ವೀರಕಂಭ ಗ್ರಾಮದ ಮಂಗಳಪದವು ಎಂಬಲ್ಲಿರುವ ಬಾಡಿಗೆ ಮನೆಗೆ ಹಾಗೂ ವರ್ಕ್ಸ್ ಶಾಪ್ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ.
ಮಹಾಬಲ ಆಚಾರ್ಯ ಅವರಿಗೆ ಸೇರಿದ ಕಟ್ಟಡದಲ್ಲಿ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಈ ಕಟ್ಟಡದಲ್ಲಿ ಪದ್ಮನಾಭ ಭಂಡಾರಿ ಅವರು ವಾಸಿಸುವ ಬಾಡಿಗೆ ಮನೆ ಹಾಗೂ ಪುರಂದರ ಅಂಚನ್ ಅವರ ವೆಲ್ಡಿಂಗ್ ವರ್ಕ್ಸ್ ಶಾಫ್ ಕಾರ್ಯಾಚರಿಸುತ್ತಿದೆ. ಬೆಂಕಿಯ ಕೆನ್ನಾಲಿಗೆ ಬಾಡಿಗೆಯ ಹಂಚು, ಪಕ್ಕಾಸು, ಟಿ.ವಿ, ವೈಯರಿಂಗ್ ಮೊದಲಾದ ಉಪಕರಣಗಳು ಸುಟ್ಟು ಭಸ್ಮವಾಗಿದೆ. ಅದಲ್ಲದೇ ಪುರಂದರ ಅಂಚನ್ ಅವರ ವರ್ಕ್ಸ್ ಶಾಫ್‌ನಲ್ಲಿರುವ ವಿವಿಧ ಉಪಕರಣಗಳು ಕೂಡಾ ನಾಶ ಹೊಂದಿದೆ. ಘಟನೆ ವೇಳೆ ಯಾರೂ ಇರಲಿಲ್ಲ. ವರ್ಕ್ಸ್ ಶಾಫ್ ಕೆಲಸದವರು ಅಂಗಡಿ ಬಂದಾಗ ಈ ಬೆಂಕಿ ಕಾಣಿಸಿಕೊಂಡಿರುವುದನ್ನು ಗಮನಿಸಿ ಇತರರಿಗೆ ಮಾಹಿತಿ ಬೆಂಕಿ ನಂದಿಸಿದರು.
ಘಟನಾ ಸ್ಥಳಕ್ಕೆ ವೀರಕಂಬ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಹಾಗೂ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ ವಿಟ್ಲ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)