ವಿಟ್ಲ

ಹಿರಿಯ ವಿದ್ವಾಂಸ ಪಾದೆಕಲ್ಲು ನರಸಿಂಹ ಭಟ್ ಇನ್ನಿಲ್ಲ

www.bantwalnews.com

ಜಾಹೀರಾತು

 

ತ್ರಿಭಾಷಾ ವಿದ್ವಾಂಸ, ತೌಲನಿಕ ಕಾವ್ಯಮೀಮಾಂಸೆಯ ಸಂಶೋಧಕ, ಕೃಷಿಕ, ಕರೋಪಾಡಿ ಗ್ರಾಮದ ಪಾದೆಕಲ್ಲು ನಿವಾಸಿ ಪಾದೆಕಲ್ಲು ನರಸಿಂಹ ಭಟ್ (83) .22ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಕನ್ನಡ, ಸಂಸ್ಕೃತ, ಆಂಗ್ಲಭಾಷಾ ವಿದ್ವಾಂಸರಾದ ಅವರು ಕಮ್ಮಜೆ ಸಂಸ್ಕೃತ ಪಾಠಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು ಮದರಾಸು ಸರಕಾರದ ಸಂಸ್ಕೃತ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ ವಿಷಯಗಳಲ್ಲಿ ಪದವೀಧರರಾದ ಅವರು ಮದರಾಸು ವಿವೇಕಾನಂದ ಕಾಲೇಜಿನಲ್ಲಿ ಸಂಸ್ಕೃತ ಎಂ..ಪೂರೈಸಿದ್ದು, ಆಗ ವಿಶ್ವವಿದ್ಯಾನಿಲಯದಲ್ಲೇ ಪ್ರಥಮ ಸ್ಥಾನ ಗಳಿಸಿದ್ದರು. ಮದರಾಸು, ಸಾಗರದಲ್ಲಿ ಉದ್ಯೋಗಿಯಾಗಿದ್ದ ಅವರು ಮೈಸೂರಿನ ಮಾನಸಗಂಗೋತ್ರಿಯ ಆಂಗ್ಲ ವಿಭಾಗದಲ್ಲಿ ತೌಲನಿಕ ಕಾವ್ಯಮೀಮಾಂಸೆಯ ಬಗೆಗೆ ಮೂರು ವರ್ಷ ಸಂಶೋಧನೆ ನಡೆಸಿದ್ದರು. ಸಾಹಿತ್ಯ, ದರ್ಶನ, ಸಾಮಾಜಿಕ, ಶೈಕ್ಷಣಿಕ ವಿಷಯಗಳ ಕುರಿತಾಗಿ ೪೦ಕ್ಕೂ ಅಽಕ ಲೇಖನಗಳು ವಿವಿಧ ಸಂಕಲನಗಳಲ್ಲಿ ಪ್ರಕಟವಾಗಿದ್ದವು. ಅವರು ವಿದ್ಯಾರ್ಥಿಗಳಿಗೆ, ವಿಶೇಷವಾಗಿ ಸ್ವೀಡನ್‌ನ ಕೆಮಿರಾ ಫ್ರೆಡ್‌ಮನ್ ಎಂಬ ಮಹಿಳೆಗೆ ಭಾರತೀಯ ಸೌಂದರ್ಯ ಮೀಮಾಂಸೆಯ ಕುರಿತು ಮಾರ್ಗದರ್ಶನ ನೀಡಿದ್ದರು. ಕೃಷಿಕರಾಗಿದ್ದ ಅವರ ಅನೇಕ ಕೃತಿಗಳು ಪ್ರಕಟಗೊಂಡಿವೆ. ಸಂಶೋಧನಾತ್ಮಕ ಕೃತಿ ಅಭಿನವಗುಪ್ತ, ದಿ| ಸೇಡಿಯಾಪು ಕೃಷ್ಣ ಭಟ್ ಅವರ ತಥ್ಯದರ್ಶನದ ಆಂಗ್ಲಾನುವಾದ ದಿ ಡಿಸ್ಕವರಿ ಆಫ್ ಫೇಕ್ಟ್, ಭಾರತೀಯ ಋಷಿ ಪರಂಪರೆ ಮತ್ತು ಸಂಸ್ಕೃತ ಸಾಹಿತ್ಯ, ಶಿಕ್ಷಣ ಶೋಧನ, ಭಾರತೀಯ ಕಾವ್ಯಮೀಮಾಂಸೆಯ ಹೊಸ ಹೊಳಹುಗಳು ಮೊದಲಾದ ಕೃತಿಗಳು ಪ್ರಕಟಗೊಂಡಿವೆ. ಅಲ್ಲದೇ ಹಲವಾರು ಕೃತಿಗಳ ಸಂಪಾದಕರಾಗಿದ್ದರು.

ಜಾಹೀರಾತು

ಅವರು ಬಂಟ್ವಾಳ ತಾಲೂಕು 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಮತ್ತು ಮಂಗಳೂರಿನ ಪುರಭವನದಲ್ಲಿ ..ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದರು. ದೇರಾಜೆ ಸ್ಮೃತಿ ಗೌರವ, ಸಿದ್ಧಮೂಲೆ ಶಂಕರನಾರಾಯಣ ಭಟ್ ಅವರ ಸಂಸ್ಥೆಯ ಶಂಕರ ಪ್ರಶಸ್ತಿ, ಉಂಡೆಮನೆ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿದೆ.

ಸಂತಾಪ : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ..ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ನರಸಿಂಹ ಭಟ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ