ವ್ಯಂಗ್ಯನೋಟ

ಈ ರೇಖೆಗಳು ಕಥೆ ಹೇಳುತ್ತವೆ….

www.bantwalnews.com

ಏನಿದು? ಕ್ಲಿಕ್ ಮಾಡಿ ಓದಿರಿ…

ಬಂಟ್ವಾಳನ್ಯೂಸ್ www.bantwalnews.com ಆರಂಭವಾಗಿ ಒಂದು ವರ್ಷ, ಒಂದು ತಿಂಗಳು ಕಳೆಯಿತು. ತಾಲೂಕಿನದ್ದೇ ದೈನಂದಿನ ಸುದ್ದಿಗಳ ಜೊತೆಗೆ ಹಲವು ವೈವಿಧ್ಯಗಳನ್ನು ನೀಡುವ ವೆಬ್ ಪತ್ರಿಕೆಯ ಅಗತ್ಯವಿದ್ದಾಗ ನವೆಂಬರ್ 10, 2016ರಂದು  ಬಂಟ್ವಾಳನ್ಯೂಸ್ ಆರಂಭಗೊಂಡಿತು.  ಪತ್ರಿಕೆ ಆರಂಭಗೊಂಡ ಮೇಲೆ ಹಲವರು ಇಂಟರ್ ನೆಟ್ ಮೂಲಕ ಓದುವ ಹವ್ಯಾಸ ಬೆಳೆಸಿಕೊಂಡರು. ಮೊಬೈಲ್ ಮೂಲಕ ಬಂಟ್ವಾಳದ ಸುದ್ದಿ ಓದುವ ಹವ್ಯಾಸವನ್ನು ಹಲವರು ರೂಢಿಸಿದರೆ, ಸುದ್ದಿ ಮಾಧ್ಯಮದ ಈ ಸಾಧ್ಯತೆ ಹಲವರಿಗೆ ಪ್ರೇರಣೆಯಾಯಿತು ಎಂಬುದು ಹೆಮ್ಮೆಯ ವಿಷಯ. ಸುದ್ದಿ, ಅಂಕಣಗಳು, ಲೇಖನಗಳೊಂದಿಗೆ ಯಾವುದೇ ಅಬ್ಬರವಿಲ್ಲದೆ ಬಂಟ್ವಾಳನ್ಯೂಸ್ ಮೊದಲ ವರ್ಷವನ್ನು ಯಶಸ್ವಿಯಾಗಿಯೇ ಮುಗಿಸಿದ ಸವಿನೆನಪಿಗೆ ವ್ಯಂಗ್ಯಚಿತ್ರಗಳ – ವ್ಯಂಗ್ಯನೋಟ ಆರಂಭಗೊಂಡಿತು. ಕಳೆದ ಬಾರಿ ನಮ್ಮೂರಿನವರೇ ಆದ ಮುಕೇಶ್ ರಾವ್, ವ್ಯಂಗ್ಯಚಿತ್ರವನ್ನು ಒದಗಿಸಿದ್ದು ಅವು ಪ್ರಕಟಗೊಂಡಿವೆ. ಪ್ರಕಟಗೊಂಡ ಚಿತ್ರಕ್ಕೆ ಪ್ರಶಸ್ತಿಯೂ ದೊರಕಿದೆ. ಈ ಬಾರಿ ಇನ್ನೊಂದು ವ್ಯಂಗ್ಯಚಿತ್ರ – ವ್ಯಂಗ್ಯನೋಟಕ್ಕಾಗಿ ಪ್ರಕಟಗೊಳ್ಳುತ್ತಿದೆ. ಇದನ್ನು ಬರೆದವರು ಕವಿ, ಕಲಾವಿದರೂ ಆಗಿರುವ ಸಾಹಿತಿ ಚಂದ್ರಶೇಖರ ಪಾತೂರು.

ನೀವೂ ಕಾರ್ಟೂನ್ ಬರೆಯಬಹುದು. ರಚಿಸಿದ ವ್ಯಂಗ್ಯಚಿತ್ರಗಳನ್ನು ನಮ್ಮ ವಿಳಾಸಕ್ಕೆ ಈ ಮೈಲ್ ಮಾಡಿರಿ. (ನೆನಪಿಡಿ: ಯಾವ ಜಾತಿ, ಧರ್ಮ, ವ್ಯಕ್ತಿ, ಸಿದ್ಧಾಂತಗಳ ಮನನೋಯಿಸುವ ಕಾರ್ಟೂನ್ ಗಳಿಗೆ ಇಲ್ಲಿ ಜಾಗವಿಲ್ಲ) ನಮ್ಮ ಇ ಮೈಲ್ ವಿಳಾಸ ಹೀಗಿದೆ: bantwalnews@gmail.com

ಸಹೃದಯಿ ಸ್ನೇಹಿತರ, ಓದುಗರ ಪ್ರೋತ್ಸಾಹ ಸದಾ ಇರಲಿ.

  • ಹರೀಶ ಮಾಂಬಾಡಿ, ಸಂಪಾದಕ.

ಕಲಾವಿದ, ಬರಹಗಾರರ ಬಗ್ಗೆ:

ಚಂದ್ರಶೇಖರ ಪಾತೂರು ಪ್ರವೃತ್ತಿಯಲ್ಲಿ ಕವಿ, ಸಾಹಿತಿ ಹಾಗೂ ಕಲಾವಿದರು. ವೃತ್ತಿಯಲ್ಲಿ ಸಚಿವ ಬಿ.ರಮಾನಾಥ ರೈ ಅವರ ಆಪ್ತ ಸಹಾಯಕರು. ಹಲವಾರು ಕವನ, ಲೇಖನಗಳು ನಾಡಿನ ನಾನಾ ಪತ್ರಿಕೆಗಳಲ್ಲಿ ಹಿಂದೆ ಪ್ರಕಟಗೊಂಡಿವೆ. ಹಲವು ಕವಿಗೋಷ್ಠಿಗಳಲ್ಲಿ ಇವರು ಕವನ ವಾಚಿಸಿದ್ದಾರೆ. ಬಂಟ್ವಾಳನ್ಯೂಸ್ ಗಾಗಿ ಪಾತೂರು ಅವರು ರಚಿಸಿದ ಕವನ – ಚಿತ್ರ ಹೀಗಿದೆ.

ಈ ಚಿತ್ರಕ್ಕಾಗಿ ಚಂದ್ರಶೇಖರ ಪಾತೂರು ಬರೆದ ಸಾಲುಗಳು ಹೀಗಿವೆ…

ಈ ಕಡಲ ತಟದ

ಅದೆಷ್ಟು ಸೂರ್ಯಾಸ್ತಗಳಿಗೆ

ನಾವು ಸಾಕ್ಷಿಗಳಾಗಿಲ್ಲ?

ನಮ್ಮ ಸಾಕ್ಷಿ ಬೇಕಾಗಿಲ್ಲ

ಯಾಕೆಂದರೆ

ಅಲ್ಲೀಗ ಸಾಕ್ಷಿಗಳಾಗಲು

ಜೋಡಿಗಳೆಷ್ಟಿಲ್ಲ?

  • ಪಾತೂರು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Share
Published by
Harish Mambady