ಯುವ ಶಕ್ತಿ ಸಂಘಟನೆಗಳಲ್ಲಿ ಹೆಚ್ಚು ತೊಡಗಿಕೊಂಡಾಗ ಸಮಾಜವನ್ನು ಮುಂಚೂಣಿಗೆ ಕೊಂಡೊಯ್ಯಬಹುದು ಎಂದು ಶ್ರೀರಾಮ ಫ್ರೆಂಡ್ಸ್ ಗೌರವಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಹೇಳಿದರು.
ವಿಟ್ಲ ಮಾದರಿ ಶಾಲೆಯಲ್ಲಿ ಲಯನ್ಸ್, ಲಯನೆಸ್ ಮತ್ತು ಲಿಯೋ ಕ್ಲಬ್, ವಿಟ್ಲ ಶ್ರೀರಾಮ ಫ್ರೆಂಡ್ಸ್ ಮತ್ತು ಜಿಲ್ಲಾ ವೆನ್ ಲಾಕ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರ, ಮಧುಮೇಹ ತಪಾಸಣೆ, ರಕ್ತದ ವರ್ಗೀಕರಣ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ವೈದ್ಯಾಧಿಕಾರಿ ಡಾ. ಶರತ್ ಮಾತನಾಡಿ ನಿರಂತರ ರಕ್ತದಾನದಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಯನ್ನು ತಪ್ಪಿಸಬಹುದಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗದ ಏಡ್ಸ್ ನೋಡಲ್ ಅಧಿಕಾರಿ ಡಾ. ಬದ್ರುದ್ದೀನ್, ಲಯನ್ಸ್ ಪಿಆರ್‌ಒ ಡಾ.ಇರ್ಮಾಡಿ ಶರಶ್ಚಂದ್ರ ಶೆಟ್ಟಿ, ವಿಟ್ಲ ಶ್ರೀರಾಮ್ ಪ್ರೆಂಡ್ಸ್ ಅಧ್ಯಕ್ಷ ರವಿಕುಮಾರ್ ಕಟ್ಟೆ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ, ಚಂದಳಿಕೆ ವೀರಾಂಜನೇಯ ವ್ಯಾಯಾಮ ಶಾಲೆಯ ದೇಜಪ್ಪ ಪೂಜಾರಿ ನಿಡ್ಯ, ವಿಟ್ಲ ಲಯನ್ಸ್ ಕ್ಲಬ್ ಕಾರ್ಯದರ್ಶಿ ಗಂಗಾಧರ, ಕೋಶಾಧಿಕಾರಿ ಮನೋಜ್ ಕುಮಾರ್ ರೈ, ಲಿಯೋ ಕ್ಲಬ್ ಅಧ್ಯಕ್ಷೆ ಜಾಸ್ಮಿನ್ ಮೊದಲಾದವರು ಉಪಸ್ಥಿತರಿದ್ದರು.
ಮಾನ್ವಿ ಶೆಟ್ಟಿ ಪ್ರಾರ್ಥಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ವಿನ್ನಿ ಮಸ್ಕರೇಂಞಸ್ ಸ್ವಾಗತಿಸಿದರು. ಡಾ. ಗೀತಾ ಪ್ರಕಾಶ್ ಪ್ರಸ್ತಾವನೆಗೈದರು. ಶ್ರೀರಾಮ ಫ್ರೆಂಡ್ಸ್ ಗೌರವ ಸಲಹೆಗಾರ ರಾಮದಾಸ ಶೆಟ್ಟಿ ವಂದಿಸಿದರು. ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿ ಮಂಗೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.