ಬಂಟ್ವಾಳ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಬಂಟ್ವಾಳ ತಾಲೂಕು ಕಚೇರಿಯ ಆಧಾರ್ ನೋಂದಾವಣಿ ಕೇಂದ್ರಕ್ಕೆ ಬುಧವಾರ ಮಧ್ಯಾಹ್ನ ಆಗಮಿಸಿ ಆಧಾರ್ ನೋಂದಾವಣಿ ಮಾಡಿಕೊಂಡರು.
ಸ್ವಾಮೀಜಿ ಅವರು ಬಂಟ್ವಾಳ ತಾಲೂಕು ಕಚೇರಿಯ ಆದಾರ್ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತು ಆಧಾರ್ ನೋಂದಣಿ ಮಾಡಿದ್ದು ವಿಶೇಷ. ಈ ಸಂದರ್ಭ ತಹಶೀಲ್ದಾರ್ ಪುರಂದರ ಹೆಗ್ಡೆ, ಪುರಸಭೆ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಮಾಣಿಲ ಕ್ಷೇತ್ರದ ಟ್ರಸ್ಟಿ ಮಂಜು ವಿಟ್ಲ ಅವರು ಸ್ವಾಮೀಜಿ ಅವರನ್ನುಸ್ವಾಗತಿಸಿದರು. ಲಯನ್ಸ್ ನ ದಾಮೋದರ ಬಿ.ಎಂ, ತಾಲೂಕು ಕಚೇರಿ ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಚಂದ್ರಶೇಖರ, ಕಿಯೋನಿಕ್ಸ್ ಕೇಂದ್ರದ ಸಿಬ್ಬಂದಿಗಳಾದ ಹರಿಣಾಕ್ಷಿ, ಆಶಾ ಆಧಾರ್ ನೊಂದಣಿ ಪ್ರಕ್ರಿಯೆಯಲ್ಲಿ ಸಹಕರಿಸಿದರು.
ಚಿತ್ರ, ವಿಡಿಯೋ, ಮಾಹಿತಿ: SR bcroad
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…