ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ವೇದವ್ಯಾಸ ಮಂದಿರದಲ್ಲಿ ಕ್ರೀಡೆ ಮತ್ತು ಬೌದ್ಧಿಕ ಸ್ಪರ್ಧೆಯಲ್ಲಿ ಭಾಗವಹಿಸಿ, ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಶ್ರೀರಾಮ ಶಾಲೆಯುಉತ್ತಮ ಸಂಸ್ಕಾರಯುಕ್ತ ಶಾಲೆಯಾಗಿದೆ.ಇಲ್ಲಿಯ ಮಕ್ಕಳು ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಪ್ರಜ್ಞಾವಂತ ನಾಗರಿಕರಾಗಿ ಬೆಳೆಯುತ್ತಾರೆ ,ಎಂದು ಪ್ರಗತಿಪರ ಕೃಷಿಕ ಸದಾನಂದ ನಾವರ ನುಡಿದರು.
ಚಿಕ್ಕಂದಿನಿಂಲೇ ಮಕ್ಕಳಲ್ಲಿ ಅದ್ಭುತ ಪ್ರತಿಭೆಗಳು ಅನಾವರಣಗೊಳ್ಳುತ್ತಿವೆ, ಮಕ್ಕಳು ದೇಶದ ಸೇವೆಗೆ ತಯಾರಾಗುತ್ತಿದ್ದಾರೆ.ಎಂದು ದ.ಕಜಿಲ್ಲಾ ಪಂಚಾಯತ್‌ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನುಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್, ಕಮಲಾ ಪ್ರ. ಭಟ್, ದಿನೇಶ್ ಅಮ್ಟೂರು, ಚೆನ್ನಪ್ಪ ಕೋಟ್ಯಾನ್, ಮಲ್ಲಿಕಾ ಶೆಟ್ಟಿ, ಗಂಗಾ ಮಾತಾಜಿ, ರವಿರಾಜ್, ರಮೇಶ್, ವಸಂತ್ ಬಲ್ಲಾಳ್, ಕೃಷ್ಣ ಪ್ರಸಾದ್ ಉಪಸ್ಥಿತರಿದ್ದರು. ರೇಣುಕಾ ನಿರೂಪಿಸಿ,ಸಂತೋಷ್ ಸ್ವಾಗತಿಸಿ,ಸುಮಂತ್ ವಂದಿಸಿದರು.