ಇದೊಂದು ಮಿಲಿಯನ್ ಡಾಲರ್ ಪ್ರಶ್ನೆ. ವಿಟ್ಲ ಸುತ್ತಮುತ್ತವೇ ಕಳ್ಳರು ಯಾಕೆ ಬರ್ತಾರೆ? ನಾಗರಿಕರಿಗೆ ಭೀತಿ, ಪೊಲೀಸರಿಗೆ ಸವಾಲು, ಕಳ್ಳರಿಗೆ ಸುಗ್ಗಿ..! ವಿಟ್ಲವಂದರೆ ಪ್ರಶಸ್ತವಾದ ಜಾಗ ಎಂದು ಕಳ್ಳರು ಭಾವಿಸಿದಂತಿದೆ. ಏಕೆಂದರೆ ಮತ್ತೆ ವಿಟ್ಲ ಪರಿಸರದಲ್ಲಿ ಕಳವು ಕೃತ್ಯ ನಡೆದಿದೆ. ಕೇಪು ಕಜಂಬು ಉತ್ಸವದ ಹಿನ್ನಲೆಯಲ್ಲಿ ಇದೇ ರಸ್ತೆಯಲ್ಲಿ ಪೊಲೀಸ್ ಬಂದೋ ಬಸ್ತು ಕಲ್ಪಿಸಲಾಗಿತ್ತು. ಆದರೂ ಕಳವು ಕೃತ್ಯ ನಡೆದಿದೆ.
ಏನಾಗಿದೆ?
ಕೇಪು ಕುಕ್ಕೆಬೆಟ್ಟುವಿನಲ್ಲಿ ಸೋಮವಾರ ಬೆಳಕಿಗೆ ಬಂದ ಕೃತ್ಯವಿದು. ಕೇಪು ಗ್ರಾಮದ ಕುಕ್ಕೆಬೆಟ್ಟು ನಿವಾಸಿ ಕೆ. ಪಿ. ಸುಲೈಮಾನ್ ಮನೆಗೆ ಯಾರೂ ಇಲ್ಲದ ಸಮಯದಲ್ಲಿ ಕಳ್ಳರು ನುಗ್ಗಿದ್ದಾರೆ. ಮನೆಯಲ್ಲಿದ್ದ ತಂದಿರಿಸಿದ್ದ ಹಾಲಿನ ಹುಡಿ ಡಬ್ಬ 10, ಇಸ್ತ್ರಿ ಪೆಟ್ಟಿಗೆ 6, ಹೊದಿಕೆ 3, ಎಮರ್ಜೆನ್ಸ್ ಲೈಟ್ 6 ಸೇರಿ ವಿವಿಧ ಉಡುಗೆಗಳನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಮನೆಯ ಸುತ್ತ ಆವರಣ ಗೋಡೆ ಇದ್ದರೂ ಕಳ್ಳರು ಅದನ್ನು ಲೆಕ್ಕಿಸಿಲ್ಲ. ಒಳ ರಸ್ತೆಯ ಪಕ್ಕದಲ್ಲಿದ್ದ ಗೇಟು ಮುರಿದು ಮನೆ ಸಮೀಪ ಬಂದ ಕಳ್ಳರು ಮುಂಬಾಗಿಲನ್ನು ಒಡೆದು ಬಂದಿದ್ದಾರೆ.ಮನೆಯ ನಾಲ್ಕು ಕೋಣೆಯ ಕಪಾಟ್ ಗಳಲ್ಲಿ ಬಂಗಾರದ ವಸ್ತುಗಳಿಗೆ ಜಾಲಾಡಿದ್ದಾರೆ.
ಕಳವು ಕೃತ್ಯಗಳ ಬಗ್ಗೆ ಪೊಲೀಸರು ಗಂಭೀರವಾಗಿ ಯೋಚಿಸಿ, ಪೊಲೀಸ್ ಮತ್ತು ನಾಗರಿಕರ ಸಮನ್ವಯ ಸಭೆಯೊಂದನ್ನು ಆಯೋಜಿಸಿ, ಕಳವು ಕೃತ್ಯ ತಡೆಗಟ್ಟುವ ಕುರಿತು ನಾಗರಿಕರ ಸಲಹೆ ಪಡೆಯುವುದು, ಅದನ್ನು ಅನೂಚಾನವಾಗಿ ಪರಿಪಾಲಿಸುವುದು ಈಗಿನ ತುರ್ತು ಅಗತ್ಯ. ಇದೆಲ್ಲ ನಡೆದರೂ ಕಳ್ಳರು ಬರ್ತಾರೆ ಎಂದರೆ,
ಸಾರ್ವಜನಿಕರನ್ನು ಕಾಡುವ ಕಟ್ಟಕಡೆಯ ಪ್ರಶ್ನೆ…. ವಿಟ್ಲ ಪರಿಸರಕ್ಕೇ ಕಳ್ಳರು ಯಾಕೆ ಬರ್ತಾರೆ?
ಉತ್ತರ: ಕಳ್ಳರಿಗೆ ಹೆದರಿಕೆ ಇಲ್ಲ…. !!!!!
ಬಂಟ್ವಾಳನ್ಯೂಸ್ ನಲ್ಲಿ ಕಳೆದ ತಿಂಗಳೊಂದರ ಅವಧಿಯಲ್ಲಿ ವಿಟ್ಲ ಪರಿಸರದಲ್ಲಿ ನಡೆದ ಕಳವು ಕೃತ್ಯ ಅಥವಾ ಕಳವು ಯತ್ನ ಕೃತ್ಯದ ಕುರಿತು ಬಂದ ವರದಿಗಳ ಲಿಂಕ್ ನೋಡಿ: