ಅಲ್ಲಿಪಾದೆ ಸಂತ ಅಂತೋಣಿ ದೇವಾಲಯದಲ್ಲಿ ಭಾನುವಾರ ರಾತ್ರಿಯೇ ಸಂಭ್ರಮದ ವಾತಾವರಣ. ವಂದನೀಯ ಫಾ. ಗ್ರೆಗೊರಿ ಪಿರೇರ ನೇತೃತ್ವದಲ್ಲಿ ದಿವ್ಯಬಲಿಪೂಜೆ ನಡೆದ ಬಳಿಕ ಕ್ರಿಸ್ ಮಸ್ ಹಬ್ಬದ ಸಂದೇಶ ಸಾರುವ ನಾನಾ ಮನೋರಂಜನಾ ಕಾರ್ಯಕ್ರಮಗಳು ನಡೆದವು.
ವೈ ಸಿ ಎಸ್ ಅಲ್ಲಿಪಾದೆ ಘಟಕ ನೇತೃತ್ವದಲ್ಲಿ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನೂ ಈ ಸಂದರ್ಭ ಏರ್ಪಡಿಸಲಾಯಿತು. ಈ ಸಂದರ್ಭ ನೂರಾರು ಮಂದಿ ಆಗಮಿಸಿ ಹಬ್ಬದ ಸಂಭ್ರಮ ವಿನಿಮಯ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಧರ್ಮಭಗಿನಿಯರು, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಲಿಯೋ ಫೆರ್ನಾಂಡೀಸ್, ಕಾರ್ಯದರ್ಶಿ ಮೆಡ್ರಿನ್ ರೇಗೋ, ಪ್ರಮುಖರಾದ ಮೆಲ್ವಿನ್ ಡಯಾಸ್, ಡೆನ್ಝಿಲ್ ನೊರೋನ್ಹಾ ಸಹಿತ ಹಲವರು ಪಾಲ್ಗೊಂಡಿದ್ದರು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)