KISHORE PERAJE
ಮಣಿಹಳ್ಳ ಪಕ್ಕ ಬಡಗುಂಡಿ ಎಂಬಲ್ಲಿ ನಡೆದ ಅಪಘಾತದಲ್ಲಿ ಒಂದು ವರ್ಷದ ಮಗು ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಜಾನ್ ಪ್ಯಾಟ್ರಿಕ್ ಬರೆಟ್ಟೋ ಮೃತಪಟ್ಟ ಬಾಲಕ. ಸ್ಥಳೀಯ ನಿವಾಸಿಗಳಾದ ಜರ್ಮನ್, ರೋಷನ್, ಲವಿಟಾ, ಸಿಸಿಲಿಯಾ ಬರೆಟ್ಟೋ, ಓಮ್ನಿ ಚಾಲಕ ರೋಬಿನ್ ಮತ್ತು ಜಾನ್ ಅಕ್ಕ ರಿಯಾ ಗಾಯಗೊಂಡಿದ್ದಾರೆ.
ಗಲ್ ಉದ್ಯೋಗಿಯಾಗಿರುವ ರೋಷನ್ ಕುಟುಂಬ ಸಮೇತ ಮಂಗಳೂರು ಬೀಚ್ ಗೆ ತೆರಳಿ ಮರಳುವ ವೇಳೆ ಬಡಗುಂಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ಮರಕ್ಕೆ ಡಿಕ್ಕಿಯಾಗಿದೆ. ಬಂಟ್ವಾಳ ಟ್ರಾಫಿಕ್ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.