ಜೇಸಿ ಬಂಟ್ವಾಳದ ಅಧ್ಯಕ್ಷರಾಗಿ ನ್ಯಾಯವಾದಿ ದಯಾನಂದ ರೈ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಅಧ್ಯಕ್ಷ ಡಾ. ಬಾಲಕೃಷ್ಣ ಅಗ್ರಬೈಲು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ.
ಕಾರ್ಯದರ್ಶಿಯಾಗಿ ಉಮೇಶ್ ಮೂಲ್ಯ, ಕೋಶಾಧಿಕಾರಿಯಾಗಿ ಉಮೇಶ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ವೆಂಕಟೇಶ ಕೃಷ್ಣಾಪುರ ವಿವಿಧ ವಿಭಾಗಗಳ ಉಪಾಧ್ಯಕ್ಷರಾಗಿ ಸದಾನಂದ ಬಂಗೇರ, ಯತೀಶ್ ಕರ್ಕೇರಾ, ರಾಜೇಂದ್ರ ಕುಮಾರ್, ಪ್ರಕಾಶ್ ಬಿ., ಮಾಧವ ವಿ.ಎಸ್. ಆಯ್ಕೆಯಾಗಿದ್ದಾರೆ.
ಪದಗ್ರಹಣ ಸಮಾರಂಭ:
ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.12ರಂದು ಸಂಜೆ 6.30ಕ್ಕೆ ಬಿ.ಸಿ.ರೋಡಿನ ಜೋಡುಮಾರ್ಗ ಉದ್ಯಾನವನದಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ವೈದ್ಯ ಡಾ. ವಿ.ಕೆ. ಹೆಗ್ಡೆ, ನೋಟರಿ ವಕೀಲ ಜಯರಾಮ ರೈ ಉಪಸ್ಥಿತರಿರುವರು, ವಲಯಾಧ್ಯಕ್ಷ ರಾಕೇಶ್ ಕುಂಜೂರು, ವಲಯ ಉಪಾಧ್ಯಕ್ಷ ಮನಮೋಹನ ಬಳ್ಳಡ್ಕ ಪದಗ್ರಹಣಾಧಿಕಾರಿಯಾಗಿ ಭಾಗವಹಿಸುವರು.