ಫರಂಗಿಪೇಟೆ ಪುದು ಮಾಪ್ಲ ಶಾಲೆ ವಾರ್ಷಿಕೋತ್ಸವ ಟುಡೇ ಫೌಂಡೇಶನ್ ಫರಂಗಿಪೇಟೆ ಸಹಯೋಗದಲ್ಲಿ ನಡೆಯಿತು. ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ ಉದ್ಘಾಟಿಸಿದರು. ಟುಡೇ ಫೌಂಡೇಶನ್ ಅಧ್ಯಕ್ಷ ಉಮ್ಮರ್ ಫಾರೂಕ್ ಶಾಲೆ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಸೀರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯೆ ಪದ್ಮಶ್ರೀ, ಪರಂಗಿಪೇಟೆ ಮಸೀದಿ ಅದ್ಯಕ್ಷ ಮೊಹಮ್ಮದ್ ಬಾವ, ಖಾದರ್, ಅಬೂಬಕ್ಕರ್, ಅಲ್ಪಸಂಖ್ಯಾತ ಘಟಕದ ಮುಡಿಪು ಅದ್ಯಕ್ಷ ಇಮ್ತಿಯಾಝ್, ಮಜೀದ್, ಯುನೈಟೆಡ್ ಸ್ಪೋಟ್ಸ್ ಗೌರವಾದ್ಯಕ್ಷ ಗಫೂರು ದುಬಾಯಿ, ಸುಹಾ ಡೈನ್ ಮಾಲಕರಾದ ಬದ್ರುನ್ನೀಶಾ, ಶಾಲಾ ಅದ್ಯಾಪಕರಾದ ಶಕುಂತಲಾ, ಸುನಿತಾ, ಲವಿನ ಡೇಸಾ, ಪ್ರಬಾವತಿ ಬಿ, ಜ್ಯೋತಿ ಪಿಂಟೋ, ಅರ್ಪಿತ್, ಸಿಂತಿಯಾ ಲಿಡಿಯಾ ಮೊಂತೆರೋ ಮತ್ತಿತರರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…