ಯುವ ಜನಾಂಗವು ತಮ್ಮ ಬದುಕಿನಲ್ಲಿ ಶಿಸ್ತುಬದ್ಧವಾದ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ನಿರಂತರವಾದ ಆಸಕ್ತಿಯು ಅವನ ಸಾಧನೆಗೆ ಹಾದಿಯಾಗುತ್ತದೆ. ವಿದ್ಯಾರ್ಥಿಯಾದವನು ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡಿಕೊಂಡು ಸಾಧನೆಯ ಮೆಟ್ಟಲೇರಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯ ಉಪ ಕುಲಪತಿಗಳಾದ ಪ್ರೊ.ಕೆ.ಭೈರಪ್ಪ ಹೇಳಿದರು.
ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕಾಲೇಜು ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಗೋಪಾಲಕೃಷ್ಣ ಪೈ ಮಾತನಾಡಿ ವ್ಯಾಸ, ವಾಲ್ಮೀಕಿಯಂತಹ ಪ್ರತಿಭಾನ್ವಿತರಿಂದ ಮಹಾಭಾರತ, ರಾಮಾಯಣದಂತಹ ಮಹಾಕಾವ್ಯಗಳ ಸೃಷ್ಟಿಯಾಯಿತು. ಪ್ರಕೃತಿಯಲ್ಲಿ ಕಂಡಂತಹ ಇಂತಹ ಒಂದು ಘಟನೆಯು ಈ ಕವಿಗಳ ಪ್ರತಿಭೆಯ ಪ್ರಕಟಕ್ಕೆ ಸಾಕ್ಷ್ಷಿಯಾಯಿತು. ವಿದ್ಯಾರ್ಥಿಗಳಾದವರಲ್ಲೂ ಇಂತಹ ಸುಪ್ತವಾದ ಪ್ರತಿಭೆಗಳಿರುತ್ತವೆ. ಈ ಪ್ರತಿಭೆಯು ಪ್ರಕಟಕ್ಕೆ ಇಂತಹ ವಿದ್ಯಾಮಂದಿರಗಳು ಕಾರಣವಾಗುತ್ತವೆ ಎಂದರು.
ಶ್ರೀ ವೆಂಕಟರಮಣ ಸ್ವಾಮಿ ಕಾಜುಗಳ ಸಂಚಾಲಕರಾದ ಕೂಡಿಗೆ ಪ್ರಕಾಶ್ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಸುಧೀರ್ಘ ವರ್ಷಗಳ ಸೇವೆಯಿಂದ ನಿವೃತ್ತರಾದ ಕಛೇರಿ ಸಹಾಯಕರಾದ ಸುರೇಶ್ ಕೆ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಶಿಕಲಾ ಕೆ. ಇವರು ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಪ್ರೊ. ತುಕಾರಾಂ ಪೂಜಾರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲಕಿ ಪ್ರೊ. ಪ್ರೇಮಲತಾ ಪೈ ಮತ್ತು ಐಕ್ಯೂಎಸಿ ಸಂಯೋಜಕರಾದ ಡಾ| ಟಿ.ಕೆ ರವೀಂದ್ರನ್ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು. ಉಪನ್ಯಾಸಕರಾದ ಶಶಿಕಲಾ ಎಂ.ಪಿ, ಡಾ| ಮಂಜುನಾಥ ಉಡುಪ, ಕವಿತಾ ಇವರು ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ನಾರಾಯಣ ಭಂಡಾರಿ ವಂದಿಸಿದರು.
ಪೂಜಾಶ್ರೀ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಬೆಂಗಳೂರಿನ ರಿಚರ್ಡ್ ಲೂಯಿಸ್ ಮತ್ತು ತಂಡದವರಿಂದ ನಗೆ ಹಬ್ಬ ನಡೆಯಿತು. ನಂತರ ಕಾಲೇಜಿನ ವಿದ್ಯಾರ್ಥಿಗಳಿಂದ ಕರುಣಾನಿಧಿ ನಾಟಕ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.