ಬಂಟ್ವಾಳ

ವಕ್ಫ್ ಸಂಸ್ಥೆಗಳ ಅಭಿವೃದ್ಧಿಗೆ 54 ಲಕ್ಷ ರೂ ಅನುದಾನ: ರೈ


 

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಕ್ಫ್ ಸಂಸ್ಥೆಗಳ ದುರಸ್ತಿ ಮತ್ತು ಅಭಿವೃದ್ಧಿಗೆ 54 ಲಕ್ಷ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ಒಟ್ಟು 27 ಸಂಸ್ಥೆಗಳಿಗೆ ತಲಾ 2 ಲಕ್ಷ ರೂಗಳಂತೆ ಅನುದಾನ ಮಂಜೂರು ಮಾಡಲಾಗಿದ್ದು ಅನುದಾನ ಪಡೆಯಲಿರುವ ಸಂಸ್ಥೆಗಳ ವಿವರ ಕೆಳಗಿನಂತಿದೆಬಂಟ್ವಾಳ ತಾಲೂಕು ಬೋಳಂತೂರು ರಹ್ಮಾನಿಯ ಜುಮ್ಮಾ ಮಸೀದಿ, ವೀರಕಂಬ ಗ್ರಾಮದ ಕೆಲಿಂಜ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಬಿ.ಮೂಡ ಗ್ರಾಮದ ಮೊಡಂಕಾಪುಪಲ್ಲಮಜಲು ಹಯಾತುಲ್ ಇಸ್ಲಾಂ ಜುಮ್ಮಾ ಮಸೀದಿ, ಪಲ್ಲಮಜಲು ಹಿದಾಯತುಲ್ ಇಸ್ಲಾಂ ಮಸೀದಿ, ಗೋಳ್ತಮಜಲು ಗ್ರಾಮದ ರಹಮಾನಿಯಾ ಮಸೀದಿ, ಕಲ್ಲಡ್ಕ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಕನ್ಯಾನ ಗ್ರಾಮದ ಬೈರಿಕಟ್ಟೆ ಜಲಾಲಿಯಾ ಜುಮ್ಮಾ ಮಸೀದಿ, ಅಂಗ್ರಿ ಬದ್ರಿಯಾ ಜುಮ್ಮಾ ಮಸೀದಿ, ಕುಕ್ಕಾಜೆ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಸಜೀಪಮೂಡ ಗ್ರಾಮದ ಕೊಳಕೆ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಸಜೀಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಮೊಹಿಯುದ್ದೀನ್ ಜುಮ್ಮಾ ಮಸೀದಿ, ಮಂಚಿ ಗ್ರಾಮದ ಮೊಹಮ್ಮದೀಯಾ ಜುಮ್ಮಾ ಮಸೀದಿ, ಕೊಳ್ನಾಡು ಗ್ರಾಮದ ಬಾರೆಬೆಟ್ಟುಸೆರ್ಕಳ ಬದ್ರಿಯಾ ಜುಮ್ಮಾ ಮಸೀದಿ, ಮಂಚಿಕೊಳ್ನಾಡು ಹಿಮಾಯತುಲ್ ಇಸ್ಲಾಂ ಮದರಸ, ವಿಟ್ಲಪಡ್ನೂರು ಗ್ರಾಮದ ಕೊಡಂಗಾಯಿಕಡಂಬು ಜುಮ್ಮಾ ಮಸೀದಿ, ಕುಕ್ಕಿಲ ಬದ್ರಿಯಾ ಜುಮ್ಮಾ ಮಸೀದಿ, ಸರಪಾಡಿ ಗ್ರಾಮದ ಪೆರ್ಲ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಹಿದಾಯತುಲ್ ಇಸ್ಲಾಂ ಮದರಸ, ಕರಿಯಂಗಳ ಗ್ರಾಮದ ಬಡಕಬೈಲು ಬದ್ರಿಯಾ ಜುಮ್ಮಾ ಮಸೀದಿ, ಬಡಕಬೈಲ್ಗಾಣೆಮಾರ್ ಅಲ್ ಅಮನ್ ಎಜ್ಯುಕೇಶನ್ ಟ್ರಸ್ಟ್, ಅರಳ ಗ್ರಾಮದ ಮುಲಾರಪಟ್ನ ಮೊಹಿಯುದ್ದೀನ್ ಜುಮ್ಮಾ ಮಸೀದಿ, ಆಚಾರಿಬೆಟ್ಟು ಅಲ್ಬದ್ರಿಯಾ ಮಸೀದಿ ಮತ್ತು ಮದರಸಮದ್ಯಾಲ ಮೊಹಿಯುದ್ದೀನ್ ಜುಮ್ಮಾ ಮಸೀದಿ ಅಸ್ರಫಿಯುತುಲ್ ಮದರಸ, ಶುಂಠಿಹಿತ್ಲು ಹಿದಾಯತುಲ್ ಇಸ್ಲಾಂ ಜುಮ್ಮಾ ಮಸೀದಿ, ಪಾದೆ ದಾರುಲ್ ಸಲಾಮ್ ಅರೆಬಿಕ್ ಮದರಸ, ಮುಲಾರಪಟ್ನಆಝಾದ್ನಗರ ಬದ್ರಿಯಾ ಮಸೀದಿ, ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ಮೊಹಿಯುದ್ದೀನ್ ಜುಮ್ಮಾ ಮಸೀದಿ ಹಾಗೂ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಬದ್ರಿಯಾ ಜುಮ್ಮಾ ಮಸೀದಿಗೆ ಅನುದಾನ ಮಂಜೂರಾಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ