ಬಂಟ್ವಾಳ

ಬಂಟ್ವಾಳ ತಾಲೂಕು ಪಿಂಚಣಿದಾರರ ಸಭೆ

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆ ಇತ್ತೀಚೆಗೆ ಬಿ.ಸಿ.ರೋಡಿನ ಸರಕಾರಿ ನೌಕರರ ಭವನದ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಬಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕಳೆದ ಸಭೆಯ ವರದಿಯನ್ನು ಕಾರ್ಯದರ್ಶಿ ಕೆ.ನೀಲೋಜಿರಾವ್ ಸಭೆಯಲ್ಲಿ ಮಂಡಿಸಿದರು. ಲೆಕ್ಕಪತ್ರಗಳನ್ನು ಕೋಶಾಧಿಕಾರಿ ಜಲಜಾಕ್ಷಿ ಕುಲಾಲ್ ಮಂಡಿಸಿದರು.

ಜಾಹೀರಾತು

ಚಾಲ್ತಿ ವರ್ಷದ ಸಂಘದ ವಾರ್ಷಿಕ ಮಹಾಸಭೆಯನ್ನು ಇದೇ ವರ್ಷದ ಏಪ್ರಿಲ್ 10ರಂದು ತಾಲೂಕು ಸರಕಾರಿ ನೌಕರರ ಭವನದ ಹೊಸ ಸಭಾಂಗಣದಲ್ಲಿ ಗಣ್ಯವಕ್ತಿಗಳಾದ ವಿಶ್ವನಾಥ ಮತ್ತು ಸುಂದರ ಅವರನ್ನು ಆಮಂತ್ರಿಸಿ ನಡೆಸುವುದು ಎಂದು ತೀರ್ಮಾನಿಸಲಾಯಿತು. ಸಮಾರಂಭದಲ್ಲಿ ೭೫ ತುಂಬಿದ ಸುಮಾರು ೧೩ ಹಿರಿಯ ಸದಸ್ಯರನ್ನು ಸನ್ಮಾನಿಸುವುದು ಎಂದು ತೀರ್ಮಾನಿಸಲಾಯಿತು. ಹೊಸದಾಗಿ ಸೇರ್ಪಡೆಗೊಂಡ ಸಂಕಪ್ಪ ಶೆಟ್ಟಿ ಮತ್ತು ಸೋಮಪ್ಪ ಮೂಲ್ಯ ಅವರನ್ನು ಅಧ್ಯಕ್ಷರು ಗೌರವದೊಂದಿಗೆ ಸ್ವಾಗತಿಸಿದರು.

ಸಭೆಯಲ್ಲಿ ಉಪಾಧ್ಯಕ್ಷರಾದ ಎ.ಲಿಂಗಪ್ಪ, ಎನ್. ಕೃಷ್ಣರಾಜ ಶೆಟ್ಟಿ, ವಿ.ಸೋಮಪ್ಪ, ಸದಸ್ಯರಾದ ಲೋಕನಾಥ ಶೆಟ್ಟಿ, ಚಂದು ನಾಕ, ಕೆ.ರಮೇಶ ಭಟ್, ಬಿ.ಚಂದ್ರಶೇಖರ ಗಟ್ಟಿ, ಎಂ.ದಿನಕರ, ರಾಘವನ್ ನಾಯರ್, ಅಬ್ದುಲ್ ಸಲಾಮ್, ಎನ್. ಶಿವಶಂಕರ್, ಸುಂದರ ಮೂಲ್ಯ, ಪದ್ಮನಾಭ ರಾವ್, ಕೆ.ಆರ್.ಪುತ್ತೂರಾಯ, ಶೇಷಪ್ಪ ಮೂಲ್ಯ, ಸಂಕಪ್ಪ ಶೆಟ್ಟಿ, ಸೋಮಪ್ಪ ಮೂಲ್ಯ ಉಪಸ್ಥಿತರಿದ್ದರು. ನೀಲೋಜಿರಾವ್ ಸ್ವಾಗತಿಸಿದರು. ಎ.ದಾಮೋದರ ವಂದಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts