ಎರಡನೇ ಶನಿವಾರ ಸರಕಾರಿ ಕಚೇರಿಗಳಿಗೆ ರಜೆ. ಅದರಲ್ಲೂ ಭಾನುವಾರ, ಸೋಮವಾರ ಡಬ್ಬಲ್ ರಜೆ. ಹೀಗಾಗಿ ಸರಕಾರಿ ನೌಕರರು ತಿರುಗಾಟಕ್ಕೆ ಹೋಗುವುದು ಮಾಮೂಲು. ಆದರೆ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿರುವ ತಾಲೂಕು ಕಚೇರಿ ಸಹಿತ ಕಂದಾಯ ಇಲಾಖೆಯ ಎಲ್ಲ ಸಿಬ್ಬಂದಿಗಳು ಮೇಲಧಿಕಾರಿ, ಡಿ ದರ್ಜೆ ಎಂಬ ಬೇಧವಿಲ್ಲದೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು ವಿಶೇಷ.
ಸದಾ ಫೈಲು ಹಿಡಿಯುವ ಕೈಯಲ್ಲಿ ಹಿಡಿಸೂಡಿ, ಬಕೇಟ್, ಮೋಪ್ ಹಿಡಿದು ಕಚೇರಿ ವಠಾರ ಶುಚಿಗೊಳಿಸುತ್ತಿದ್ದ ಸಿಬ್ಬಂದಿ ಶನಿವಾರ ಕಂಡುಬಂದರು. ಆಡಳಿತ ಶಾಖೆಯ ಸೀತಾರಾಂ ಕಮ್ಮಾಜೆ ನೇತೃತ್ವದಲ್ಲಿ ಆಡಳಿತ ಶಾಖೆ, ಚುನಾವಣಾ ಶಾಖೆ, ಆಹಾರ ಶಾಖೆ, ಭೂ ಸುಧಾರಣೆ ಶಾಖೆ, ನಾಡಕಚೇರಿ ಮತ್ತಿತರ ವಿಭಾಗಗಳ ನೌಕರರು ಸ್ವಚ್ಚತಾ ಕಾರ್ಯ ನಿರ್ವಹಿಸಿದರು.
ಅಧಿಕಾರಿಗಳು ಹಾಗೂ ನೌಕರರ ಈ ಸ್ವಚ್ಚತಾ ಆಂದೋಲನಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಇದೊಂದು ಮಾದರಿ ಕಾರ್ಯಕ್ರಮ. ಎಲ್ಲಾ ಇಲಾಖಾ ಇಲಾಖಾ ಕಚೇರಿಗಳಲ್ಲಿ ಸ್ವಚ್ಚತಾ ಕಾರ್ಯ ನಡೆಯಬೇಕೆಂದು ಕರೆ ನೀಡಿದರು.
| ಪುತ್ತೂರಿನ ಸ್ವಾಗತ ಸಮಿತಿಯ ಸಂಚಾಲಕರಾಗಿ ಉಜ್ವಲ್ ಪ್ರಭು | ಹೊರಕಾಣಿಕೆ ಸಮಿತಿಯ ಸಂಚಾಲಕರಾಗಿ ದಯಾನಂದ ಶೆಟ್ಟಿ ಉಜಿರೆಮಾರು ಆಯ್ಕೆ…
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…