾರಿ,ಪ್ರದೀಪ್ ಮಾರ್ಲ, ಯಶವಂತ ಅಡಪ,ದರ್ಮಣ,ಯಶೋಧ, ಅನುಪ್ ಸುಮಿತ್ ಫೆರ್ನಾಂಡಿಸ್,ಅಶ್ವತ್ ಬಾಳಿಕೆ ಮತ್ತು ಪಕ್ಷದ  ಕಾರ‍್ಯಕರ್ತರು  ಭಾಗವಹಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts