ಸಿನಿಮಾ

ಇಂದು ಅಲೆತ್ತೂರು ಹಬ್ಬ, ಮಿತ್ರತ್ವ ಕನ್ನಡ ಕಿರುಚಿತ್ರ ಬಿಡುಗಡೆ

www.bantwalnews.com

ಅಲೆತ್ತೂರು ಕ್ರಿಯೇಶನ್ಸ್ ಅವರಿಂದ ಕೂಟ ಯುವ ಜಗತ್ತು ಬಂಟ್ವಾಳ ಸಹಯೋಗದಲ್ಲಿ ಕನ್ನಡ ಕಿರು ಚಿತ್ರ ಮಿತ್ರತ್ವ – ಎಂದಿಗೂ…ಎಂದೆಂದಿಗೂ 23ರಂದು ನಡೆಯುವ ಬಿ.ಸಿ.ರೋಡಿನ ಅಲೆತ್ತೂರು ಹಬ್ಬದಲ್ಲಿ ಲೋಕಾರ್ಪಣೆಯಾಗಲಿದೆ. ಅಲೆತ್ತೂರು ತಿಮ್ಮಪ್ಪಯ್ಯರವರ ಮನೆಯ ಪಕ್ಕದ ಮೈದಾನದಲ್ಲಿ ನಡೆಯುವ ಕಾರ್ಯಕ್ರಮ ಸಂಜೆ 5.30ರಿಂದ ಆರಂಭಗೊಳ್ಳುತ್ತದೆ. ಸಂಜೆ 6ರಿಂದ ವೈವಿಧ್ಯಮಯ ಕಾರ್ಯಕ್ರಮಗಳ ಗೊಂಚಲು ಕಚಗುಳಿ, ರಾತ್ರಿ 7ರಿಂದ 8ವರೆಗೆ ಮಿತ್ರತ್ವ ಕಿರುಚಿತ್ರ ಬಿಡುಗಡೆ ನಡೆಯಲಿದೆ. ರಾತ್ರಿ 8ರಿಂದ 11ವರೆಗೆ ಹವ್ಯಾಸಿ ಯಕ್ಷಗಾನ ಕಲಾಸಂಘದಿಂದ ಸುದರ್ಶನ-ಅಭಿಮನ್ಯು-ಅಗ್ರಪೂಜೆ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ. ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್.

Click for trailor:

ಕಥೆ, ಚಿತ್ರಕಥೆ, ಹಾಡುಗಳು, ಸಂಭಾಷಣೆ ಮತ್ತು ನಿರ್ದೇಶನ ಮೊಗರ್ನಾಡು ರಾಘವೇಂದ್ರ ಕಾರಂತ ಅವರದ್ದು. ತುಳು ರಂಗಭೂಮಿಯಲ್ಲಿ ರಾಘವೇಂದ್ರ ಅವರು ಚಿರಪರಿಚಿತ. ಅಲೆತ್ತೂರಿನ ಮಯ್ಯ ಸಹೋದರರು ನಿರ್ಮಾಪಕರು.

ಪ್ರಮುಖ ತಾರಾಗಣದಲ್ಲಿ ರಾಘವೇಂದ್ರ ಕಾರಂತ್ ಮೊಗರ್ನಾಡ್, ನರಸಿಂಹ ಮಯ್ಯ ಅಲೆತ್ತೂರು, ಕಿಶನ್ ಹೊಳ್ಳ ನೂಜಿಪ್ಪಾಡಿ, ವಿಜಯ್ ಮಯ್ಯ ಐಲ (ರಂಗಭೂಮಿ, ಚಿತ್ರನಟ, ಉತ್ತಮ ಖಳನಟ ಪ್ರಶಸ್ತಿವಿಜೇತ), ಸುಮಂಗಲಾ ಐತಾಳ್, ಶರತ್ ಕುಮಾರ್ ಮಯ್ಯ ಅಲೆತ್ತೂರು ಇದ್ದಾರೆ.

ಸಹಕಲಾವಿದರಾಗಿ ಸುರೇಶ್ ಹೊಳ್ಳ ಉಜಿರೆ, ಶಾರದಾ ಎಸ್. ರಾವ್, ಡಾ. ಸುಬ್ರಹ್ಮಣ್ಯ ಭಟ್, ಸೂರ್ಯನಾರಾಯಣ ರಾವ್ ಅಲೆತ್ತೂರು, ನವ್ಯಾ ಹೊಳ್ಳ ಉಜಿರೆ, ರಶ್ಮಿ ಅಲೆತ್ತೂರು, ಪ್ರಸನ್ನ ಕಾರಂತ ಮಧೂರು, ಗಣೇಶ ಹೆಗ್ಡೆ, ಸಚಿನ್ ಹೊಳ್ಳ ಕಳ್ಳಿಮಾರ್, ಶ್ರೀಧರ್ ರಾವ್ ಅಗ್ರಬೈಲ್, ರಾಘವೇಂದ್ರ ಉಪಾಧ್ಯಾಯ ಮಠ, ದೇವಿಪ್ರಸಾದ್ ಹೊಳ್ಳ ಬಂದಾರು, ದಿವ್ಯಾ ಹೊಳ್ಳ ಉಜಿರೆ, ದೀಪಕ್ ಅಲೆತ್ತೂರು ಇದ್ದಾರೆ.

ಸಲಹೆ ಸಹಕಾರ

ಶ್ರೀಮತಿ ಮತ್ತು ಶ್ರೀ ಲಕ್ಷ್ಮೀನಾರಾಯಣ ಮಯ್ಯ ಅಲೆತ್ತೂರು, ಶ್ರಿಮತಿ ಮತ್ತು ಶ್ರೀ ನಾಗೇಶ್ ರಾವ್ ನೂಜಿಪ್ಪಾಡಿ, ಶ್ರೀಮತಿ ಪೂರ್ಣಿಮಾ ರಾಘವೇಂದ್ರ ಕಾರಂತ ಮೊಗರ್ನಾಡು, ಶ್ರೀಮತಿ ಮತ್ತು ಶ್ರೀ ಅಶೋಕ್ ರಾವ್ ನೂಜಿಪ್ಪಾಡಿ, ಶ್ರೀಮತಿ ಮತ್ತು ಶ್ರೀ ಕೇಶವ ರಾವ್ ನೂಜಿಪ್ಪಾಡಿ, ಡಾ. ಸುಬ್ರಹ್ಮಣ್ಯ ಭಟ್, ವಿಜಯಶ್ರೀ ಚಿಕಿತ್ಸಾಲಯ ಮೊಗರ್ನಾಡು, ಹೋಟೆಲ್ ಕಾಮಧೇನು, ಉಜಿರೆ, ರವಿಶಂಕರ ಮಯ್ಯ ಮಯ್ಯ ಶೇರ್ಸ್, ಬಿ.ಸಿ.ರೋಡ್, ಶ್ರೀವತ್ಸ ಭಟ್, ಬಿ.ಸಿ.ರೋಡ್, ಶ್ರೀಕಾಂತ ಸೋಮಯಾಜಿ ಕುರಿಯಾಳ, ಶಶಿಧರ ರಾವ್ ಬಿ, ಅಲೆತ್ತೂರು ಗ್ರಾಮಸ್ಥರು, ಇತರರು.

ಗ್ರಾಫಿಕ್ಸ್, ಡಿಸೈನ್

ಸೃಜನ ಡಿಸೈನ್ಸ್ ಮಡಂತ್ಯಾರು ಮತ್ತು ಕೆ.ಎಚ್.ಎನ್. ಡಿಸೈನ್ಸ್ ನೂಜಿಪ್ಪಾಡಿ

ಮಾಧ್ಯಮ ಸಹಯೋಗ

ಬಂಟ್ವಾಳ ನ್ಯೂಸ್, ಫಿಲ್ಮ್ ರನ್ನರ್ ಮತ್ತು ಆಮಂತ್ರಣ ನ್ಯೂಸ್

Click to read more:

https://www.facebook.com/Alethoor/

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts