ಯಕ್ಷಮಿತ್ರರು ಕೈಕಂಬ, ಬಿ.ಸಿ.ರೋಡು ತಂಡದ ಆಶ್ರಯದಲ್ಲಿ 10 ನೇ ವರ್ಷದ ಯಕ್ಷಗಾನ ಕಾರ್ಯಕ್ರಮ ಬಿ.ಸಿ.ರೋಡಿನ ಹೋಟೆಲ್ ರಂಗೋಲಿ ಹೊರಾಂಗಣದಲ್ಲಿ ಜನವರಿ 25ರಂದು ಸಂಜೆ 6ರಿಂದ 11ವರೆಗೆ ನಡೆಯಲಿದೆ.
ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರು ವೇದೋದ್ಧರಣ, ಮಾಯಾ ಶೂರ್ಪನಖಿ, ಕಂಸ ವಿವಾಹ ಎಂಬ ಕಥಾಭಾಗವನ್ನು ಆಡಿತೋರಿಸಲಿರುವರು. ಈ ಸಂದರ್ಭ ಖ್ಯಾತ ಕಲಾವಿದ ಸುಬ್ರಾಯ ಹೊಳ್ಳ ಕಾಸರಗೋಡು ಅವರನ್ನು ಮುಂಬಯಿಯ ಭಾಸ್ಕರ ಶೆಟ್ಟಿ ಪರಾರಿಗುತ್ತು ಸನ್ಮಾನಿಸುವರು ಎಂದು ಯಕ್ಷಮಿತ್ರರು ಕೈಕಂಬದ ಪ್ರಕಟಣೆ ತಿಳಿಸಿದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…