ಕಲ್ಲಡ್ಕ

ನರಹರಿ ಕ್ಷೇತ್ರ ಅಭಿವೃದ್ಧಿಗೆ ಅನುದಾನ: ರಮಾನಾಥ ರೈ

www.bantwalnews.com

ಜಾಹೀರಾತು

ನರಹರಿ ಸದಾಶಿವ ದೇವಸ್ಥಾನದ ಜೀರ್ಣೊದ್ಧಾರ ಕಾರ್ಯಕ್ಕೆ ಸರಕಾರದಿಂದ ದೊರೆಯುವ ಎಲ್ಲಾ ಅನುದಾನವನ್ನು ಒದಗಿಸುವ ಪ್ರಯತ್ನ ಮಾಡುವುದಾಗಿ ಕರ್ನಾಟಕ ಸರಕಾರದ ಅರಣ್ಯ ಪರಿಸರ, ಜೀವಶಾಸ್ತ್ರ ಸಚಿವರು ಜೀರ್ಣೊದ್ಧಾರ ಸಮಿತಿ ಗೌರವಾಧ್ಯಕ್ಷ ರಮಾನಾಥ ರೈ ಹೇಳಿದರು.

ನರಹರಿ ಪರ್ವತದಲ್ಲಿ ಜರಗಿದ ದೇವಸ್ಥಾನದ ಪುನರ್ ನಿರ್ಮಾಣದ ಪೂರ್ವಭಾವಿ ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಅವರು ವಹಿಸಿ ಮಾತನಾಡಿದರು.

ದೇಗುಲ ಪುನರ್ ನಿರ್ಮಾಣದ ವಿವಿಧ ಹಂತದ ಕಾಮಗಾರಿಗಳ ವಿವರ ಮತ್ತು ಅದಕ್ಕೆ ತಗಲುವ ವೆಚ್ಚಗಳ ಮಾಹಿತಿಯನ್ನು ಮತ್ತು ವಾಸ್ತು ನೀಲಿ ನಕ್ಷೆಯನ್ನು ದೇವಸ್ಥಾನದಲ್ಲಿ ಫಲಕಗಳ ಮೂಲಕ ಪ್ರದರ್ಶಿಸಬೇಕು ಎಂದು ಸಚಿವರು ಸಲಹೆ ನೀಡಿದರು.

ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಪ್ರಶಾಂತ್ ಮಾರ್ಲ ಅವರು ಸ್ವಾಗತಿಸಿ ಜೀರ್ಣೊದ್ಧಾರದ ಈ ವರೆಗಿನ ಅಭಿವೃದ್ಧಿ ಕಾಮಗಾರಿಗಳನ್ನು ವಿವರಿಸಿದರಲ್ಲದೆ ದೇಗುಲದ ವಿಸ್ತಾರವಾದ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅನುದಾನ ಒದಗಿಸಿದ ಸಚಿವ ರಮಾನಾಥ ರೈ ಅವರನ್ನು ಅಭಿನಂದಿಸಿದರು.

ದೇಗುಲ ಉತ್ಸವ ಸಮಿತಿ ಅಧ್ಯಕ್ಷರು ಮಾಜಿ ಶಾಸಕರು ಆದ ಎ. ರುಕ್ಮಯ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನರಹರಿ ಪರ್ವತ ಸುತ್ತಲಿನ 12 ಎಕರೆ ಕಾಡು ಪ್ರದೇಶವನ್ನು ದೈವೀವನವನ್ನಾಗಿ ರೂಪಿಸುವಂತೆ ಮಾನ್ಯ ಅರಣ್ಯ ಸಚಿವರಿಗೆ ದೇವಸ್ಥಾನದ ಆಡಳಿತ ಮೊಕ್ತೇಸರರು ಮತ್ತು ಜೀರ್ಣೊದ್ಧಾರ ಸಮಿತಿ ಅಧ್ಯಕ್ಷರು ಮನವಿ ಸಮರ್ಪಿಸಿದರು.

ಬೂಡಾ ಅಧ್ಯಕ್ಷರಾದ  ಸದಾಶಿವ ಬಂಗೇರ ಉಪಸ್ಥಿತರಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳಾದ ಸುರೇಶ್ ಹಾಗೂ ಪ್ರೀತಂ. ಎ.ಪಿ.ಯಂ.ಸಿ  ಅಧ್ಯಕ್ಷರಾದ ಪದ್ಮನಾಭ ರೈ .ಮೊಕ್ತೇಸರರಾದ ಪರಮೇಶ್ವರ ಮಯ್ಯ, ಕೃಷ್ಣ ನಾಕ್, ಸುಂದರ ಬಂಗೇರ, ಮಾಧವ ಶೆಣೈ, ಪ್ರತಿಭಾ ಎ.ರೈ, ಮೃಣಾಲಿನಿ. ಸಿ. ನಾಕ್ ಮತ್ತು ಎಂ. ಎನ್. ಕುಮಾರ್, ಜೀರ್ಣೊದ್ಧಾರ ಸಮಿತಿಯ ಕಾರ್ಯದರ್ಶಿಯಾದ ಜಿ. ನರೇಂದ್ರ ಬಾಬು, ಸಂಘಟನಾ ಕಾರ್ಯದರ್ಶಿಗಳಾದ ಸೀತಾರಾಮ ಶೆಟ್ಟಿ ಕಾಂತಾಡಿ ಗುತ್ತು, ಶಂಕರ ಆಚಾರ್ಯ, ಮೋಹನ್‌ರಾಜ್ ಚೌಟ, ಸತೀಶ ಪಿ. ಸಾಲಿಯಾನ್, ಗಣೇಶ ಅಮ್ಟೂರು, ರತ್ನಾಕರ ಪೂಜಾರಿ ಪಡೀಲ್, ತಾರನಾಥ ಪೂಜಾರಿ ಪಡೀಲ್, ದಾಮೋದರ್ ಮೆಲ್ಕಾರ್, ರುಕ್ಮಯ ಕರುಣಾಕರ್ ಮೆಲ್ಕಾರ್, ಗಿರೀಶ್ ಸಾಲಿಯಾನ್ ಭಂಡಾರದ ಮನೆ, ಈಶ್ವರ್ ಆರ್.ಕೆ, ಪ್ರಕಾಶ್ ಬೋಳಂಗಡಿ, ಮೋಹನ್ ಪೂಜಾರಿ, ಪ್ರವೀಣಾ ಬೊಂಡಾಲ, ಜನಾರ್ಧನ ಬೊಂಡಾಲ, ಮೋಹನ್ ನರಹರಿ ನಗರ, ದೇವದಾಸ ಬೊಂಡಾಲ, ದಯಾನಂದ ಬೊಂಡಾಲ ಹಾಗೂ ಶ್ರೀ ಕ್ಷೇತ್ರದ ಮೆನೇಜರ್ ಆನಂದ್ ಉಪಸ್ಥಿತರಿದ್ದರು.

ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಡಾ. ಆತ್ಮರಂಜನ್ ರೈ ವಂದಿಸಿದರು. ಯಶು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts