ಬಂಟ್ವಾಳ

ಫೊಟೋಗ್ರಾಫರ್ ಸಂಘದಿಂದ ಸಮಾಜಸೇವೆ: ಅಶೋಕ್ ಕುಮಾರ್ ರೈ ಕೋಡಿಂಬಾಡಿ

www.bantwalnews.com

ನಾವು ನಿತ್ಯ ಮಾಡುವ ಕೆಲಸದ ಜೊತೆಗೆ ಸಮಾಜಕ್ಕೆ ಏನಾದರೂ ನೀಡುವ ಪುಣ್ಯದ ಕೆಲಸ ಮಾಡಬೇಕು ಅಂತಹ ಕೆಲಸವನ್ನು ಪೊಟೋಗ್ರಾಫರ್‍ಸ್ ಅಸೋಸಿಯೇಷನ್ ಮಾಡುತ್ತಿದೆ ಎಂದು ರೈ ಎಸ್ಟೇಟ್ ನ ಪ್ರವರ್ತಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದರು.

ಸೌತ್ ಕೆನರಾ ಪೊಟೋಗ್ರಾಫರ್‍ಸ್ ಅಸೋಸಿಯೇಷನ್ ಬಂಟ್ವಾಳ ಇದರ 2017-19 ನೇ ಸಾಲಿನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಬಿ.ಸಿ.ರೋಡಿನ ಕುಲಾಲ ಸಮುದಾಯ ಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಶೋಕ್ ಕುಮಾರ್ ರೈ, ಸಂಘಟನೆಗಳು ಬೆಳೆಯ ಬೇಕು, ಸಮಾಜದ ಶೋಷಿತರಿಗೆ ಸಹಾಯ ಮಾಡುವ ಕೆಲಸ ಸಂಘಟನೆಗಳಿಂದ ಆಗಬೇಕು ಎಂದು ತಿಳಿಸಿದ ಅವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಜಿಲ್ಲಾ ಎಸ್ ಕೆ ಪಿ ಎ ಅಧ್ಯಕ್ಷ ವಿಲ್ಸನ್ ಗೊನ್ಸಾಲ್ವಿಸ್ವ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಪುರಂದರ ಹೆಗ್ಡೆ, ಮಾಣಿ ಗ್ರಾ.ಪಂ ಸದಸ್ಯ ನಾರಾಯಣ ಶೆಟ್ಟಿ ತೋಟ, ಎಸ್ ಕೆ ಪಿ. ಎ ವಿವಿದೋಧ್ದೇಶ ಸಹಕಾರಿ ಸಂಘ ನಿಯಮಿತ ಅಧ್ಯಕ್ಷ ವಾಸುದೇವ ರಾವ್ , ಎಸ್ ಕೆ ಪಿ ಎ ಸಂಚಾಲಕ ವಿಠಲ ಚೌಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಉಪಾಧ್ಯಕ್ಷ ಸುಧೀರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗೌರವಾಧ್ಯಕ್ಷ ಆನಂದ, ಅಧ್ಯಕ್ಷ ಸುಕುಮಾರ್ ಬಂಟ್ವಾಳ್, ಪ್ರಧಾನ ಕಾರ್ಯದರ್ಶಿ ಹರೀಶ್ ಕುಂದರ್, ಕೋಶಾಧಿಕಾರಿ ರವಿಪ್ರಕಾಶ್ ಕಲ್ಪನೆ ವೇದಿಕೆಯಲ್ಲಿದ್ದರು.

ನೂತನ ಅಧ್ಯಕ್ಷರಾಗಿ ಹರೀಶ್ ಮಾಣಿ, ಕಾರ್ಯದರ್ಶಿ ಯಾಗಿ ರೋಶನ್ ಕಲ್ಲಡ್ಕ, ಕೋಶಾಧಿಕಾರಿಯಾಗಿ ಬಾಲಕೃಷ್ಣ ಅಧಿಕಾರ ಸ್ವೀಕರಿಸಿದರು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಪೂಜಾರಿ, ಹಾಗೂ ಅಂತರಾಷ್ಟ್ರೀಯ ಪಶಸ್ತಿ ವಿಜೇತ ಛಾಯಾಗ್ರಾಹಕ ವಿವೇಕ್ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು. ಮುದ್ದು ಕಂದ ಸ್ಫರ್ಧಾ ವಿಜೇತ ಪುಟಾಣಿಗಳಿಗೆ ಬಹುಮಾನ ವಿವರಿಸಲಾಯಿತು. ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾನಿಧಿ ನೀಡಿ ಗೌರವಿಸಲಾಯಿತು. ನೂತನವಾಗಿ ವಿವಾಹಿತರಾದ ಸಂಘದ ಸದಸ್ಯರನ್ನು ಗೌರವಿಸಲಾಯಿತು.  ಎಚ್.ಕೆ.ನಯನಾಡು ಕಾರ್ಯಕ್ರಮ ನಿರೂಪಿಸಿದರು.

Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.

Recent Posts