ಬಂಟ್ವಾಳ

ಪ್ಲಾಸ್ಟಿಕ್ ಬಳಸದೆ ಪರಿಸರ ಉಳಿಸಿ

ಪ್ಲಾಸ್ಟಿಕ್ ಕುರಿತು ನಿವೃತ್ತ ಉಪನ್ಯಾಸಕ ರಾಜಮಣಿ ರಾಮಕುಂಜ ಬರೆದಿರುವ ’ಪ್ಲಾಸ್ಟಿಕ್ ಪ್ಲಾಸ್ಟಿಕ್’ ಕೈಪಿಡಿ ಹಾಗೂ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳ ಕುರಿತು ಎಚ್ಚರಿಕೆ ನೀಡುವ ಫಲಕ ಬಿ.ಸಿ.ರೋಡಿನ ಕೈಕಂಬದ ಅವರ ನಿವಾಸದಲ್ಲಿ ಬಿಡುಗಡೆಗೊಂಡಿತು.

ಫಲಕ ಬಿಡುಗಡೆಗೊಳಿಸಿದ ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಬಂಗೇರ ಮಾತನಾಡಿ, ಪ್ಲಾಸ್ಟಿಕ್‌ನಿಂದಾಗುವ ದುಷ್ಪರಿಣಾಮಗಳ ಕುರಿತು ಜನರು ಎಚ್ಚೆತ್ತುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಿತಗೊಳಿಸಿ ಸ್ವಚ್ಛ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

ಪುಸ್ತಕ ಬಿಡುಗಡೆಗೊಳಿಸಿದ ಬಂಟ್ವಾಳ ಕನ್ನಡ ಭವನ ನಿರ್ಮಾಣ ಸಮಿತಿಯ ಸಂಚಾಲಕ ಗಂಗಾಧರ್ ಭಟ್ ಕೊಳಕೆ ಮಾತನಾಡಿ, ಸಂಘಟನೆಯೊಂದು ಮಾಡಬೇಕಾದ ಕಾರ್ಯವನ್ನು ವ್ಯಕ್ತಿಯೊಬ್ಬರು ಮಾಡುತ್ತಿರುವುದು ಪ್ರಶಂಸನೀಯ. ಇದರಲ್ಲಿ ನಾವೆಲ್ಲರೂ ರಾಜಮಣಿಯವರಿಗೆ ಸಹಕರಿಸಬೇಕಾಗಿದೆ ಎಂದರು.

ಫಲಕಗಳನ್ನು ವಿತರಿಸಿದ ಪತ್ರಕರ್ತ ರಾಜಾ ಬಂಟ್ವಾಳ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರಾಮಕೃಷ್ಣ ಪುತ್ತೂರಾಯ ಹಾಗೂ ಶಾಂತಾ ದಂಪತಿಯನ್ನು ಅವರ ಸಮಾಜ ಸೇವಗಾಗಿ ಸನ್ಮಾನಿಸಲಾಯಿತು. ವಠಾರದ ನಿವಾಸಿಗಳ ಮನೆಯ ಆವರಣದ ಗೇಟುಗಳಿಗೆ ಫಲಕಗಳನ್ನು ಕಟ್ಟಲಾಯಿತು. ನವ್ಯಾ ರಾವ್ ಪ್ರಾರ್ಥಿಸಿ, ರಾಜಮಣಿ ರಾಮಕುಂಜ ಆಶಯ ಮಾತುಗಳೊಂದಿಗೆ ಸ್ವಾಗತಿಸಿ, ಮೇಧಾ ರಾಮಕುಂಜ ವಂದಿಸಿದರು. ಧಾತ್ರಿ ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ