ವಿಟ್ಲದ ಮೇಗಿನಪೇಟೆ ಅಲ್‌ಖೈರ್ ಶರೀಯತ್ ಕಾಲೇಜಿನಲ್ಲಿ ಈದ್ ಮೀಲಾದ್ ಕಾರ್ಯಕ್ರಮ ಕಾಲೇಜು ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ಬೆಳಿಗ್ಗೆ ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಅಬ್ದುಲ್ ಸಲಾಂ ಲತೀಫಿ ಹಾಗೂ ಕಾಲೇಜಿನ ಪ್ರಾಧ್ಯಾಪಕರಾದ ಅಬ್ದುಲ್ ರಹಿಮಾನ್ ಫೈಝಿ, ಹಾಗೂ ಅಬ್ಬಾಸ್ ದಾರಿಮಿ ಅವರ ದುವಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೆಲ್ಕಾರ್ ಮಹಿಳಾ ಕಾಲೇಜಿನ ಉಪನ್ಯಾಸಕಿ ಶಹನಾಝ್ ಪುರ್ಖಾನಿ ಅವರು ಇಸ್ಲಾಮಿನಲ್ಲಿ ಮಹಿಳೆಯರ ಜೀವನ ಕ್ರಮದ ಬಗ್ಗೆ ಪ್ರವಚನ ನೀಡಿದರು.
ಬಳಿಕ ಕಾಲೇಜು ವಿದ್ಯಾರ್ಥಿನಿಗಳಿಂದ ಭಾಷಣ, ಪ್ರಬಂಧ ಮಂಡನೆ, ಅಧ್ಯಯನ ಕ್ಲಾಸ್, ಬುರ್ದಾ, ಮಜ್ಲಿಸುನ್ನೂರ್ ಮುಂತಾದ ಕಾರ್ಯಕ್ರಮಗಳು ನಡೆಯಿತು.
ವಿದ್ಯಾರ್ಥಿನಿಗಳಾದ ಸಹ್‌ಲ, ಮುರ್ಶಿದಾ, ಅರ್ಶಿದಾ ಸ್ವಾಗತಿಸಿದರು. ಮೆಹನಾಝ್ ಬಾನು ವಂದಿಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…