ಚಿತ್ರ ಮತ್ತು ವಿಡಿಯೋ ವರದಿಗಾಗಿ ಕ್ಲಿಕ್ ಮಾಡಿರಿ:
ಬಂಟ್ವಾಳದ ಲೊರೆಟ್ಟೋ ಪದವಿನಲ್ಲಿರುವ ಲೋರೆಟ್ಟೋ ಮಾತಾ ಚರ್ಚ್‌ನಲ್ಲಿ ಕ್ರಿಸ್‌ಮಸ್ ಮುನ್ನಾ ದಿನವಾದ ಭಾನುವಾರ ರಾತ್ರಿ ಬಲಿ ಪೂಜೆಗಳನ್ನು ನೆರವೇರಿಸಲಾಯಿತು.
ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಬಂಧುಗಳು ಬಲಿ ಪೂಜೆಯಲ್ಲಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ಚರ್ಚ್ ಧರ್ಮಗುರುಗಳಾದ ವಂ.ಫಾ. ಎಲಿಯಸ್ ಡಿಸೋಜಾ, ಪ್ರದಾನ ಧರ್ಮ ಗುರುಗಳಾದ ವಂ. ಡೇರಿಕ್ ಡಿಸೋಜಾ, ವಂ ಶಿಲಾನಂದ್ ಕಾಮತ್,ವಂ.ದಿಲ್ರಾಜ್ ಸಿಕ್ವೆರ, ವಂ.ಮಾರ್ಕ್ ಅರುಣ್ ಪೂಜೆಯ ನೇತೃತ್ವ ವಹಿಸಿದ್ದರು.
ಕ್ರಿಸ್‌ಮಸ್ ಹಬ್ಬದ ಹಿನ್ನಲೆಯಲ್ಲಿ ಚರ್ಚ್ ಆವರಣದಲ್ಲಿ ಏಸುಕ್ರಿಸ್ತರ ಜನ್ಮ ದಿನದ ಸಂದೇಶ ಸಾರುವ ಗೋದಲಿಗಳನ್ನು ನಿರ್ಮಿಸಲಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ಚರ್ಚ್ ಅನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಸುಮಾರು 2 ಸಾವಿರ ಭಕ್ತರು ಇಲ್ಲಿ ಪಾಲ್ಗೊಂಡಿದ್ದರು. ಲೋರೆಟ್ಟೋ ಪದವಿನಿಂದ, ಪೋಸ್ಟ್ ಆಫೀಸ್ ವರೆಗೆ ರಸ್ತೆಯ ಪಕ್ಕದಲ್ಲಿ ಲೋರೆಟ್ಟೋ ಫ್ರೆಂಡ್ಸ್ ಪ್ರಾಯೋಕತ್ವದಲ್ಲಿ ವಿದ್ಯುತ್ ದೀಪಗಳಿಂದ ಸಿಂಗಾರ ಮಾಡಲಾಗಿತ್ತು.
for VIDEO CLICK: