ವಿಟ್ಲ

ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ ಅಭೂತಪೂರ್ವ ಹಸಿರುವಾಣಿ ಮೆರವಣಿಗೆ


ಜ.26 ಮತ್ತು 27 ರಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದಲ್ಲಿ ನಡೆಯುವ ಶ್ರೀ ಒಡಿಯೂರು ರಥೋತ್ಸವ-ತುಳುನಾಡ್ದ ಜಾತ್ರೆ 2018ರ ಅಂಗವಾಗಿ ಮಂಗಳವಾರ ಮಂಗಳೂರು ಶ್ರೀಮಂಗಳಾದೇವಿ ದೇವಸ್ಥಾನದಿಂದ ಶ್ರೀ ಕ್ಷೇತ್ರದ ತನಕ ಹಸಿರುವಾಣಿ ವಾಹನ ಮೆರವಣಿಗೆ ನಡೆಯಿತು.

ಉಡುಪಿ, ಮಣಿಪಾಲ, ಕಾರ್ಕಳ, ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಸುಳ್ಯ, ಬಂಟ್ವಾಳವ್ಯಾಪ್ತಿಯ ಶ್ರೀಗುರುದೇವ ಬಂಧುಗಳು ಈ ವಾಹನ ಜಾಥಾದಲ್ಲಿ ಪಾಲ್ಗೊಂಡರು.

ಜಾಹೀರಾತು

ಮಂಗಳಾದೇವಿಯಿಂದ 10 ಗಂಟೆಗೆ ಹೊರಟ ಹಸಿರುವಾಣಿ ಮೆರವಣಿಗೆ ಬಳಿಕ ಫರಂಗಿಪೇಟೆ ಬಿ.ಸಿ.ರೋಡು ಆಗಿ ಕಲ್ಲಡ್ಕ ಮೂಲಕ ಮಧ್ಯಾಹ್ನ 12.30 ಗಂಟೆಗೆ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಒಟ್ಟು ಸೇರಿತು. ದೇಗುಲದಲ್ಲಿ ಆಗಮಿಸಿದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ವಿಟ್ಲದಿಂದ ಶ್ರೀ ಕ್ಷೇತ್ರ ಒಡಿಯೂರಿಗೆ ಸಾಗಿದ ಮೆರವಣಿಗೆ ಸಂಜೆ ವೇಳೆ ನೂರಾರು ಭಕ್ತರ ಸಮ್ಮುಖ ಸಮರ್ಪಣ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು, ದೇವಾಡಿಗ, ಕಾರ್‍ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ, ಒಡಿಯೂರುಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ, ಉಡುಪಿ ವಲಯಾಧ್ಯಕ್ಷ ಪ್ರಭಾಕರ ಶೆಟ್ಟಿ ಮಣಿಪಾಲ, ಒಡಿಯೂರು ತುಳು ಕೂಟದ ಅಧ್ಯಕ್ಷ ಹೆಚ್.ಕೆ.ಪುರುಷೋತ್ತಮ, ಮಂಗಳೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಜಯಂತ್ ಜೆ. ಕೋಟ್ಯಾನ್, ಪುತ್ತೂರು ಗುರುದೇವ ಸೇವಾ ಬಳಗದ ಅಧ್ಯಕ್ಷ ಮೋನಪ್ಪ ಪೂಜಾರಿ, ಸುಳ್ಯ ಗುರುದೇವ ಸೇವಾ ಬಳಗದ ಅಧ್ಯಕ್ಷ ರಾಧಾಕೃಷ್ಣ ಪಕ್ಕಳ, ವಿಟ್ಲ ಮಂಡಲ ಗ್ರಾಮ ವಿಕಾಸ ಯೋಜನೆಯ ಅಧ್ಯಕ್ಷ ಸದಾಶಿವ ಶೆಟ್ಟಿ ಅಳಿಕೆ, ಕಾರ್‍ಯದರ್ಶಿ ಸುನಿಲ್ ವಿಟ್ಲ, ಪುತ್ತೂರು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ನಯನಾ ರೈ, ಕಾರ್‍ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ಹಸಿರುವಾಣಿ ಸಮಿತಿಯ ಸಂಚಾಲಕ ದೇವಿಪ್ರಸಾದ್ ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ಅಜಿತ್‌ನಾಥ್ ಶೆಟ್ಟಿ, ಒಡಿಯೂರು ರಥಯಾತ್ರೆ ಸಮಿತಿಯ ಸಂಚಾಲಕ ಸುದರ್ಶನ ಆಳ್ವಾ ಅನೆಯಾಲಗುತ್ತು, ಪ್ರಮುಖರಾದ ವಾಸುದೇವ ಕೊಟ್ಟಾರಿ, ವೇಣುಗೋಪಾಲ ಮಾರ್ಲ, ಬಿ.ಕೆ. ಚಂದ್ರಶೇಖರ್, ಉಗ್ಗಪ್ಪ ಶೆಟ್ಟಿ, ದೇವಪ್ಪ ನೋಂಡಾ ಪುತ್ತೂರು, ಜಯಪ್ರಕಾಶ್ ಶೆಟ್ಟಿ ನೂಜಿಬೈಲು,ಒಡಿಯೂರು ಶ್ರೀಗ್ರಾಮ ವಿಕಾಸ ಯೋಜನೆಯ ಮಂಗಳೂರು ವಿಸ್ತರಣಾಧಿಕಾರಿಗಳಾದ, ವಿಶ್ವನಾಥ ಶೆಟ್ಟಿ ಮಂಗಳೂರು, ನವೀನ್ ಶೆಟ್ಟಿ, ಸುರೇಶ್ ಶೆಟ್ಟಿ ಮುಗೆರೋಡಿ, ಸದಾಶಿವ ಅಳಿಕೆ, ಯಶೋಧರ ಸಾಲ್ಯಾನ್ ಬೆಳ್ತಂಗಡಿ, ಮುರಳೀಧರ ಕಾರ್ಕಳ, ಯೋಜನೆಯ ಸಂಯೋಜಕರು, ಸೇವಾದೀಕ್ಷಿತರು ಭಾಗವಹಿಸಿದ್ದರು.

ಪ್ರಭಾಕರ ಶೆಟ್ಟಿ ಪೆರುವಾಯಿ, ರಾಜೇಂದ್ರನಾಥ ರೈ ಪೆರುವಾಯಿ, ಗೀತಾನಂದ ಶೆಟ್ಟಿ ಮಾನಿಲ, ಅಶೋಕ್ ಶೆಟ್ಟಿ ಮಾಣಿಲ ಬಿರ್ಕಾಪು, ಸನತ್ ಶೆಟ್ಟಿ ಅನಂತಾಡಿ, ವೆಂಕಪ್ಪ ರೈ ಕುರ್ಲೆತ್ತಿಮಾರ್, ರಾಜೇಂದ್ರ ರೈ ಬೈಲುಗುತ್ತು ಪುಣಚ, ಶೇಖರ್ ಮಲಾರು, ಕರಿಯ ಗಾಣಂತಿ ರಾಮಕುಂಜ, ನಿತ್ಯಾನಂದ ಶೆಟ್ಟಿ ಪುತ್ತೂರು, ಒಡಿಯೂರು ಶ್ರೀ ವಿವಿದ್ದೋದ್ದೇಶ ಸೌಹಾರ್ದ ಸಹಕಾರಿಯ ವಿಟ್ಲ ಶಾಖೆ ಮ್ಯಾನೇಜರ್ ಸದಾಶಿವ ಶೆಟ್ಟಿ, ಸಿಬ್ಬಂದಿಗಳು ಸಹಕರಿಸಿದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ