ಬಂಟ್ವಾಳ ತಾಲೂಕಿನ ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ ಮಕ್ಕಳು ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ 2017-18ನೇ ಸಾಲಿನ ರಾಷ್ಟ್ರೀಯ ಕಲೋತ್ಸವ ಸ್ಪರ್ಧೆಯ ರಂಗಭೂಮಿ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ.
ಹೈಸ್ಕೂಲಿನ ಕಾರ್ಯಾಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಮಾರ್ಗದರ್ಶನದಲ್ಲಿ ಮುಖ್ಯೋಪಾಧ್ಯಾಯ ಕಮಲಾಕ್ಷ ಕಲ್ಲಡ್ಕ ನೇತೃತ್ವದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಚಿನ್ನಪ್ಪ ಕೆ. ಜಾಲ್ಸೂರು ನಿರ್ದೇಶನದಲ್ಲಿ ಶಾಲಾ ಮಕ್ಕಳಾದ ಜಯಗೋವಿಂದ, ಧನುಷ್, ಭರತ್,ನವಿತ್, ಲಿಖಿತಾ,ಕಾವ್ಯಶ್ರೀ, ನಯನ, ಪಾವನಾ,ಪ್ರಿಯಾಂಕ ಮತ್ತು ಚಂದ್ರಿಕಾ ಅಭಿನಯಿಸಿದ ಯಕ್ಷನಾಟಕ ಕಿಷಿಂಧಾ ಕೌತುಕ ವಾಲಿ, ಸುಗ್ರೀವರ ಕಾಳಗದ ಯಕ್ಷನಾಟಕ ರೂಪ.
ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಹೈಸ್ಕೂಲ್ ವಿದ್ಯಾರ್ಥಿಗಳು ಕಿಷ್ಕಿಂಧಾ ಕೌತುಕ ಎಂಬ ಯಕ್ಷನಾಟಕವನ್ನು ಪ್ರದರ್ಶಿಸಿದ್ದರು. ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಕಲೋತ್ಸವದಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಬೊಂಡಾಲ ಹೈಸ್ಕೂಲಿನ ಹತ್ತು ಮಕ್ಕಳ ತಂಡ ಪ್ರಥಮ ಬಹುಮಾನ ಗಳಿಸಿ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿತ್ತು.