ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವದ ದಿನ ವಿಟ್ಲದ ಕಚೇರಿ, ಅಂಗಡಿ ಹಾಗೂ ಕೋಣೆಗಳಿಗೆ ನುಗ್ಗಿದ ಕಳ್ಳರು ಸರಣಿ ಕಳ್ಳತನ ಮಾಡಿದ್ದಾರೆ. ಮಹಿಳೆಯೊಬ್ಬರ ಕುತ್ತಿಗೆಯಿಂದ ಸರ ಎಗರಿಸಿದ ಪ್ರಕರಣವೂ ಭಾನುವಾರ ರಾತ್ರಿ ನಡೆದಿದೆ.
ಏನೆಲ್ಲ ನಡೆದಿದೆ?
ಜಾತ್ರೋತ್ಸವಕ್ಕೆ ಆಗಮಿಸಿದ್ದ ಕೇಪು ಗ್ರಾಮದ ಮಹಿಳೆಯೊಬ್ಬರ ಕುತ್ತಿಗೆಯಿಂದ ಮೂರುವರೆ ಪವನ್ ತೂಕದ ಚಿನ್ನದ ಸರ ಎಗರಿಸಿದ್ದಾರೆ.
ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್‌ನಲ್ಲಿರುವ ವಕೀಲ ಉಮ್ಮರ್ ಅವರ ಕಚೇರಿಯ ಶಟರ್ ಮುರಿದು ಒಳನುಗ್ಗಿದ ಕಳ್ಳರು ಸ್ವತ್ತುಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಕೈಗೆ ಏನೂ ಸಿಗದಿದ್ದಾಗ ಬರಿಗೈಯಲ್ಲಿ ಹಿಂತಿರುಗಿ ಅದರ ಪಕ್ಕದಲ್ಲಿರುವ ಪ್ಯಾರಡೈಸ್ ಹೋಟೆಲ್‌ಗೆ ನುಗ್ಗಿದ ಕಳ್ಳರು ಅಲ್ಲಿಂದ ನಗದು ದೋಚಿದ್ದಾರೆ.
ಬಳಿಕ ವಿಟ್ಲದ ಸ್ಪೈಸಿ ಹೋಟೆಲ್‌ನ ಸಿಬ್ಬಂದಿಗಳ ಕೋಣೆಗೆ ನುಗ್ಗಿದ ಕಳ್ಳರು ಅಲ್ಲಿಂದ ನಾಲ್ಕು ಮೊಬೈಲ್ ಕದ್ದೊಯ್ದಿದ್ದಾರೆ. ಸ್ಥಳದಲ್ಲಿ ಕಳ್ಳತನಕ್ಕೆ ಬಳಸಿದ ಮಾರಕಾಯುಧಗಳು ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.