• ಎ.ಜಿ.ರವಿಶಂಕರ್

www.bantwalnews.com

ಬಾರ್ಲಿ ಕೂಡ ಗೊಧಿಯಂತೆ  ನಾರಿನ ಅಂಶ ಇರುವ ಸತ್ವಪೂರಿತ ಆಹಾರ ದ್ರವ್ಯವಾಗಿದ್ದು ಹಲವಾರು ಸಂದರ್ಭಗಳಲ್ಲಿ ಉತ್ತಮ ಔಷಧವಾಗಿ ಕೆಲಸ ಮಾಡುತ್ತದೆ. ಇದನ್ನು ಸಾಮಾನ್ಯವಾಗಿ  ಗಂಜಿ ರೂಪದಲ್ಲಿ ಅಥವಾ ಬಾರ್ಲಿಯನ್ನು ಬೇಯಿಸಿ ನೀರು ತೆಗೆದು ಆ ನೀರನ್ನು ಔಷಧವಾಗಿ ಬಳಸುತ್ತಾರೆ.

  1. ಬಾರ್ಲಿ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ನಾರಿನ ಅಂಶ ಇರುವ ಕಾರಣ ಮಲಬದ್ಧತೆಯನ್ನು ನಿವಾರಿಸುತ್ತದೆ.
  2. ಉಷ್ಣ ಸಂಬಧಿ ಹೊಟ್ಟೆನೋವನ್ನು ಬಾರ್ಲಿ ಗಂಜಿ ಅಥವಾ ನೀರು ಸೇವಿಸುವುದರಿಂದ ಹೋಗಲಾಡಿಸಬಹುದು.
  3. ಅತಿಯಾದ ಬಾಯಾರಿಕೆಯಾದಾಗ ಬಾರ್ಲಿನೀರಿಗೆ ಸಕ್ಕರೆಹಾಕಿ ಕುಡಿಯಬೇಕು. ಇದರಿಂದ ಶರೀರದ ನೀರಿನ ಪ್ರಮಾಣ ಕೊಡಾ ಸಮಸ್ಥಿತಿಗೆ ಬರುತ್ತದೆ.
  4. ಬರ್ಲಿಯನ್ನು ಸೇವಿಸುವುದರಿಂದ ಭೇದಿಯ ಸಮಸ್ಯೆಯು ನಿವಾರಣೆಯಾಗುತ್ತದೆ.
  5. ಇದು ಶರೀರದಲ್ಲಿ ರಕ್ತ ಅಥವಾ ಯಕೃತ್ ಮುಂತಾದ ಅಂಗಾಂಗಗಳ ಕಲ್ಮಶವನ್ನು ಹೋಗಲಾಡಿಸಿ ಶರೀರವನ್ನು ಶುದ್ಧೀಕರಿಸುತ್ತದೆ.
  6. ಇದರಲ್ಲಿರುವ ನಾರಿನ ಅಂಶವು ಪಿತ್ತಕೋಶದ ಕಲ್ಲಿನ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.
  7. ಇದು ಶರೀರದಲ್ಲಿ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ.
  8. ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ವಾಕರಿಕೆ ಅಥವಾ ವಾಂತಿಯು ಬಾರ್ಲಿ ನೀರಿಗೆ ಸಕ್ಕರೆ ಹಾಕಿ ಕುಡಿಯುವುದರಿಂದ ವಾಸಿಯಾಗುತ್ತದೆ.
  9. ಬಾರ್ಲಿ ಸೇವನೆಯಿಂದ ಗರ್ಭಿಣಿಯರಲ್ಲಿ ಗರ್ಭಸ್ರಾವ ಅಥವಾ ಗರ್ಭಪಾತದ ಸಾಧ್ಯತೆಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ.
  10. ಬಾರ್ಲಿ ಬಾಣಂತಿಯರಲ್ಲಿ ಮೊಲೆ ಹಾಲಿನ ಪ್ರಮಾಣವನ್ನು ಅಧಿಕಗೊಳಿಸುತ್ತದೆ.
  11. ಬಾರ್ಲಿ ಶರೀರದ ಕೆಟ್ಟ ಕೊಬ್ಬನ್ನು ಹೋಗಲಾಡಿಸುವ ಮೂಲಕ ಸ್ಥೂಲಕಾಯವನ್ನು ಹೋಗಲಾಡಿಸುತ್ತದೆ ಮತ್ತು ದೇಹದ ತೂಕವನ್ನು ಹತೋಟಿಯಲ್ಲಿ ಇಡುತ್ತದೆ.
  12. ಬಾರ್ಲಿ ಗಂಜಿಯು ಮಧುಮೇಹ ರೋಗಿಗಳಿಗೆ ಉತ್ತಮ ಆಹಾರವಾಗಿದ್ದು ರೋಗವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
  13. ಬಾರ್ಲಿ ನೀರು ಉರಿಮೂತ್ರ ಮುಂತಾದ ಮೂತ್ರಾಂಗ ವ್ಯೂಹದ ಸಮಸ್ಯೆಯಲ್ಲಿ ಉತ್ತಮ ದ್ರವ್ಯವಾಗಿದ್ದು ಇದು ಮೂತ್ರಕೋಶದ ಕಲ್ಲನ್ನು ಸಹ ಹೋಗಲಾಡಿಸುತ್ತದೆ.
  14. ಇದು ಹೃದಯಕ್ಕೆ ಸ್ನೇಹಿಯಾಗಿದ್ದು ರಕ್ತದ ಒತ್ತಡವನ್ನು ಹತೋಟಿಯಲ್ಲಿ ಇಡುತ್ತದೆ ಮತ್ತು ಹೃದಯ ಸಂಬಂಧಿ ಖಾಯಿಲೆಗಳ ಸಾಧ್ಯತೆಯನ್ನು ಕಡಿಮೆಮಾದುತ್ತದೆ.
  15. ಬಾರ್ಲಿಯನ್ನು ನುಣ್ಣಗೆ ಅರೆದು ಚರ್ಮಕ್ಕೆ ಲೇಪಿಸುವುದರಿಂದ ಚರ್ಮದ ಕಾಂತಿ ಅಧಿಕವಾಗುತ್ತದೆ.
  16. ಬಾರ್ಲಿ ಸೇವನೆಯಿಂದ ಮೂಳೆಗಳು ಮತ್ತು ಹಲ್ಲುಗಳು ದ್ರುಢವಾಗುತ್ತವೆ ಮತ್ತು ಸಂಧುಗಳ ನೋವು ಹತೋಟಿಯಲ್ಲಿ ಇರುತ್ತದೆ.

 

Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts