ಪಾಕಶಾಲೆಯೇ ವೈದ್ಯಶಾಲೆ

ರೈಸ್ ಐಟಂಗಷ್ಟೇ ಅಲ್ಲ, ಔಷಧಕ್ಕೂ ಬೇಕು ಪತ್ರೆ

ಡಾ.ಎ.ಜಿ.ರವಿಶಂಕರ್

www.bantwalnews.com

ಪತ್ರೆ ಅಥವಾ ತಮಾಲಪತ್ರೆಯು ಸುಗಂಧ ದ್ರವ್ಯವಾಗಿದ್ದು ಸಾಧಾರಣವಾಗಿ ಪುಲಾವು, ಗ್ಹೀರೈಸ್ ಇತ್ಯಾದಿಗಳಲ್ಲಿ ಬಳಸುತ್ತಾರೆ. ಯುಕ್ತಿ ಯುಕ್ತವಾಗಿ ಇದನ್ನು ಬಳಸುವುದರಿಂದ ಹಲವಾರು ಆರೋಗ್ಯದ ತೊಂದರೆಗಳನ್ನು ಹೋಗಲಾಡಿಸಬಹುದು.

  1. ಪತ್ರೆಯ ಕಷಾಯ ಮಾಡಿ ಕುಡಿಯುವುದರಿಂದ ಜೀರ್ಣಕ್ರಿಯೆಯು ಸರಿಯಾಗಿ ಆಗುವುದರ ಮೂಲಕ ಭೇದಿಯ ಸಮಸ್ಯೆಯು ದೂರವಾಗುತ್ತದೆ.
  2. 4 ರಿಂದ 5 ಪತ್ರೆಯನ್ನು ನೀರಿಗೆ ಜಜ್ಜಿ ಹಾಕಿ ನೀರನ್ನು ಕುದಿಸಿ ಅದರ ಆವಿಯನ್ನು ಮುಖಕ್ಕೆ ಹಿಡಿಯುವುದರಿಂದ ಶೀತ ಹಾಗು ಮೂಗು ಕಟ್ಟುವುದು ಕಡಿಮೆಯಾಗುತ್ತದೆ.
  3. ಪತ್ರೆಯ ಹುಡಿಯನ್ನು ಜೇನುತುಪ್ಪದಲ್ಲಿ ಕಲಸಿ ಸೇವಿಸುವುದರಿಂದ ಮೂಗಿನ ರಕ್ತಸ್ರಾವ ಕಡಿಮೆಯಾಗುತ್ತದೆ.
  4. ಪತ್ರೆಯ ಎಣ್ಣೆ ಕಾಯಿಸಿ ಶರೀರದ ಮೇಲೆ ಹಚ್ಚಿದರೆ ಮಾಂಸ ಖಂಡಗಳು ಮತ್ತು ಸಂಧುಗಳು ನುಸುಲಾಗುವುದರ ಮೂಲಕ ನೋವು ಕಡಿಮೆಯಾಗಿ ಚಲನಾಶೀಲವಾಗುತ್ತವೆ.
  5. ಕ್ರಿಮಿ ಕೀಟಗಳು ಕಚ್ಚಿದಾಗ ಪತ್ರೆಯನ್ನು ಹುಡಿಮಾಡಿ ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಕಚ್ಚಿದ ಜಾಗಕ್ಕೆ ಲೇಪಿಸಬೇಕು.
  6. ಪತ್ರೆಯನ್ನು ಹುಡಿಮಾಡಿ ನೀರಿನಲ್ಲಿ ಕಲಸಿ ಹಲ್ಲನ್ನು ತಿಕ್ಕುವುದರಿಂದ ಹಲ್ಲುಗಳು  ಶುಭ್ರವಾಗುವುದರ ಜೊತೆಗೆ  ವಸಡುಗಳು ಬಲಿಷ್ಟವಾಗುತ್ತವೆ.
  7. ಗರ್ಭಿಣಿಯಾಗುವ ಬಯಕೆಯಿರುವ ಮಹಿಳೆಯರು ಪತ್ರೆಯ ಕಷಾಯಮಾಡಿ ಕುಡಿದರೆ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ.
  8. ಪತ್ರೆಯ ಕಷಾಯ ಕುಡಿಯುವುದರಿಂದ ಮಾಸಿಕ ರಜೋಸ್ರಾವವು ಸರಿಯಾಗಿ ಆಗುತ್ತದೆ.
  9. ಪತ್ರೆಯ ಕಷಾಯವು ಮೂತ್ರಕೋಶದ ಕಲ್ಲನ್ನು ಹೋಗಲಾಡಿಸುತ್ತದೆ.
  10. ಪತ್ರೆಯ ಕಷಾಯದಲ್ಲಿ ತಲೆಕೂದಲನ್ನು ತೊಳೆಯುವುದರಿಂದ ತಲೆಹೊಟ್ಟು ಹಾಗು ಹೇನಿನ ಸಮಸ್ಯೆ ನಿವಾರಣೆಯಾಗುತ್ತದೆ.
  11. ಪತ್ರೆಯ ಹುಡಿಯನ್ನು ಜೇನಿನಲ್ಲಿ ಕಲಸಿ ಮುಖಕ್ಕೆ ಹಚ್ಚುವುದರಿಂದ ಗಟ್ಟಿಯಾದ ಮತ್ತು ನೋವುಭರಿತವಾದ ಮೊಡವೆಗಳು ವಾಸಿಯಾಗುತ್ತವೆ.
  12. ಪತ್ರೆಗೆ ಕ್ಯಾನ್ಸರ್ ರೋಗದ ವಿರುದ್ಧ ಪ್ರತಿರೋಧ ಶಕ್ತಿ ಇರುವುದು ಅಧ್ಯಯನಗಳ ಮೂಲಕ ಕಂಡುಬಂದಿದೆ.

ಅತಿಯಾಗಿ ಸೇವಿಸಿದರೆ………..

  • ಚಟವಾಗಿ ಪರಿಣಮಿಸಬಹುದು
  • ಮಲಬದ್ಧತೆ ಕಾಣಬಹುದು
  • ಅತಿಯಾದ ಬಾಯಾರಿಕೆ, ಬಾಯಿ ಒಣಗುವುದು ಇತ್ಯಾದಿ ಕಾಣಿಸಿಕೊಳ್ಳಬಹುದು.

 

Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts