ಜಿಲ್ಲಾ ಸುದ್ದಿ

20ರಿಂದ ಶಿರಾಡಿಘಾಟ್ ವಾಹನ ಸಂಚಾರ ಸ್ಥಗಿತ

www.bantwalnews.com

ಜನವರಿ 20, ಬೆಳಗ್ಗೆ 6 ಗಂಟೆಯಿಂದ ಕಾಮಗಾರಿ ಮುಗಿಯುವವರೆಗೆ ಅಥವಾ ಮುಂದಿನ ಆದೇಶ ಬರುವವರೆಗೆ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಇರುವುದಿಲ್ಲ.
ರಾಷ್ಟ್ರೀಯ ಹೆದ್ದಾರಿ-48 ಬೆಂಗಳೂರು- ಮಂಗಳೂರು ರಸ್ತೆಯ ಶಿರಾಡಿ ಘಾಟಿ ಭಾಗದ ಸರಪಳಿ ಕಿ.ಮೀ.250.620 (ಕೆಂಪುಹೊಳೆ ಗೆಸ್ಟ್ ಹೌಸ್) ನಿಂದ 263.00 (ಅಡ್ಡಹೊಳೆ) ರವರೆಗಿನ ರಸ್ತೆ ಅಭಿವೃದ್ದಿಪಡಿಸಲು ಅನುಮೋದನೆಯಾಗಿದ್ದು ಕಾರ್ಯಾದೇಶ ನೀಡಲಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಈಗ ಉದ್ದೇಶಿಸಲಾಗಿರುವ ರಸ್ತೆ ಕಾಮಗಾರಿಯನ್ನು ನಿರ್ವಹಿಸಲು ಸಕಲೇಶಪುರ ರಾಷ್ಟ್ರೀಯ ಹೆದ್ದಾರಿ ಕಿ.ಮೀ. 238.950 (ಮಾರನಹಳ್ಳಿ ಪೋಲೀಸ್ ಔಟ್ ಪೋಸ್ಟ್ ಕಾಡುಮನೆ ಎಸ್ಟೇಟ್ ರೋಡ್ ಜಂಕ್ಷನ್) ರಿಂದ ಪುತ್ತೂರು ತಾಲೂಕಿನ ಗುಂಡ್ಯ ಹೆದ್ದಾರಿ  ಕಿ.ಮೀ.  261.500ವರೆಗೆ ಶಿರಾಡಿಘಾಟ್‍ನ ರಸ್ತೆ ಭಾಗವನ್ನು ವಾಹನ ಸಂಚಾರಕ್ಕೆ ಜನವರಿ 20 ರಂದು ಬೆಳಿಗ್ಗೆ 6 ಘಂಟೆಯಿಂದ ಕಾಮಗಾರಿ ಮುಕ್ತಾಯಗೊಳ್ಳುವವರೆಗೆ ಅಥವಾ ಮುಂದಿನ ಆದೇಶದವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಆದೇಶ ಹೊರಡಿಸಿದೆ.
  • ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇದಿಸುವ ನಿಮಿತ್ತ   ಲಘು ವಾಹನಗಳು (ಸಾಮಾನ್ಯ ಬಸ್ಸುಗಳು, ಜೀಪು, ವ್ಯಾನು, ಎಲ್.ಸಿ.ವಿ. (ಮಿನಿ ವ್ಯಾನ್) ದ್ವಿಚಕ್ರ ವಾಹನಗಳು)       ಹಾಸನ-ಬೇಲೂರು(ರಾಜ್ಯ ಹೆದ್ದಾರಿ-57)-ಮೂಡಿಗೆರೆ-ಚಾರ್ಮುಡಿಘಾಟ್- ಬೆಳ್ತಂಗಡಿ-ಉಜಿರೆ- ಬಿ.ಸಿ.ರೋಡು (ರಾಷ್ಟ್ರೀಯ ಹೆದ್ದಾರಿ 234)- ಮಂಗಳೂರು (ರಾಷ್ಟ್ರೀಯ ಹೆದ್ದಾರಿ 75), ಹಾಸನ-ಸಕಲೇಶಪುರ-ಆನೆಮಹಲ್ (ರಾಷ್ಟ್ರೀಯ ಹೆದ್ದಾರಿ-75) ಹಾನ್‍ಬಾಳ್-ಜೆನ್ನಾಪುರ(ರಾಜ್ಯ ಹೆದ್ಸಾರಿ-27) ಮೂಡಿಗೆರೆ-ಚಾರ್ಮುಡಿ ಘಾಟ್-ಬೆಳ್ತಂಗಡಿ -ಉಜಿರೆ-ಬಿ.ಸಿ.ರಸ್ತೆ (ರಾಷ್ಟ್ರೀಯ ಹೆದ್ದಾರಿ 234)-ಮಂಗಳೂರು (ರಾಷ್ಟ್ರೀಯ ಹೆದ್ದಾರಿ 75), ಬೆಂಗಳೂರು – ಹಾಸನ – ಮೂಡಿಗೆರೆ – ಕೊಟ್ಟಿಗೆಹಾರ ಕಳಸ-ಕುದುರೆಮುಖ – ಮಾಲಘಾಟ್ – ಕಾರ್ಕಳ – ಉಡುಪಿ, ಮಂಗಳೂರು-ಬಿ.ಸಿ.ರಸ್ತೆ ಮಾಣಿ(ರಾಷ್ಟ್ರೀಯ ಹೆದ್ದಾರಿ 75)-ಪುತ್ತೂರು-ಮಡಿಕೇರಿ-ಹುಣಸೂರು(ರಾಷ್ಟ್ರೀಯ ಹೆದ್ದಾರಿ 275) -ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು, ಬೆಂಗಳೂರು-ಶಿವಮೊಗ್ಗ-ಆಯನೂರು-ಹೊಸನಗರ ಮಾಸ್ತಿಕಟ್ಟೆ-ಬಾಳೆಬಾರೆಘಾಟ್-ಹೊಸಂಗಡಿ ಸಿದ್ದಾಪುರ-ಕುಂದಾಪುರ ಮಾರ್ಗದಲ್ಲಿ ಚಲಿಸಬಹುದು.
  • ಭಾರಿ ವಾಹನಗಳು ( ರಾಜಹಂಸ, ಐರಾವತ ಬಸ್ಸುಗಳು ಮತ್ತು ಖಾಸಗಿ ಲಕ್ಸುರಿ ಬಸ್ಸುಗಳು ಮತ್ತು ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೊ ಕಂಟೈನರ್ಸ್, ಲಾಂಗ್ ಚಾಸೀಸ್ ವಾಹನಗಳು) ಮಂಗಳೂರು-ಬಿ.ಸಿ.ರೋಡು- ಮಾಣಿ(ರಾಷ್ಟ್ರೀಯಹೆದ್ದಾರಿ75)-ಪುತ್ತೂರು- ಮಡಿಕೇರಿ ಹುಣಸೂರು (ರಾಷ್ಟ್ರೀಯ ಹೆದ್ದಾರಿ-275)-ಕೆ.ಆರ್.ನಗರ-ಹೊಳೆನರಸಿಪುರ-ಹಾಸನ (ರಾಜ್ಯ ಹೆದ್ದಾರಿ 57), ಮಂಗಳೂರು-ಬಿ.ಸಿ.ರಸ್ತೆ, ಮಾಣಿ (ರಾಷ್ಟ್ರೀಯಹೆದ್ದಾರಿ-75) – ಪುತ್ತೂರು – ಮಡಿಕೇರಿ -ಹುಣಸೂರು (ರಾಷ್ಟ್ರೀಯ ಹೆದ್ದಾರಿ 275)-ಮೈಸೂರು-ಮಂಡ್ಯ-ರಾಮನಗರ-ಬೆಂಗಳೂರು, ಬೆಂಗಳೂರು-ಶಿವಮೊಗ್ಗ-ಆಯನೂರು-ಹೊಸನಗರ, ಮಾಸ್ತಿಕಟ್ಟೆ-ಬಾಳೆಬಾರೆಘಾಟ್ ಹೊಸಂಗಡಿ ಸಿದ್ದಾಪುರ-ಕುಂದಾಪುರ, ಬೆಂಗಳೂರು-ನೆಲಮಂಗಲ-ಶಿವಮೊಗ್ಗ-ಸಾಗರ-ಹೊನ್ನಾವರ-ಮುರುಡೇಶ್ವರ-ಕುಂದಾಪುರ-ಉಡುಪಿ-ಮಂಗಳೂರು ಮಾರ್ಗದಲ್ಲಿ ಚಲಿಸಬಹುದು.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts