ಕೆದಿಲ ದೈವಸ್ಥಾನ ಬಳಿಯ ಮನೆಯೊಂದಕ್ಕೆ ಶುಕ್ರವಾರ ರಾತ್ರಿ ಮೂವರು ಅಪರಿಚಿತರು ಆಗಮಿಸಿ, ಪಿಸ್ತೂಲು ಹಾಗೂ ಚೂರಿ ತೋರಿಸಿ, ಮನೆಯವರನ್ನು ಬೆದರಿಸಿ, ಚಿನ್ನಾಭರಣ, ನಗದು ದೋಚಿದ ಘಟನೆ ಕೆದಿಲದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಶಿವಶಂಕರ ಪುತ್ತೂರಾಯ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ರಾತ್ರಿ ಸುಮಾರು 7.30ಕ್ಕೆ ಆಗಮಿಸಿದ ಮೂವರು ಆಗಂತುಕರು, ಪಿಸ್ತೂಲು, ಚೂರಿ ತೋರಿಸಿ ಬೆದರಿಸಿ, ಚಿನ್ನಾಭರಣ ನೀಡುವಂತೆ ಹೇಳಿದೆ. ಬಳಿಕ ನೆಕ್ಲೇಸ್, ಕರಿಮಣಿಸರ, ಚೈನ್, ಕಿವಿಯೋಲೆ ಪಡಕೊಂಡಿದೆ. ಬೆಡ್ ರೂಮ್ ಕಪಾಟಿನಲ್ಲಿದ್ದ ನಗದು, ಮೊಬೈಲ್ ಫೋನ್ ಬಳಿಕ ಎಟಿಎಮ ಕಾರ್ಡ್ ತೆಗೆದುಕೊಂಡು, ಮನೆಯವರನ್ನು ಕಟ್ಟಿಹಾಕಿ, ಪ್ಲಾಸ್ಟರ್ ಹಾಕಿ ಪರಾರಿಯಾಗಿದೆ. ಕಟ್ಟನ್ನು ಕಷ್ಟಪಟ್ಟು ಬಿಡಿಸಿಕೊಂಢ ಮನೆಯವರು, ಸಂಬಂಧಿಕರಿಗೆ ಮಾಹಿತಿ ನೀಡಿ ಬಳಿಕ ಪುತ್ತೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…