ಜನವರಿ ಬಂತೆಂದರೆ, ವಿಟ್ಲದಲ್ಲಿ ಹಬ್ಬದ ಸಡಗರ. ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರಾ ಮಹೋತ್ಸವದ ಸಂಭ್ರಮದ ಕ್ಷಣಗಳಿಗೆ ವಿಟ್ಲ ಸಜ್ಜಾಗುತ್ತಿದೆ. ಹತ್ತೂರಿನಿಂದ ವಿಟ್ಲಕ್ಕೆ ಆಗಮಿಸಿ, ಜಾತ್ರಾ ಸಂಭ್ರಮ ಸವಿಯುತ್ತಾರೆ. ವಿಟ್ಲ ಜಾತ್ರೆಗೆ ಪರಂಪರಾಗತ ವೈಭವದ ಜೊತೆಗೆ ಐತಿಹಾಸಿಕ ಮಹತ್ವವೂ ಇದೆ.14ರಿಂದ 22ವರೆಗೆ ವಿಟ್ಲ ಜಾತ್ರಾ ವೈಭವ. ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ, ವೈಭವದ ಜಾತ್ರೋತ್ಸವ ಕಣ್ತುಂಬಿಸಿಕೊಳ್ಳಲು ವಿಟ್ಲದ ನಂಟು ಇರುವವರಷ್ಟೇ ಅಲ್ಲ, ಜಿಲ್ಲೆಯ ಹೊರಭಾಗದ ಕುತೂಹಲಿಗರೂ ಆಗಮಿಸಲು ಸಜ್ಜಾಗಿದ್ದಾರೆ. ನೋಡಬನ್ನಿ ವಿಟ್ಲ ಜಾತ್ರೆ.
- www.bantwalnews.com speacial
- ವಿಟ್ಲ ಜಾತ್ರೆಯ ಮಾಹಿತಿ ಇಲ್ಲಿದೆ.
- ಜನವರಿ 14ರಂದು ಕಾಲಾವಧಿ ಜಾತ್ರೋತ್ಸವ ಆರಂಭ. ಅಂದು ಧ್ವಜಾರೋಹಣದಿಂದ ಆರಂಭವಾಗಿ ಒಂಭತ್ತು ದಿನ ಉತ್ಸವಾದಿಗಳು ನಡೆಯುತ್ತವೆ.
- 14ರಂದು ಭಾನುವಾರ ಲಕ್ಷದೀಪೋತ್ಸವ ನಡೆಯಲಿದೆ. ಬೆಳಗ್ಗೆ 10ಕ್ಕೆ ಧ್ವಜಾರೋಹಣ, ರಾತ್ರಿ 8.30ಕ್ಕೆ ಉತ್ಸವ ಬಲಿ, ಕಟ್ಟೆಪೂಜೆ ಬಳಿಕ ಬಟ್ಟಲು ಕಾಣಿಕೆ.
- 15, 16, 17ರಂದು ಸಂಜೆ 6.30ಕ್ಕೆ ನಿತ್ಯೋತ್ಸವಗಳು ನಡೆಯುವುದು.
- 18ರಂದು ಗುರುವಾರ ರಾತ್ರಿ 8.30ಕ್ಕೆ ಕೇಪುವಿನಿಂದ ಶ್ರೀ ಮಲರಾಯ ದೈವದ ಭಂಡಾರ ಬರುತ್ತದೆ. ರಾತ್ರಿ 9ಕ್ಕೆ ಬಯ್ಯದ ಬಲಿ ಉತ್ಸವ ನಡೆಯಲಿದೆ.
- 19 ಶುಕ್ರವಾರ ಬೆಳಗ್ಗೆ 9.30ಕ್ಕೆ ದರ್ಶನ ಬಲಿ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ, ರಾತ್ರಿ 8ಕ್ಕೆ ನಡುದೀಪೋತ್ಸವ ಕೆರೆ ಆಯನ ನಡೆಯುವುದು.
- 20ರ ಶನಿವಾರ ರಾತ್ರಿ 9ಕ್ಕೆ ಹೂತೇರು ಉತ್ಸವ.
- 21ರಂದು ಭಾನುವಾರ ಮಹಾರಥೋತ್ಸವ ನಡೆಯಲಿದೆ.
- ಅಂದು ಬೆಳಗ್ಗೆ 9.30ಕ್ಕೆ ದರ್ಶನ ಬಲಿ, ರಾಜಾಂಗಣದ ಬಟ್ಲು ಕಾಣಿಕೆ, ಪ್ರಸಾದ ವಿತರಣೆ. ರಾತ್ರಿ 7.30ಕ್ಕೆ ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಬರುವುದು. ರಾತ್ರಿ 8ಕ್ಕೆ ಮಹಾರಥೋತ್ಸವ ಬೀದಿ ಮೆರವಣಿಗೆ, ಶಯನೋತ್ಸವ ನಡೆಯಲಿದೆ.
- 22 ಸೋಮವಾರ ಅವಭೃತ ಸ್ನಾನ (ರಾತ್ರಿ 10ಕ್ಕೆ) ಕೊಡಂಗಾಯಿಗೆ ಸವಾರಿ ಧ್ವಜಾವರೋಹಣ, ಸಂಪ್ರೋಕ್ಷಣೆ.
- 24ರಂದು ಕೇಪುವಿನ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ.
- 25ರಂದು ಗುರುವಾರ ಮಧ್ಯಾಹ್ನ ಅರಮನೆಯಲ್ಲಿ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ ಬಳಿಕ ಕೇಪುವಿಗೆ ಭಂಡಾರ ಹೊರಡುವುದು ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮಗಳು
- 14ರಂದು ಸಂಜೆ 6ರಿಂದ ಕುಣಿತ ಭಜನೆ, 7ಕ್ಕೆ ಯಕ್ಷಸಿಂಧೂರ ಪ್ರತಿಷ್ಠಾನ ವತಿಯಿಂದ ಬಾಲಕಲಾವಿದರು, ಪ್ರಸಿದ್ಧ ಕಲಾವಿದರಿಂದ ಸುದರ್ಶನ ವಿಜಯ ಮತ್ತು ಮಾಯಾ ತಿಲೋತ್ತಮೆ.
- 15ರಂದು 6.30ರಿಂದ ಗೀತಾ ಸಾರಡ್ಕ ಬಳಗದ ಗಾನವೈವಿಧ್ಯ. ರಾತ್ರಿ 9ರಿಂದ ಯಕ್ಷಗಾನ ಶ್ರೀರಾಮ ದರ್ಶನ (ಫಿಲೋಮಿನಾ ಯಕ್ಷವಾಹಿನಿ)
- 16ರಂದು ಸಂಜೆ 6ರಿಂದ ಪಾರ್ವತಿ ಗಣೇಶ ಭಟ್ ಹೊಸಮೂಲೆ ಅವರಿಂದ ಗಾನಲಹರಿ, ರಾತ್ರಿ 8ಕ್ಕೆ ಸ್ನೇಹ ಕಲಾವಿದರು ಪುಣಚ ಅವರಿಂದ ಬುಡ್ದು ಪಾಡೋಡ್ಚಿ ನಾಟಕ (ರವಿಶಂಕರ ಶಾಸ್ತ್ರೀ ಪುಣಚ ನಿರ್ದೇಶನ)
- 17ರಂದು ಸಂಜೆ 7ಕ್ಕೆ ನಯನಾ ಸತ್ಯನಾರಾಯಣ ಅವರ ಶಿಷ್ಯೆಯರ ಭರತನಾಟ್ಯ
- 18ರಂದು ಸಂಜೆ 7ಕ್ಕೆ ನೃತ್ಯದೀಪಂ ಬಾಲಕೃಷ್ಣ ಮಂಜೇಶ್ವರ ಶಿಷ್ಯರಿಂದ ನೃತ್ಯಸಂಭ್ರಮ
- 19ರಂದು ಸಂಜೆ 8ರಿಂದ ರಾಜೇಶ್ ವಿಟ್ಲ ನಿರ್ದೇಶನದ ನೃತ್ಯೋತ್ಸವ, ನೃತ್ಯ ರೂಪಕ ನಮೋ ನಮೋ ಭಾರತ
- 20ರಂದು ವಿಆರ್ ಸಿ ವಿಟ್ಲ ಅರ್ಪಿಸುವ ವಿಟ್ಲೋತ್ಸವ 2018, ರಾತ್ರಿ ಮಹಾರಥೋತ್ಸವದ ಬಳಿಕ ಬಾಲೆ ಭಗವಂತನ ಯಕ್ಷಗಾನ
- 22ರಂದು ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಯಕ್ಷಗಾನ ವೈಭವ ಸಂಜೆ 6ಕ್ಕೆ, ರಾತ್ರಿ 8ಕ್ಕೆ ಪಂಚಶ್ರೀ ಗ್ರೂಪ್ ಅರ್ಪಿಸುವ ಸ್ಟಾರ್ ನೈಟ್
ವಿಟ್ಲ ಸೀಮೆಯ ಉತ್ಸವ
ವಿಟ್ಲ ಸೀಮೆ ಅಂದರೆ ತುಳುನಾಡ ಪರಂಪರೆಯ ರಾಜಮನೆತನದ ಆಳ್ವಿಕೆಯ ಸಾಕ್ಷಿಯಾಗಿರುವ ಎರಡು ಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ 17 ಗ್ರಾಮಗಳನ್ನೊಳಗೊಂಡಿದ್ದ ಭೂಭಾಗ. ಇಂದು ಈ ಸೀಮೆಯ ಕೆಲ ಭಾಗಗಳು ಕೇರಳಕ್ಕೆ ಸೇರಿಕೊಂಡಿದೆ. ಶೈವ, ವೈಷ್ಣವ, ಸಾಧಾರಣ ಎಂಬ ಪ್ರಶಂಸೆಗೆ ಪಾತ್ರರಾದ ವಿಟ್ಲ ಅರಸು ವಂಶಜರು 5 ವೈಷ್ಣವ ದೇಗುಲ ಮತ್ತು 6 ಶಿವನ ದೇಗುಲಗಳನ್ನು ಸಂಪ್ರದಾಯನಿಷ್ಠರಾಗಿ ನಡೆಸಿಕೊಂಡು ಬಂದವರು. ಇವರ ಆಳ್ವಿಕೆಯಲ್ಲೇ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವೂ ಸಂಪ್ರದಾಯಬದ್ಧವಾದ ಭಕ್ತಿಯ, ಕಾರಣಿಕ ಕ್ಷೇತ್ರವಾಗಿ ಭಕ್ತರ ಸಂಕಷ್ಟಗಳನ್ನು ಈಡೇರಿಸುವ ಸನ್ನಿಧಿ.


ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಎಂಬ ಶಿವನ ಪಂಚಸ್ವರೂಪಗಳು ಭಾರತೀಯ ಪರಂಪರೆಯಲ್ಲಿ ಶಾಶ್ವತವಾಗಿ ಪಂಚತತ್ವಗಳನ್ನು ಪ್ರತಿನಿಧೀಕರಿಸುವ ಮೂರ್ತ ಸ್ವರೂಪಗಳು.


ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವನ್ನು 13 ಕೋಟಿ ರೂ.ಗಳ ವೆಚ್ಚದಲ್ಲಿ ಪುನರ್‌ನಿರ್ಮಿಸಿ, ಶ್ರೀದೇವರನ್ನು ಪ್ರತಿಷ್ಠಾಪಿಸಿ, ಅದ್ದೂರಿಯಿಂದ ಬ್ರಹ್ಮಕಲಶೋತ್ಸವ ನಡೆದಿದೆ. ಈ ದೇಗುಲವನ್ನು ಊರ ಪರವೂರ ಭಕ್ತರ ಸಹಕಾರದಲ್ಲಿ ಪುನರ್ನಿರ್ಮಾಣ ಮಾಡಲಾಯಿತು. ಇದಕ್ಕಾಗಿ ಅಸಂಖ್ಯ ಭಕ್ತಾದಿಗಳು ತಮ್ಮ ವಿಶಿಷ್ಟ ಕೊಡುಗೆಗಳನ್ನು ನೀಡಿದ್ದಾರೆ.


ಎಲ್.ಎನ್.ಕುಡೂರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು.


ವಿ.ಜನಾರ್ದನ ವರ್ಮ ಅರಸರು ಆನುವಂಶೀಯ ಆಡಳಿತದಾರರು.
ವಿಳಾಸ: ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಅಂಚೆ : ವಿಟ್ಲ, ಬಂಟ್ವಾಳ ತಾಲೂಕು, ದ.ಕ. – 574242