ಸಸ್ಯಪೋಷಣೆ ಮೂಲಕ ಮನೆಮಾತಾಗಿರುವ ಶತಾಯುಷಿ ಡಾ.ಸಾಲುಮರದ ತಿಮ್ಮಕ್ಕ ಭಾನುವಾರ ಸಂಜೆ ಪಾಣೆಮಂಗಳೂರಿನ ಎಸ್.ವಿ.ಎಸ್.ಪ್ರಾಥಮಿಕ ಶಾಲೆಯಲ್ಲಿ ಪುತ್ತೂರಿನ ಶ್ರೀದೇವಿ ನೃತ್ಯಾರಾಧನಾ ಕೇಂದ್ರದ ನೃತ್ಯಸಂಧ್ಯಾ ಕಾರ್ಯಕ್ರಮಕ್ಕೆ ಆಗಮಿಸಿ ನೃತ್ಯ ವಿದ್ಯಾರ್ಥಿಗಳಿಗೆ ಸಸಿ ವಿತರಿಸಿದರು.
ನೃತ್ಯ ಸಂಧ್ಯಾ ಹಿನ್ನೆಲೆಯಲ್ಲಿ ವೃಕ್ಷ ಅಭಿಯಾನವನ್ನು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಶಾಲಾ ಆವರಣದಲ್ಲಿ ಸಸಿ ನೆಟ್ಟು ನೀರೆರೆದು ಪೋಷಣೆಗೆ ಚಾಲನೆ ನೀಡಿದ ಅವರು, ವಿದ್ಯಾರ್ಥಿಗಳಿಗೆ ಸಸ್ಯಸಂರಕ್ಷಣೆ ಕುರಿತು ಕಿವಿಮಾತು ಹೇಳಿದರು.
ಈ ಸಂದರ್ಭ ಕಲಾಕೇಂದ್ರ ಸಂಚಾಲಕ ಉದಯ್ ವೆಂಕಟೇಶ್, ನೃತ್ಯ ನಿರ್ದೇಶಕಿ ರೋಹಿಣಿ ಉದಯ್, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಜಯಲಕ್ಷ್ಮಿ ಪ್ರಭು, ಎಸ್.ವಿ.ಎಸ್.ಶಾಲಾ ಸಂಚಾಲಕ ವೆಂಕಟ್ರಾಯ ಶೆಣೈ ಉಪಸ್ಥಿತರಿದ್ದರು.