ಹಿಂದು ಜಾಗರಣಾ ವೇದಿಕೆ ಪುತ್ತೂರು ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಕಲ್ಲಡ್ಕ ಗಡೀಪಾರು ಆದೇಶವನ್ನು ಹಿಂಪಡೆಯಲು ಹಿಂದೂ ಜಾಗರಣಾ ವೇದಿಕೆ ಒತ್ತಾಯಿಸಿದೆ.
ಈ ಕುರಿತು ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ ಪತ್ರಿಕಾ ಹೇಳಿಕೆ ನೀಡಿದ್ದು, ವೇದಿಕೆಯ ಪುತ್ತೂರು ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಅವರನ್ನು ಜಿಲ್ಲೆಯಿಂದ ಗಡೀಪಾರು ಮಾಡುವ ಮೂಲಕ ಸರಕಾರ ದೌರ್ಜನ್ಯದ ಪರಾಕಾಷ್ಠೆಗೆ ತಲುಪಿದೆ. ಪುತ್ತೂರಿನಲ್ಲೂ ವೇದಿಕೆ ಪ್ರಮುಖರ ಮೇಲೆ ವಿನಾ ಕಾರಣ ಮೊಕದ್ದಮೆ ದಾಖಲಿಸಲಾಗಿದ್ದು, ಈ ಕ್ರಮ ಸರಕಾರಿ ಪ್ರೇರಿತ ದಬ್ಬಾಳಿಕೆಗೆ ಸಾಕ್ಷಿ ಎಂದು ಕಾರಂತ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ವೇದಿಕೆ ಪ್ರಬಲವಾದ ಜನಾಂದೋಲನ ಕೈಗೊಳ್ಳಲಿದೆ. ಮೆರವಣಿಗೆ, ಖಂಡನಾ ಸಭೆ ಅಗತ್ಯ ಬಿದ್ದರೆ ಹರತಾಳದಂಥ ಗಂಭೀರ ಹೋರಾಟ ನಡೆಸಿ ತುಷ್ಠೀಕರಣ ನಡೆಸುವ ರಾಜಕಾರಣಿಗಳಿಗೆ ತಕ್ಕಪಾಠ ಕಲಿಸಲಿದೆ ಎಂದು ಕಾರಂತ ಹೇಳಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…