www.bantwalnews.com
ಸಿಪಿಐ ಹಿರಿಯ ನಾಯಕ ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಬಿ.ವಿಶ್ವನಾಥ ನಾಯಕ್ (75) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಿಧನ ಹೊಂದಿದರು.
ಪತ್ನಿ ಮತ್ತು ಅಪಾರ ಬಂಧುಗಳನ್ನು ಅವರು ಅಗಲಿದ್ದಾರೆ. ಭಾರತ ಕಮ್ಯೂನಿಸ್ಟ್ ಪಕ್ಷದ ಹಿರಿಯ ಧುರೀಣರಾಗಿ, ಸಿಪಿಐ ರಾಜ್ಯ ಮಂಡಳಿ ಮಾಜಿ ಸದಸ್ಯ, ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ರಾಜ್ಯ ಬೀಡಿ ವರ್ಕರ್‍ಸ್ ಫೆಡರೇಶನ್(ಎಐಟಿಯುಸಿ)ನ ಪ್ರಧಾನ ಕಾರ್‍ಯದರ್ಶಿಯಾಗಿ ಅವರು ಸೇವೆ ಸಲ್ಲಿಸಿದ್ದರು. ಎಡ ಪಕ್ಷಗಳ ಮುಖಂಡ ಪಿ.ಸಂಜೀವ ಅವರ ನಿಧನ ವಾರ್ತೆ ತಿಳಿದು ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಿದ್ದರೂ ತೀವ್ರ ಹೃದಯಾಘಾತದಿಂದ ತಡ ರಾತ್ರಿ ನಿಧನರಾದರು.
ಕರ್ನಾಟಕ ಭೂಸುಧಾರಣಾ ಚಳುವಳಿಯಲ್ಲಿ ರೈತರನ್ನು ಸಕ್ರಿಯವಾಗಿ ಸಂಘಟಿಸಿ ಉಳುವವನಿಗೆ ಮತ್ತು ನಿವೇಶನ ರಹಿತರಿಗೆ ಭೂಮಿಯನ್ನು ತೆಗೆಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಂಟ್ವಾಳದ ಭೂನ್ಯಾಯ ಮಂಡಳಿಯ ಸದಸ್ಯರಾಗಿ, ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
89ರಿಂದ 90ರವರೆಗೆ ಅವರು ಪೌರಸಮಿತಿ ವತಿಯಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1984ರಲ್ಲಿ ಬಂಟ್ವಾಳ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ತಾಲೂಕು ಬೋರ್ಡ್ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು.
ಅಂತಿಮ ನಮನ:
ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯರೂ ಆದ ಡಾ. ಸಿದ್ದನಗೌಡ ಪಾಟೀಲ್, ಚಿಂತಕ ಡಾ. ಬಿ.ಶ್ರೀನಿವಾಸ ಕಕ್ಕಿಲ್ಲಾಯ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪದ್ಮ ಶೇಖರ ಜೈನ್, ಹಿರಿಯ ವಕೀಲರಾದ ಜೆ.ಆರ್ ನಾಯಕ್, ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಪುರಸಭಾ ಸದಸ್ಯರಾದ ಸದಾಶಿವ ಬಂಗೇರ, ಗಂಗಾಧರ ಪೂಜಾರಿ, ಎಐಟಿಯುಸಿ ರಾಜ್ಯ ಅಧ್ಯಕ್ಷ ಅನಂತ ಸುಬ್ಬರಾವ್, ಸಿಪಿಐ ಕಾಸರಗೋಡು ಜಿಲ್ಲಾ ನಾಯಕರಾದ ಜಯರಾಂ ಬಲ್ಲಂಗೋಡು, ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ವಿ.ಭಟ್ ಉಡುಪಿ, ಜಿಲ್ಲಾ ಕಾರ್‍ಯದರ್ಶಿ ಎಚ್.ವಿ.ರಾವ್, ಪಕ್ಷದ ಜಿಲ್ಲಾ ಕಾರ್‍ಯದರ್ಶಿ ವಿ.ಕುಕ್ಯಾನ್, ಜಿಲ್ಲಾ ಸಹಕಾರ್‍ಯದರ್ಶಿಗಳಾದ ವಿ.ಎಸ್.ಬೇರಿಂಜ, ಬಿ.ಶೇಖರ್, ಜಿಲ್ಲಾ ಕಾರ್‍ಯಕಾರಿ ಸಮಿತಿ ಸದಸ್ಯರುಗಳಾದ ಪ್ರಭಾಕರ್ ರಾವ್, ಆರ್ ಡಿ. ಸೋನ್ಸ್, ಸುರೇಶ್ ಕುಮಾರ್ ಬಂಟ್ವಾಳ್, ಜಿಲ್ಲಾ ಮಂಡಳಿ ಸದಸ್ಯರುಗಳಾದ ತಿಮ್ಮಪ್ಪ ಕೆ. ಕೆ.ಈಶ್ವರ್, ಸರಸ್ವತಿ ಕಡೇಶಿವಾಲಯ, ವಿಠಲ ಬಂಗೇರ, ಪ್ರೇಮನಾಥ ಕೆ. ಬಾಬು ಭಂಡಾರಿ, ಸಿಪಿಐ(ಎಂ) ಜಿಲ್ಲಾ ಕಾರ್‍ಯದರ್ಶಿ ವಸಂತ ಆಚಾರಿ, ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ರಮಣಿ ಮೂಡಬಿದ್ರೆ, ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಸಂತೋಷ್ ಬಜಾಲ್, ಸಿಪಿಎಂ ತಾಲೂಕು ಕಾರ್‍ಯದರ್ಶಿ ರಾಮಣ್ಣ ವಿಟ್ಲ, ಬಿ.ಸಂಜೀವ ಬಂಗೇರ, ಮಚ್ಚೇಂದ್ರ ಸಾಲ್ಯಾನ್, ಮುಂತಾದವರು ಅಂತಿಮ ದರ್ಶನ ಪಡೆದು ಮೃತರಿಗೆ ಅಂತಿಮ ನಮನ ಸಲ್ಲಿಸಿದರು.