ನೇರಳಕಟ್ಟೆ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಇಲ್ಲಿನ ಶಾಲಾ ಮೈದಾನದಲ್ಲಿ ನಡೆದ ೫೫ ಕೆಜಿ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಕೆದಿಲ ತಂಡಕ್ಕೆ ಪ್ರಶಸ್ತಿ ಲಭಿಸಿದೆ.
28 ತಂಡಗಳು ಭಾಗವಹಿಸಿದ್ದ ಈ ಕಬಡ್ಡಿ ಪಂದ್ಯಾಟದಲ್ಲಿ ಸೆವೆನ್ ಬ್ರದರ್ಸ್ ಕೆದಿಲ ತಂಡವು ಪ್ರಥಮ, ಗುರುದೇವ ಕ್ರಿಕೆಟರ್‍ಸ್ ಪೆರಾಜೆ ದ್ವಿತೀಯ, ಟಾಪ್ ಆಂಡ್ ಟಾಪ್ ಕುಡ್ತಮುಗೇರು ತಂಡ ತೃತೀಯ ಹಾಗೂ ಇಂಡಿಯನ್ ಪಾಟ್ರಕೋಡಿ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು.
ಕೆದಿಲ ತಂಡದ ಸಾಬಿತ್ ಉತ್ತಮ ದಾಳಿಗಾರ, ಬಶೀರ್ ಉತ್ತಮ ಹಿಡಿತಗಾರ ಹಾಗೂ ಪೆರಾಜೆ ತಂಡದ ಶಾಫಿ ಸವ್ಯಸಾಚಿ ಆಟಗಾರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.
ಮಾಣಿ ಹಾಗೂ ಉರ್ದಿಲ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯಾಟದಲ್ಲಿ ಮಾಣಿ ತಂಡವು ಜಯಗಳಿಸಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಶಾಂತಿ-ಸೌಹಾರ್ದತೆಯ ವಾತಾವರಣವನ್ನು ಗಟ್ಟಿಗೊಳಿಸುವಲ್ಲಿ ಕ್ರೀಡಾಕೂಟಗಳು ಸಹಕಾರಿಯಾಗಿದೆ ಎಂದರು.
ಮಾಣಿ ಗ್ರಾ.ಪಂ. ಸದಸ್ಯ ಸುದೀಪ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಮಾಣಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ವಿಕೇಶ್ ಶೆಟ್ಟಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ಸಲೀಂ ಬರಿಮಾರು, ಅನಂತಾಡಿ ಗ್ರಾ.ಪಂ. ಮಾಜಿ ಸದಸ್ಯ ಅಬ್ಬಾಸ್ ಎನ್., ಹಿರಿಯ ಕಬಡ್ಡಿ ಆಟಗಾರ ಮಜೀದ್ ಮಾಣಿ, ಬೇಬಿ ಸುವರ್ಣ ಕೊಡಾಜೆ, ನೇರಳಕಟ್ಟೆ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ರೋಹಿತಾಶ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ನೇರಳಕಟ್ಟೆ ಯುವಕ ಮಂಡಲ ಮಾಜಿ ಅಧ್ಯಕ್ಷ ಜ್ಞಾನದೇವ್ ಕಾಮತ್, ನೇರಳಕಟ್ಟೆ ಫ್ರೆಂಡ್ಸ್ ಉಪಾಧ್ಯಕ್ಷ ಚಂದ್ರಶೇಖರ ಪೆರಾಜೆ, ಜೊತೆ ಕಾರ್ಯದರ್ಶಿ ಮುನೀರ್ ಕೆಂಪುಗುಡ್ಡೆ, ಮನ್ಸೂರ್ ಪಂತಡ್ಕ, ನೇರಳಕಟ್ಟೆ ಶಾಲಾ ಎಸ್‌ಡಿಎಂಸಿ ಸದಸ್ಯರಾದ ಅಬ್ದುಲ್ ರಹಿಮಾನ್ (ಅದ್ದು) ಪರ್ಲೊಟ್ಟು, ಅಬೂಬಕ್ಕರ್ (ಅಬ್ಬು) ನೇರಳಕಟ್ಟೆ, ಆಸಿಫ್ ನೇರಳಕಟ್ಟೆ, ಹಿರಿಯ ಕಬಡ್ಡಿ ಆಟಗಾರ ಹಬೀಬ್ ಕೊಡಾಜೆ, ಹಮೀದ್ ಮಾಣಿ, ಇಕ್ಬಾಲ್ ಮಾಣಿ, ಹಿರಿಯ ವಾಲಿಬಾಲ್ ಆಟಗಾರ ಎನ್.ಪಿ. ಉಮ್ಮರ್ ನೇರಳಕಟ್ಟೆ, ಮಾಣಿ ವಲಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸಂದೀಪ್ ಮಾಣಿ, ಪ್ರಮುಖರಾದ ಶಾಹುಲ್ ಹಮೀದ್ ಪರ್ಲೊಟ್ಟು, ಸಲೀಂ ನ್ಯೂಸ್ಟಾರ್ ಮಾಣಿ, ಝುಬೈರ್ ಪರ್ಲೊಟ್ಟು, ಶರೀಫ್ ಭಗವಂತಕೋಡಿ, ಉಮ್ಮರ್ ಗಣೇಶನಗರ, ಶರೀಫ್ ಪರ್ಲೊಟ್ಟು, ಅಮ್ಮಿ ಮಾಣಿ, ಮಧುಕರ ನಾಯಕ್, ನವೀನ, ಉದ್ಯಮಿ ಜಿನ್ನಪ್ಪ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಕರ್ನಾಟಕ ಜನತಾ ಪಕ್ಷದ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕ್ರೀಡಾಂಗಣ ಉದ್ಘಾಟಿಸಿದರು. ಡಿ.ಜೆ. ಸಿರಾಜ್ ಮತ್ತು ಸೀತಾರಾಮ ಇವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಪದ್ಮನಾಭ ಕನಪಾದೆ, ಪ್ರಕಾಶ್ ಮಾಣಿ ಹಾಗೂ ಪ್ರದೀಪ್ ತೀರ್ಪುಗಾರಾಗಿ ಸಹಕರಿಸಿದರು.
ನೇರಳಕಟ್ಟೆ ಫ್ರೆಂಡ್ಸ್ ಅಧ್ಯಕ್ಷ ಲತೀಫ್ ನೇರಳಕಟ್ಟೆ ಸ್ವಾಗತಿಸಿ, ಕಬೀರ್ ಕೆಂಪುಗುಡ್ಡೆ ವಂದಿಸಿದರು. ಇರ್ಫಾನ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.