ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ ಬಂಟ್ವಾಳ ತಾಲೂಕು ಆಶ್ರಯದಲ್ಲಿ ಫೆ.18 ರಂದು ರವಿವಾರ ಬಿ.ಸಿ.ರೋಡಿನ ಗಾಣದ ಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿ ಲೋಕಕಲ್ಯಾಣಾರ್ಥವಾಗಿ ನಡೆಯಲಿರುವ ಸೀತಾರಾಮ ಕಲ್ಯಾಣೋತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕನ್ಯಾಡಿ ಕ್ಷೇತ್ರದಲ್ಲಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಅವರು ಆಶೀರ್ವಚನ ನೀಡಿ ಸತ್ಯ, ಧರ್ಮವನ್ನು ಸಂತರು ಪಾಲಿಸಿ ಜನರ ಮೂಲಕ ಅನುಷ್ಠಾನಗೊಳಿಸಿದಾಗ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ತರಲು ಸಾಧ್ಯ ವಿದೆ ಎಂದರು. ಡಿಗ್ರಿ ಪಡೆದ ತಕ್ಷಣ ವ್ಯಕ್ತಿ ಅಕ್ಷರಸ್ಥನಾಗುತ್ತಾನೆ ಹೊರತು ವಿದ್ಯಾವಂತನಾಗುವುದಿಲ್ಲ. ಬದುಕಿನಲ್ಲಿ ಸಂಸ್ಕಾರ ಇಲ್ಲದೇ ಹೋದರೆ ಎಷ್ಟೇ ಉನ್ನತ ಸ್ಥಾನ ಪಡೆದರೂ ನಿಷ್ಪ್ರಯೋಜಕ ಎಂದು ತಿಳಿಸಿದರು.
ಈ ಸಂದರ್ಭ ಬಂಟ್ವಾಳ ಸೇವಾ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಕನ್ಯಾಡಿ ಕ್ಷೇತ್ರದ ಸಂಚಾಲಕ ಕೃಷ್ಣಪ್ಪ ಪೂಜಾರಿ ಸಮಿತಿ ಪ್ರಮುಖರಾದ ರುಕ್ಮಯ ಪೂಜಾರಿ, ಬೇಬಿ ಕುಂದರ್, ಮಾಯಿಲಪ್ಪ ಸಾಲ್ಯಾನ್, ವಿಶ್ವನಾಥ ಫೂಜಾರಿ, ರಾಮದಾಸ ಬಂಟ್ವಾಳ, ಬಿ.ಮೋಹನ್, ಗೋಪಾಲ ಸುವರ್ಣ, ಗಣೇಶ್ ಸುವರ್ಣ, ಜಗದೀಶ ಕೊಯಿಲಾ, ಗೋಪಾಲ ಅಂಚನ್, ಜಯಾನಂದ ಪೆರಾಜೆ, ಮೋನಪ್ಪ ದೇವಸ್ಯ, ಲೋಕೇಶ್, ದೇವಪ್ಪ ಪೂಜಾರಿ, ಗಣೇಶ್, ನಾರಾಯಣ ಸಾಲ್ಯಾನ್, ರಮೇಶ್ ಎಂ., ಸುಂದರ ಕೃಷ್ಣಕೋಡಿ, ಉದಯ ಕುಮಾರ್, ಪ್ರವೀಣ್ ಕುಮಾರ್, ಪ್ರಸಾದ್ ಕರ್ಬೆಟ್ಟು, ದಿವಾಕರ ಪೂಜಾರಿ , ನಿತಿನ್ ಮತ್ತಿತರರು ಹಾಜರಿದ್ದರು. ಬಳಿಕ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಚರ್ಚಿಸಲಾಯಿತು.