ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಗೆ ಎಸ್.ವಿ.ಎಸ್ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕರಾದ ರಾಜಮಣಿ ರಾಮಕುಂಜ ಪ್ಲಾಸ್ಟಿಕ್ ಮುಕ್ತ ಸಮಾಜದ ಅಗತ್ಯತೆಯ ಬಗ್ಗೆ ದೃಶ್ಯ ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ದಿನನಿತ್ಯ ನೋಡುವ ಪ್ರದೇಶಗಳ ಅವ್ಯವಸ್ಥೆಯನ್ನ ವಿವಿಧ ದೃಶ್ಯಗಳ ಮೂಲಕ ತೋರಿಸಿದ ಅವರು, ಅಮಾನವೀಯ ಪ್ರವೃತ್ತಿಯನ್ನು ಆಕ್ಷೇಪಿಸಿ ಇನ್ನಾದರೂ ಜಾಗೃತಿ ಆಗಬೇಕಾದುದು ಅನಿವಾರ್ಯವೆಂದರು. ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಎಸೆಯುವುದರಿಂದ ಪ್ರಾಣಿ ಸಹಿತವಾಗಿ ಮಾನವನ ಆರೋಗ್ಯದ ಮೇಲೆ ಬೀಳಬಹುದಾದ ಅಪಾಯಕಾರಿ ತೊಂದರೆಗಳನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|ಪ್ರಭಾಕರ ಭಟ್ ಕಲ್ಲಡ್ಕ ವಹಿಸಿದ್ದರು.
ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸುಕನ್ಯಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕ ಯತಿರಾಜ್ ವಂದಿಸಿದರು.