ಬಂಟ್ವಾಳ ತಾಲೂಕು ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳು ವರ್ಗಾವಣೆಗೊಂಡಿರುವ ಪ್ರಯುಕ್ತ ಇಂದು ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಅಧ್ಯಕ್ಷತೆಯಲ್ಲಿ ಮಿನಿ ವಿಧಾನ ಸೌಧದ ಹಾಲಿನಲ್ಲಿ ನವೀನ್ ಮತ್ತು ಶ್ವೇತ ಅವರನ್ನು ಬೀಳ್ಕೊಡುಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶುಭ ಹಾರೈಸಿದ ತಹಶೀಲ್ದಾರ್ ಪುರಂದರ ಹೆಗ್ಡೆ ಅವರು, ಗ್ರಾಮಲೆಕ್ಕಾಧಿಕಾರಿಗಳು ಗ್ರಾಮೀಣ ಪ್ರದೇಶದ ಜನರಿಗೆ ನೇರ ಹಾಗೂ ನಿರಂತರವಾಗಿ ದೊರೆಯುವ ನಿಜಾರ್ಥದ ಜನ ಸ್ನೇಹಿ ಅಧಿಕಾರಿಗಳು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿಗಳನ್ನು ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆಯ ಸಹೋದ್ಯೋಗಿಗಳು ಸನ್ಮಾನಿಸಿ ವಿದಾಯ ಕೋರಿದರು. ಅವರ ಮುಂದಿನ ವೃತ್ತಿ ಜೀವನ ಉತ್ತಮ ಸೇವೆಯೊಂದಿಗೆ ಸಾಗಲಿ ಎಂದು ಶುಭ ಹಾರೈಸಿದರು.
ಉಪತಹಶೀಲ್ದಾರ್ ಗಳಾದ ಗ್ರೆಟ್ಟಾ ಮಸ್ಕರೇಂಞಸ್, ಸೀತಾರಾಮ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ದಿವಾಕರ ಮುಗುಳಿಯ, ನವೀನ್ ಬೆಂಜನಪದವು
ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು. ರಾಮ ಕಾಟಿಪಳ್ಳ ಸ್ವಾಗತಿಸಿ, ನವೀನ್ ಬೆಂಜನಪದವು ವಂದಿಸಿದರು.
ಸಜೀಪ ಮೂಡ ಮುನ್ನೂರು ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ನವೀನ್ ಅವರನ್ನು ಮಂಡ್ಯ, ಮೇರಮಜಲು- ಕೊಡ್ಮಾಣ್ ಗ್ರಾಮಲೆಕ್ಕಾಧಿಕಾರಿಯಾಗಿದ್ದ ಶ್ವೇತ ಅವರನ್ನು ಮಂಗಳೂರು ತಾಲೂಕಿನ ಪೆರ್ಮನ್ನೂರು (ತೊಕ್ಕೊಟ್ಟು) ಗ್ರಾಮಕ್ಕೆ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.