ಬಂಟ್ವಾಳ

ಅಲ್ ರಹ್ಮಾ ಫೌಂಡೇಶನ್ ತಲಪಾಡಿ: ಅಧ್ಯಕ್ಷರಾಗಿ ಲತೀಫ್ ಕೆಮ್ಮಾರಾ, ಗಲ್ಫ್ ವಿಂಗ್ ಅಧ್ಯಕ್ಷರಾಗಿ ಅಶ್ರಫ್ ಆಯ್ಕೆ

www.bantwalnews.com

ಅಲ್ ರಹ್ಮಾ ಫೌಂಡೇಶನ್ ತಲಪಾಡಿ ಇದರ  ವಾರ್ಷಿಕ ಮಹಾಸಭೆಯು ಬಿ.ಸಿ.ರೋಡ್ ತಲಪಾಡಿಯ ಅಲ್ ಖಜಾನಾ ಕಮ್ಯೂನಿಟಿ ಸಭಾಂಗಣದಲ್ಲಿ ನಡೆಯಿತು.
ಎನ್.ಡಿ.ಎ. ಗ್ರೂಪ್ ಆಫ್ ಕೆಎಸ್‌ಎ ಮಾಲಕ ಅಶ್ರಫ್ ಆರ್. ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಂಘಟನೆಯ ಕಾರ್ಯ ವೈಖರಿಯ ಬಗ್ಗೆ ಶ್ಲಾಘಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಕಖ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ಸಂಘಟನೆಯನ್ನು ಇನ್ನಷ್ಟು ಬೆಳೆಸಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.
ಆಲ್ ರಹ್ಮಾ ಫೌಂಡೇಶನ್ ಎಲ್ಲ ಕಾರ್ಯಕ್ರಮಗಳಲ್ಲಿ ಎಆರ್‌ಎಫ್ ಗಲ್ಫ್ ವಿಂಗ್ ತಮ್ಮ ಜೊತೆಗಿರುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ 2018ನೆ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ASHRAF

LATHEEF

ಅಧ್ಯಕ್ಷರಾಗಿ ಲತೀಫ್ ಕೆಮ್ಮಾರ, ಉಪಾಧ್ಯಕ್ಷರಾಗಿ ನಾಸಿರ್ ವಿ.ಎಚ್, ಮುಸ್ತಾಫ, ಕಾರ್ಯದರ್ಶಿಯಾಗಿ ಅನ್ವರ್ ಕೆ.ಎಚ್., ಜೊತೆಕಾರ್ಯದರ್ಶಿಯಾಗಿ ಕಮರುದ್ದೀನ್, ಮುಬೀನ್ ವಿ.ಎಚ್., ಕೋಶಾಧಿಕಾರಿಯಾಗಿ  ರಿಯಾಝ್ ಝರಾ, ಲೆಕ್ಕ ಪರಿಶೋಧಕರಾಗಿ ಬಿ.ಸಿ. ಲತೀಫ್ ಹಾಗೂ ಇತರ ಒಂಬತ್ತು ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.
ಗಲ್ಫ್ ವಿಂಗ್: ಅಧ್ಯಕ್ಷರಾಗಿ ಅಶ್ರಫ್ ಆರ್.ಕೆ., ಉಪಾಧ್ಯಕ್ಷರಾಗಿ ಸಲೀಂ ಟಿ.ಎಂ., ಸದಸ್ಯರಾಗಿ ಅಶ್ರಫ್ ಬಿ.ಎಂ.ಟಿ, ಹಾರಿಸ್, ನಾಸಿರ್ ದಮಾಸ್ ಆಯ್ಕೆಯಾದರು. ಈ ವಿಂಗ್‌ನ ಮೇಲುಸ್ತುವಾರಿಯಾಗಿ ಮುಸ್ತಾಕ್ ಬಿ.ಎಂ. ಅವರನ್ನು ನೇಮಿಸಲಾಯಿತು.
ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಇದಿನಬ್ಬ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅನ್ವರ್ ಕೆ.ಎಚ್. ಸ್ವಾಗತಿಸಿ, 2016-17ನೆ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನುಮಂಡಿಸಿದರು.
ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts