ಗೋಳ್ತಮಜಲು ಗ್ರಾ.ಪಂ.ವ್ಯಾಪ್ತಿಯ ಅಮ್ಟೂರು ಗ್ರಾಮದ ರಾಯಪ್ಪಕೋಡಿ ಎಂಬಲ್ಲಿ ನಿರ್ಮಾಣ ವಾಗುತ್ತಿರುವ ರೈಲ್ವೆ ಒಳಸೇತುವೆಯ ಕಾಮಗಾರಿಯನ್ನು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ವೀಕ್ಷಿಸಿದರು.
ಬಳಿಕ ಅವರು ಅಲ್ಲಿನ ಕುಂದುಕೊರತೆಗಳ ಬಗ್ಗೆ ಸಾರ್ವಜನಿಕ ರ ಅಭಿಪ್ರಾಯ ಪಡೆದು ಸಮಸ್ಯೆ ಗಳ ಸರಿಪಡಿಸಲು ರೈಲ್ವೆ ಇಲಾಖೆಯ ಅಧಿಕಾರಗಳ ಸಭೆ ಕರೆಯುವುದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭ ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಮಾಜಿ ತಾ.ಪಂ.ಉಪಾಧ್ಯಕ್ಷ, ಎಸ್ ಸಿ ಮೋರ್ಚಾದ ಜಿಲ್ಲಾದ್ಯಕ್ಷ ದಿನೇಶ್ ಅಮ್ಟೂರು, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ, ಗೋಳ್ತಮಜಲು ಗ್ರಾಪಂ ಅದ್ಯಕ್ಷೆ ಜಯಲಕ್ಮೀ ಭಟ್, ಅಲ್ಪಸಂಖ್ಯಾತ ಮೋರ್ಚಾದ ಅದ್ಯಕ್ಷ ಗೋಳ್ತಮಜಲು ಗ್ರಾ.ಪಂ.ಉಪಾಧ್ಯಕ್ಷ ರಾದ ಮಹಮ್ಮದ್ ಮುಸ್ತಫಾ, ಯುವ ಮೋರ್ಚಾದ ಅದ್ಯಕ್ಷ ವಜ್ರ ನಾಥ ಕಲ್ಲಡ್ಕ, ಪಂಚಾಯತ್ ಸದಸ್ಯರಾದ ಗೋಪಾಲ ಪೂಜಾರಿ, ಗೋಪಾಲಕೃಷ್ಣ ಪೂವಳ, ಜಯಂತ ಗೌಡ, ಮಾಜಿ ಪಂ.ಸದಸ್ಯ ರಾದ ನೋಣಯ್ಯ ಪೂಜಾರಿ, ಮಾಜಿ ಪಂ.ಸದಸ್ಯ ನಿರಂಜನ ಜೈನ್, ಪ್ರಮುಖರಾದ ಮೋಹನ್ ರಾಜ್ ಚೌಟ, ಜಯ ಕಲ್ಲಡ್ಕ, ಶರತ್ ಕುಮಾರ್ , ಶರತ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…