ಬಂಟ್ವಾಳ

ಬಂಟ್ವಾಳ ಪರಿವರ್ತನೆಯ ಬಿಜೆಪಿಯ ನಡಿಗೆ ಹತ್ತನೇ ದಿನ

www.bantwalnews.com

ಬಿಜೆಪಿಯ ಬಂಟ್ವಾಳ ಕ್ಷೇತ್ರ ಸಮಿತಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪರಿವರ್ತನೆಗೆ ನಡಿಗೆ ಪಾದಯಾತ್ರೆ ಮಂಗಳವಾರ ಹತ್ತನೇ ದಿನಕ್ಕೆ ಕಾಲಿಟ್ಟಿತು.

ಸೋಮವಾರ ಸಂಜೆ ಕಲ್ಲಡ್ಕದಲ್ಲಿ ನಡೆದ ಸಾರ್ವಜನಿಕ ಸಭೆ ಬಳಿಕ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮನೆಯಲ್ಲಿ ವಾಸ್ತವ್ಯ ಹೂಡಿದ ರಾಜೇಶ್ ನಾಯ್ಕ್, ಬಳಿಕ ಬೆಳಗ್ಗೆ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿದರು.

ಬಾಳ್ತಿಲ ಗ್ರಾಮಕ್ಕೆ ಸಂಚರಿಸಿದ ನಡಿಗೆಯನ್ನು ಜಿ.ಪಂ ಮಾಜಿ ಸದಸ್ಯ ಚೆನ್ನಪ್ಪ ಆರ್‌ಕೋಟ್ಯಾನ್ , ಬಾಳ್ತಿಲ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ವಿಠಲ ನಾಯ್ಕ್, ಬಿಜೆಪಿ ಅಧ್ಯಕ್ಷರಾದ ಲೋಕಾನಂದ ಪೂಜಾರಿ ಏಳ್ತಿಮಾರ್ ಮತ್ತು ಬಾಳ್ತಿಲ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿದರು. ನಂತರ ಶಂಭೂರಿನ ಕಕ್ಕೆಮಜಲಿನಲ್ಲಿ ಗೋಳ್ತಮಜಲು ಶಕ್ತಿ ಕೇಂದ್ರ ಅಧ್ಯಕ್ಷರಾದ ಆನಂದ ಶಂಭೂರು, ಪಂಚಾಯತ್‌ಅಧ್ಯಕ್ಷರಾಧ ಯಶೋಧರ ಕರ್ಬೆಟ್ಟು, ಬಿಜೆಪಿ ಅಧ್ಯಕ್ಷರಾದ ಪುರುಷೋತ್ತಮ ಎಸ್ ಮತ್ತು ನರಿಕೊಂಬು, ಶಂಭೂರುವಿನ ಬಿಜೆಪಿ ಕಾರ್ಯಕರ್ತರು ಸ್ವಾಗತಿಸಿ, ಪಾದಯಾತ್ರೆಯೊಂದಿಗೆ ಪಾಣೆಮಂಗಳೂರು ಕಡೆ ಹೆಜ್ಜೆ ಹಾಕಿದರು,

ದಾರಿ ಮಧ್ಯದಲ್ಲಿ ಮೊಗರ್ನಾಡು ಜಂಕ್ಷನ್‌ನಲ್ಲಿ ಕೇಶವ ಶಾಂತಿಯವರು ಪಾದಯಾತ್ರೆಯ ಸಾರಥ್ಯ ವಹಿಸಿಕೊಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಹೂಹಾರ ಹಾಕಿ ಶುಭಕೋರಿದರು. ನಂತರ ಪಾದಯಾತ್ರೆಯ ಮೂಲಕ ಮೊಗರ್ನಾಡು ಲಕ್ಷ್ಮೀನರಸಿಂಹ ದೇಗುಲಕ್ಕೆ  ಭೇಟಿ ನೀಡಿತು. ಪಾಣೆಮಂಗಳೂರಿಗೆ ತಲುಪಿದಾಗ ಕಲ್ಲುರ್ಟಿ ಗುಡಿಯಲ್ಲಿ ಉಮೇಶ್ ಸಫಲ್ಯ ಅವರು ಪ್ರಾರ್ಥಿಸಿ ಪಾದಯಾತ್ರೆಗೆ ಶುಭಕೋರಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಪ್ರಧಾನ ಕಾರ್‍ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಜಿ.ಪಂ ಸದಸ್ಯರಾದ ಕಮಾಲಕ್ಷಿ ಪೂಜಾರಿ, ತಾ.ಪಂ ಸದಸ್ಯರಾದ ಲಕ್ಷ್ಮೀ ಗೋಪಾಲಾಚಾರ್ಯ, ಪುರಸಭಾ ಸದಸ್ಯರಾದ ಸಂಧ್ಯಾ ನಾಯ್ಕ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ,  ಕಾರ್ಯದರ್ಶಿಗಳಾದ ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಗಣೇಶ್‌ ರೈ ಮಾಣಿ,ಎಸ್.ಸಿ ಮೊರ್ಚಾ ಜಿಲ್ಲಾಧ್ಯಕ್ಷರಾದ ದಿನೇಶ್‌ ಅಮ್ಟೂರು, ಜಿಲ್ಲಾ ಸಮಿತಿ ಸದಸ್ಯರಾದ ರೋನಾಲ್ಡ್ ಡಿ ಸೋಜಾ, ರೈತಮೋರ್ಚಾದ ತನಿಯಪ್ಪಗೌಡ, ಪುರುಷೋತ್ತಮ ಶೆಟ್ಟಿ ವಾಮದಪವು, ಅಣ್ಣು ಪೂಜಾರಿ, ಪಿ.ಎಸ್.ಮೋಹನ್, ಎಸ್.ಸಿ ಮೋರ್ಚಾದ ರಮೇಶ್‌ ಕುದ್ರೆಬೆಟ್ಟು, ಲೋಕಯ್ಯ, ಯುವಮೋರ್ಚಾದ ತಾಲೂಕು ಅಧ್ಯಕ್ಷ ವಜ್ರನಾಥ ಕಲ್ಲಡ್ಕ, ಸಂತೋಷ್‌ ರಾಯಿಬೆಟ್ಟು, ನಾರಾಯಣ ಪೂಜಾರಿ ದರ್ಖಾಸು, ಸುರೇಶ್‌ ಕೋಟ್ಯಾನ್, ಅಶೋಕ್‌ ಮರ್ದೊಳಿ, ಸಂಪತ್ ಕೋಟ್ಯಾನ್, ಕಾರ್ತಿಕ್ ಬಳ್ಳಾಲ್, ಪಂಚಾಯತ್‌ ಉಪಾಧ್ಯಕ್ಷರಾದ ಪೂರ್ಣಿಮಾ, ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ, ದಿವಾಕರ ಶಂಭೂರು, ಶಿವರಾಜ್, ರಂಜಿತ್‌ ಕೆದ್ದೆಲ್, ಚಂದ್ರಾವತಿ, ಪೂರ್ಣಿಮ, ಉದಯ ಶಂಭೂರು, ವಸಂತ ಬೀಮಗದ್ದೆ, ಹೇಮಲತಾ, ಗೀತಾ, ವಿಶಾಲಾಕ್ಷಿ, ಜಯ ಶಂಭೂರು, ಪಕ್ಷದ ಪ್ರಮಖರಾದ ಪದ್ಮನಾಭ ಮಯ್ಯ, ಲೋಹಿತಾಕ್ಷ ಮರ್ದೊಳಿ ಪ್ರಕಾಶ್‌ ಕೋಡಿಮಜಲ್, ಡೊಂಬಯ ಟೈಲರ್, ಆನಂದ ಶೆಟ್ಟಿ,ಸುರೇಶ್ ಶೆಟ್ಟಿ ಕಾಂದಿಲ, ವೆಂಕಟ್ರಾಯ ಪ್ರಭು, ವಸಂತ ಸಾಲ್ಯಾನ್, ಯತಿನ್‌ಕುಮಾರ್, ಸುಜಿತ್‌ ಕೊಟ್ಟಾರಿ, ಜನಾರ್ಧನ ಬೊಂಡಾಲ, ಕ.ಕೃಷ್ಣಪ್ಪ, ಬಾಲಕೃಷ್ಣ ಆಳ್ವಾ, ಸುಂದರ ಸಾಲ್ಯಾನ್, ಲೋಲಾಕ್ಷಿ,ಸ್ವಾತಿ, ಜಯಂತಿ ವರದರಾಜ್,ಮಹೇಶ್‌ರಾಯಸ ,ಉದಯ ಶೆಟ್ಟಿ, ಯತೀಶ್ ಶೆಟ್ಟಿ, ದೇವದಾಸ ನಾಯಿಲ,ರಘು ಸಫಲ್ಯ, ಸುದರ್ಶನ್ ಮೆಲ್ಕಾರ್, ಸಚಿನ್ ಮೆಲ್ಕಾರ್, ಕಮಲಾಕ್ಷ ಶಂಭೂರು, ಚಂದ್ರಹಾಸಗಟ್ಟಿ, ಜ್ಞಾನೇಶ್ವರ ಪ್ರಭು, ದಿನೇಶ್ ಬಂಗೇರಾ, ಪುರುಷೋತ್ತಮ ನಾಟಿ,ಕಮಲಾಕ್ಷ ಶಾಂತಿಲ,ರಾಜೇಶಆಚಾರ್ಯ,ಚಂದ್ರಹಾಸ ಕೋಡಿ, ಕೇಶವ ಪಿ.ಎಚ್ ಮತ್ತಿತರರು ಹಾಜರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts