ಕೆದ್ದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿದ್ಯಾರತ್ನ ಕೆ.ರಮೇಶ ನಾಯಕ್ ರಾಯಿ ಅವರ ಸಾಧನಾ ಸಂಭ್ರಮ ಸಮಾರಂಭ ಜನವರಿ 27ರಂದು ಅಪರಾಹ್ನ 2 ಗಂಟೆಗೆ ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ನಡೆಯಲಿದೆ.
ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ನಾಯಕ್ ಅವರ ರಾಯಿಯ ಮನೆಯಲ್ಲಿ ನಿವ್ರತ್ತ ಶಿಕ್ಷಕ ಗಣೇಶ್ ನಾಯಕ್ ಕರ್ಪೆ ಬಿಡುಗಡೆ ಮಾಡಿದರು.
ರಮೇಶ್ ನಾಯಕ್ ಉಜಿರೆ, ಬಂಟ್ವಾಳ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು, ಬಂಟ್ವಾಳ ತಾಲೂಕು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಸಾಧನಾ ಸಂಭ್ರಮ ಸಮಿತಿ ಅಧ್ಯಕ್ಷ ಟಿ.ಶೇಷಪ್ಪ ಮೂಲ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್, ವಿಟ್ಲ ಅಧ್ಯಾಪಕರ ಸಹಕಾರಿ ಸಂಘದ ಉಪಾಧ್ಯಕ್ಷ ಕೆ.ಮೋನಪ್ಪ, ಸಾಧನಾ ಸಂಭ್ರಮ ಸಮಿತಿ ಪ್ರಮುಖರಾದ ನವೀನ್ ಪಿ.ಎಸ್., ಜಯರಾಮ್, ನಾರಾಯಣ ಸಿ.ಪೆರ್ನೆ, ಚಂದ್ರಶೇಖರ ಪ್ರಭು ಬಿ.ಸಿ.ರೋಡು, ಪ್ರಭಾಕರ ಪ್ರಭು, ಗಣೇಶ ನಾಯಕ್ ವಾಮದಪದವು, ಸಂತೋಷ್ ಕುಮಾರ್ ತುಂಬೆ ಮೊದಲಾದವರಿದ್ದರು. ಇದೇ ಸಂದರ್ಭ ರಮೇಶ್ ನಾಯಕ್ ಅವರಿಗೆ ಆಮಂತ್ರಣ ಪತ್ರ ನೀಡಿ ಸಮಾರಂಭಕ್ಕೆ ಆಹ್ವಾನಿಸಲಾಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…