ಯುವ ಮನಸ್ಸುಗಳಿಗೆ ಸೂಕ್ತ ರೀತಿಯತರಬೇತಿ ನೀಡುವ ಮೂಲಕ ಸಮರ್ಥ ರಾಷ್ಟ್ರವನ್ನು ಕಟ್ಟಬಹುದು ಎಂದು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಸಜೀಪ ಮೂಡದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಭಿಪ್ರಾಯಪಟ್ಟರು.
ಅವರು ಪಾಣೆಮಂಗಳೂರು ಮೆಲ್ಕಾರ್ ಬಿರ್ವ ಸೆಂಟರ್ ನಲ್ಲಿಯುವವಾಹಿನಿ(ರಿ) ಕೇಂದ್ರ ಸಮಿತಿಯಆಶ್ರಯದಲ್ಲಿ ಹಾಗೂ ಯುವವಾಹಿನಿ(ರಿ) ಬಂಟ್ವಾಳ ತಾಲೂಕುಘಟಕದಆತಿಥ್ಯದಲ್ಲಿ ನಡೆದಕಾಲೇಜು ವಿದ್ಯಾರ್ಥಿಗಳ ಶೈಕ್ಷಣಿಕ, ವೃತ್ತಿಮಾರ್ಗದರ್ಶನ ತರಬೇತಿಯ ರಾಷ್ಟ್ರೀಯ ಕಾರ್ಯಾಗಾರ ಅನ್ವೇಷಣಾ ೨೦೧೭*ನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಲಯನ್ಸ್ ಜಿಲ್ಲಾ ಸಂಯೋಜಕ ಡಾ. ಗೀತಪ್ರಕಾಶ್, ಬಂಟ್ವಾಳ ರೋಟರಿ ಕ್ಲಬ್‌ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ, ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ ಗೌರವ ಪ್ರಧಾನ ಕಾರ್ಯದರ್ಶಿ ಬಿ. ತಮ್ಮಯ, ಜಿಲ್ಲಾ ಕೆ.ಡಿ.ಪಿ ಸದಸ್ಯೆ ಜಯಂತಿ ವಿ ಪೂಜಾರಿ, ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲಿಯಾನ್, ಎಸ್.ಕೆ ಬಿಲ್ಡರ್ಸ್ ಮಂಗಳೂರಿನ ಸಂತೋಷ್ ಕುಮಾರ್ ಕೊಟ್ಟಿಂಜ ಭಾಗವಹಿಸಿ ಕಾರ್ಯಾಗಾರಕ್ಕೆ ಶುಭ ಹಾರೈಸಿದರು.
ಯುವವಾಹಿನಿ ಕೇಂದ್ತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳು ಕಾರ್ಯಾಗಾರದ ಸಂಪೂರ್ಣ ಪ್ರಯೋಜನ ಪಡೆದುಕೊಂಡಾಗ ಮಾತ್ರ ಈ ಕಾರ್ಯಾಗಾರ ಯಶಸ್ವಿಯಾಗುತ್ತದೆ ಎಂದರು.
ಯುವವಾಹಿನಿ(ರಿ) ಬಂಟ್ವಾಳ ಘಟಕದ ಅಧ್ಯಕ್ಷ ಲೋಕೇಶ್ ಸುವರ್ಣ ಅಲೆತ್ತೂರು , ವಿದ್ಯಾರ್ಥಿಸಂಘಟನಾ ನಿರ್ದೇಶಕರಾದ ಜಯಶ್ರೀ ಕರ್ಕೇರ, ಸುಲತಾ, ಕೀರ್ತನಾ, ರಚನಾ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕು.ಸಹನಾ ಪ್ರಾರ್ಥಿಸಿದರು. ಅನ್ವೇಷಣಾ ಕಾರ್ಯಾಗಾರದ ಸಂಯೋಜಕ ಚೇತನ್‌ಎಂ., ಸ್ವಾಗತಿಸಿದರು. ಯುವವಾಹಿನಿ(ರಿ) ಕೇಂದ್ರ ಸಮಿತಿಯ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಬೃಜೇಶ್‌ಕುಮಾರ್ ವಂದಿಸಿದರು.
ಯುವವಾಹಿನಿ(ರಿ) ಬಂಟ್ವಾಳ ಘಟಕದ ಕಾರ್ಯದರ್ಶಿ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು. ಆರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.