ವಾಮದಪದವು

ಗ್ರಾಮೀಣ ಬಂಟ್ವಾಳದಲ್ಲಿ ಬಿಜೆಪಿ ನಡಿಗೆ

www.bantwalnews.com

ಬಂಟ್ವಾಳ ದ ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆಯ ಐದನೇ ದಿನವಾದ ಗುರುವಾರ ಬಿಜೆಪಿ ಹಿರಿಯ ಕಾರ್ಯಕರ್ತ ಎಪಿಎಂಸಿ ಸದಸ್ಯರಾದ ಕ್ಷೇತ್ರ ಬಿಜೆಪಿ ಉಪಾದ್ಯಕ್ಷ ಹರಿಶ್ಚಂದ್ರ ಪೂಜಾರಿ ಅವರ ಮನೆಗೆ ರಾಜೇಶ್ ನಾಯಕ್  ಸಹಿತ ಪ್ರಮುಖ ಬಿಜೆಪಿ ಕಾರ್ಯಕರ್ತರು ಭೇಟಿ ನೀಡಿ ಅರೋಗ್ಯ ವಿಚಾರಿಸಿದರು.

ಜನವರಿ 14ರಂದು ಆರಂಭಗೊಂಡ ಬಿಜೆಪಿ ಬಂಟ್ವಾಳದ ಪರಿವರ್ತನೆಗೆ ನಮ್ಮ ನಡಿಗೆ ಪಾದಯಾತ್ರೆ ಇದೀಗ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮ ಸಾಗಿ ಉಳಿ ಗ್ರಾಮ ತಲುಪಿದೆ. ಸಂಜೆ ಮುಲ್ಕಾಜೆಮಾಡದಲ್ಲಿ ಬಹಿರಂಗ ಸಭೆ ನಡೆಯಲಿದೆ.

ಇದಕ್ಕೂ ಮುನ್ನ ತಾಲೂಕಿನ ಪ್ರಮುಖ ಗ್ರಾಮೀಣ ಭಾಗಗಳಲ್ಲಿ ಸಂಚರಿಸಿದ ನಡಿಗೆಗೆ ಪ್ರಮುಖ ನಾಯಕರು ಸಾಥ್ ನೀಡಿದರು.

ಪುಂಜಾಲಕಟ್ಟೆ ಸಭೆ:

ನಾಲ್ಕನೇ ದಿನವಾದ ಬುಧವಾರ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ರಾತ್ರಿ ನಡೆದ ಸಾರ್ವಜನಿಕ ಸಭೆಯಲ್ಲಿ ದ.ಕ.ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರೀಶ ಪೂಂಜ ಮಾತನಾಡಿದರು.

ಜಾತ್ಯಾತೀತತೆಯ ಬಗ್ಗೆ ಮಾತನಾಡುವ ಕಾಂಗ್ರೆಸ್ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಅಭ್ಯರ್ಥಿಗೆ ಅವಕಾಶ ನೀಡಲಿ ಎಂದು ಪೂಂಜಾ ಸವಾಲೆಸೆದರು.

ಮಾಜಿ ಶಾಸಕ ರುಕ್ಮಯ ಪೂಜಾರಿ, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ, ಬಂಟ್ವಾಳ ಕ್ಷೇತ್ರ ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪಾಡಿಗುತ್ತು ಮಾತನಾಡಿದರು.ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮಿತಿ ಪ್ರ.ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ , ಮೋನಪ್ಪ ದೇವಸ್ಯಜಿಲ್ಲಾ ಎಸ್ಸಿ ಮೋರ್ಛಾ ಅಧ್ಯಕ್ಷ ದಿನೇಶ್ ಅಮ್ಟೂರು, ಜಿಲ್ಲಾ ಉಪಾಧ್ಯಕ್ಷ ಜಿ. ಆನಂದ, ಪ್ರಮುಖರಾದ ವಸಂತ ಅಣ್ಣಳಿಕೆ,ಚೆನ್ನಪ್ಪ ಕೋಟ್ಯಾನ್, ಲಕ್ಷಿ  ನಾರಾಯಣ ಉಡುಪ, ರಮೇಶ್ ಕುಡ್ಮೇರು, ಲಕ್ಷಿ  ನಾರಾಯಣ ಹೆಗ್ಡೆ, ಚಂದ್ರಶೇಖರ ಶೆಟ್ಟಿ, ಸುಂದರ ನಾಯ್ಕ, ನಂದ ಕಿಶೋರ್,ಸಂತೋಷ್ ಕುಮಾರ್ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಶಂಕರ ಶೆಟ್ಟಿ ಬೆದ್ರಮಾರ್, ಗಣೇಶ್ ರೈ, ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಸಂತೋಷ  ಕುಮಾರ್ ರಾಯಿಬೆಟ್ಟು, ರೊನಾಲ್ಡ್ ಡಿಸೋಜಾ,ವಿಜಯ ರೈ, ಶಿವಪ್ಪ ಗೌಡ, ರಾಜಗೋಪಾಲ ಪ್ರಭು, ಮೋಹನ ಭಟ್, ರಂಜಿತ ಮೈರಾ ಮತ್ತಿತರರು ಉಪಸ್ಥಿತರಿದ್ದರು

ಜಿ.ಪಂ.ಸದಸ್ಯ ಎಂ ತುಂಗಪ್ಪ ಬಂಗೇರ ಸ್ವಾಗತಿಸಿ, ಪ್ರಸ್ತಾವಿಸಿದರು. ಭರತ್ ರಾಜ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ರಾಜೇಶ್ ನಾಯಕ್ ಅವರು ಅತ್ತಾಜೆ ಲಕ್ಷ್ಮಣ ಪೂಜಾರಿ ಅವರ ನಿವಾಸದಲ್ಲಿ ವಾಸ್ತವ್ಯ ಹೂಡಿದರು

ಇಂದಿನ ನಡಿಗೆ:

ಕಕ್ಯಪದವು ದೇಗುಲದ ಬಳಿ ಯಾತ್ರೆಯ ನೇತೃತ್ವದ ವಹಿಸಿದ್ದ ರಾಜೇಶ್ ನಾಯಕ್ ಉಳಿಪ್ಪಾಡಿಯವರನ್ನು ಕಾರ್ಯಕರ್ತರು ಸ್ವಾಗತಿಸಿದರು. ನಂತರ ಕಕ್ಯಪದವು ಪಂಚದುರ್ಗಾಪರಮೇಶ್ವರಿ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ, ಸಾರ್ವಜನಿಕರೊಂದಿಗೆ ಸಮಾಲೋಚನೆಯನ್ನು ರಾಜೇಶ್ ನಾಯಕ್ ನಡೆಸಿದರು.

ಕ್ಷೇತ್ರ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರಾ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಆನಂದ, ಕ್ಷೇತ್ರ ಉಪಾಧ್ಯಕ್ಷರಾದ ವಿಜಯ ರೈ , ಕಾರ್ಯದರ್ಶಿಗಳಾದ ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಗಣೇಶ್‌ ರೈ ಮಾಣಿ, ಎಸ್.ಸಿ ಮೊರ್ಚಾ ಜಿಲ್ಲಾಧ್ಯಕ್ಷರಾದ ದಿನೇಶ್‌ಅಮ್ಟೂರು, ಮಾಜಿ ಜಿ.ಪಂ ಸದಸ್ಯ ಚೆನ್ನಪ್ಪಆರ್‌ ಕೋಟ್ಯಾನ್, ಜಿಲ್ಲಾ ಸಮಿತಿ ಸದಸ್ಯರಾದ ರೋನಾಲ್ಡ್ ಡಿ ಸೋಜಾ, ಶಕ್ತಿ ಕೇಂದ್ರ ಅಧ್ಯಕ್ಷರಾದ ಶಶಿಕಾಂತ ಶೆಟ್ಟಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಯವ ಮೋರ್ಚಾ ರಂಜಿತ್ ಮೈರ, ಸಂಪತ್‌ ಕೋಟ್ಯಾನ್, ಪ್ರವೀಣ್ ಮಾಡ, ಪಿಲಾತಬೆಟ್ಟು ಗ್ರಾಪಂ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ, ಉಳಿ ಗ್ರಾ.ಪಂ ಉಪಾಧ್ಯಕ್ಷರಾದ ಸುರೇಶ್ ಮೈರ, ಪಂಚಾಯತ್ ಸದಸ್ಯರಾದ ಚಿದಾನಂದ ರೈ, ಚೇತನ್‌ಉರ್ದೊಟ್ಟು, ಪ್ರವೀಣ್‌ ಗೌಡ, ಬಿಜೆಪಿ ಪಂಚಾಯತ್ ಸಮಿತಿಗಳಾದ ಉಳಿ, ಬಡಗಕಜೇಕಾರುವಿನ ಅಧ್ಯಕ್ಷರಾದ ವಸಂತ ಸಾಲ್ಯಾನ್‌ ರಾಮನಗರ, ವಾಸುದೇವ ದೇವಾಡಿಗ, ಪಕ್ಷದ ಪ್ರಮುಖರುಗಳಾದ ಬೊಳ್ಳಿಕಲ್ಲು ನಾರಾಯಣ ಪೂಜಾರಿ, ಪುಷ್ಪರಾಜ್‌ ಚೌಟ, ದಿನೇಶ್‌ ಜೇಂಕ್ಯಾರು, ಜಯ ಶೆಟ್ಟಿ, ರೋಹಿನಾಥ ,ರಾಘವ ಭಂಡಾರಿ ಕೊಕ್ಕಡ, ವಿಠಲ ಭಂಡಾರಿ ಪುಣ್ಕೆದಡಿ, ರವೀಂದ್ರ ಶೆಟ್ಟಿ, ಪ್ರಕಾಶ್‌ ಕರ್ಲಾ, ಜನಾರ್ಧನ ಬಾರಿಂಜೆ ,ರೋಹಿನಾಥ ಕೊಡಂಗೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ನಂತರ ಪಾದಯಾತ್ರೆಯು ದೇವಸ್ಯಪಡೂರಿಗೆ ಸಾಗಿತು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts