ಮಾಣಿ ಯುವಕ ಮಂಡಲದ ವತಿಯಿಂದ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ನ ಸಹಭಾಗಿತ್ವದಲ್ಲಿ ದಿ. ಜಗತ್ಪಾಲ ಹೆಗ್ಡೆ, ದಿ.ಯಶೋಧರ್ ಆಚಾರ್ಯ, ದಿ.ಲಿಂಗಪ್ಪ ನಾಯಕ್ ಅವರುಗಳ ಸ್ಮರಣಾರ್ಥವಾಗಿ “ಯುವಕ ಮಂಡಲ ಟ್ರೋಫಿ” ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟವು ಇಲ್ಲಿನ ಗಾಂಧಿ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪಂದ್ಯಾಟಕ್ಕೆ ಶುಭ ಹಾರೈಸಿದರು. ಮಾಣಿ ಉಳ್ಳಾಲ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಸಚಿನ್ ರೈ ಮಾಣಿಗುತ್ತು ಅವರು ಪಂದ್ಯಾಟವನ್ನು ಉದ್ಘಾಟಿಸಿದರು.
ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಮಂಜುಳಾ ಮಾವೆ, ಎಂ.ಎಸ್.ಮುಹಮ್ಮದ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಪಿಯೂಸ್ ರೋಡ್ರಿಗಸ್, ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಬಂಟ್ವಾಳ ಎಪಿಎಂಸಿ ಉಪಾಧ್ಯಕ್ಷ ಚಂದ್ರಶೇಖರ ಪೂಜಾರಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ತಾಪಂ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಮಾಧವ ಮಾವೆ, ತಾಪಂ ಸದಸ್ಯೆ ಮಂಜುಳಾ, ಕ್ರೀಡಾಪಟು ಉದಯ ಚೌಟ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಂತಿ ಪೂಜಾರಿ, ಬಂಟ್ವಾಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಕೊರಗಪ್ಪ ಪೂಜಾರಿ, ಡಾ.ಶ್ರೀನಾಥ್ ಆಳ್ವ ಮಾಣಿ, ದೈಹಿಕ ಶಿಕ್ಷಕ ಗಂಗಾಧರ್ ರೈ, ಬಿ.ಜಗನಾಥ ಚೌಟ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಾಣಿ ಯುವಕ ಮಂಡಲದ ಗೌರವಾಧ್ಯಕ್ಷ ನಾಗರಾಜ ಶೆಟ್ಟಿ ಸಾಗು, ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಜಗದೀಶ್ವರ ಜೈನ್, ಕೋಶಾಧಿಕಾರಿ ನಾಗರಾಜ ಪೂಜಾರಿ, ದಯಾನಂದ ಪೂಜಾರಿ, ನೆಟ್ಲ ಮುಡ್ನೂರು ಗ್ರಾಪಂ ಸದಸ್ಯ ಲತೀಫ್ ನೇರಳಕಟ್ಟೆ, ಹಮೀದ್ ಇನಾಮ್ ಮಾಣಿ, ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ತೀರ್ಪುಗಾರ ಮಂಡಳಿಯ ಸಂಚಾಲಕ ಕೃಷ್ಣಪ್ಪ ಬಂಗೇರ, ಹಬೀಕ್ ಕೊಡಾಜೆ, ಮಾಣಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ವಿಕೇಶ್ ಶೆಟ್ಟಿ, ದಾಮೋದರರು ಪೈ, ಮಜೀದ್ ಮಾಣಿ, ಅಬ್ದುಲ್ ಕರೀಂ ಮೂಸಾ, ಕುಶಲ ಎಂ.ಪೆರಾಜೆ, ಬೇಬಿ ಸುವರ್ಣ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರೊ ಕಬಡ್ಡಿ ಆಟಗಾರ ಪ್ರಶಾಂತ್ ರೈ ಮತ್ತು ಇಸಾಕ್ ಅವರನ್ನು ಅಭಿನಂದಿಸಲಾಯಿತು ಹಾಗೂ ಬಿ.ಮೊಹಿಯುದ್ದೀನ್ ಅವರನ್ನು ಸನ್ಮಾನಿಸಲಾಯಿತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಾಲಕೃಷ್ಣ ಕೊಡಾಜೆ ಸ್ವಾಗತಿಸಿ, ವಂದಿಸಿದರು. ಮುಹಮ್ಮದ್ ಮಾಣಿ ಹಾಗೂ ದಿನೇಶ್ ನಾವಿರುವ ನಿರೂಪಿಸಿದರು. ವಿದ್ಯಾಶಂಕರ ವಿಟ್ಲ, ಬಶೀರ್ ಕಲ್ಪನೆ, ಪುರುಷೋತ್ತಮ ಕೋಲ್ಪೆ, ಹರೀಶ ನರಿಕೊಂಬು, ಆಸಿಫ್, ರವಿ ಅಂಚನ್, ಸುಬ್ರಾಯ ಕಾಮತ್ ತೀರ್ಪುಗಾರರಾಗಿ ಸಹಕರಿಸಿದರು.
ಫಲಿತಾಂಶ:
ಮುಕ್ತ ವಿಭಾಗ: ವರುಣ್ ಬೆಳ್ತಂಗಡಿ ಪ್ರಥಮ, ಆಳ್ವಾಸ್ ಮೂಡಬಿದಿರೆ ದ್ವಿತೀಯ, ವಿಜಯಲಕ್ಷ್ಮೀ ಬಿ.ಸಿ.ರೋಡ್ ತೃತೀಯ, ಮಹಾಲಿಂಗೇಶ್ವರ ಉಚ್ಚಿಲ ಚತುರ್ಥ ಸ್ಥಾನ ಪಡೆದುಕೊಂಡಿತು. ಆಶಿಕ್, ಪ್ರವೀಣ್ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು.
೫೮ ಕೆ.ಜಿ.ವಿಭಾಗ: ಎನ್ ಎಚ್ ಎಸ್ ಬಂಗೇರುಕಟ್ಟೆ ಪ್ರಥಮ, ಜಯ ಹನುಮಾನ್ ದ್ವಿತೀಯ, ಪಟ್ಲ ಫ್ರೆಂಡ್ಸ್ ಓಟದಲ್ಲಿ ತೃತೀಯ, ತುಳುನಾಡ ಫೈಟರ್ಸ್ ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಅಝೀಝ್, ನಾಸಿರ್, ರಘು ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.
ಸ್ಥಳೀಯ ವಿಭಾಗ: ವಿಷ್ಣು ಪೆರಾಜೆ ಪ್ರಥಮ, ವಿಷ್ಣು ಮೂರ್ತಿ ಪದರಚನೆ ದ್ವಿತೀಯ ಸ್ಥಾನ ಪಡೆದುಕೊಂಡಿತು. ದೀಪಕ್, ದಿನೇಶ್, ಅರ್ಶಿತ್ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು.