ಪ್ರತಿಯೊಬ್ಬರು ಅವರವರ ಧರ್ಮದ ಚೌಕಟ್ಟನ್ನು ಅರಿತುಕೊಂಡು ಬದುಕಿದಾಗ ಸಮಾಜದಲ್ಲಿ ಸಾಮರಸ್ಯ ನೆಲೆಸುತ್ತದೆ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಸಜಿಪಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಶರೀಫ್ ಹಾಗೂ ತಾಲೂಕು ಪಂಚಾಯತ್ ಸದಸ್ಯೆ ನಸೀಮಾ ಆರಿಫ್ ಅವರ ನೇತೃತ್ವದಲ್ಲಿ ನಂದಾವರ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಮಿಲಾದ್ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಂವಿಧಾನದಿಂದ ಹಿಡಿದು ಶಾಲಾ ಪಠ್ಯ ಪುಸ್ತಕದವರೆಗೂ ಕೈಯಾಡಿಸುವ ಮೂಲಕ ಶಾಂತಿ ಕದಡುವ ಪ್ರಯತ್ನ ಇಂದು ನಡೆಸಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ಎಂದು ವಿಷಾದಿಸಿದರು.
ಹಲವು ಜಾತಿ-ಧರ್ಮ, ಭಾಷೆಗಳನ್ನು ಒಳಗೊಂಡು ಸುಂದರ ಹೋತೋಟವಾಗಿ ಕಂಗೊಳಿಸುವ ಭಾರತದಲ್ಲಿ ಜನಾಂಗೀಯ ಹಿಂಸೆ ಹೆಚ್ಚುತ್ತಿದ್ದು, ಇದು ದೇಶದ ಅಸ್ತಿತ್ವಕ್ಕೆ ಮಾರಕವಾಗಿದ್ದು, ಇದು ಮುಂದುವರಿದರೆ ಭಾರತ ಹೋತೋಟ ಆಗುವ ಬದಲು ಸ್ಮಶಾನ ಭೂಮಿಯಾಗಿ ಪರಿವರ್ತನೆಯಾಗಬಹುದು ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.
ನಂದಾವರ ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಲ್ ಮಜೀದ್ ದಾರಿಮಿ ಅಧ್ಯಕ್ಷತೆ ವಹಿಸಿದ್ದರು. ಸಜಿಪ ಕೇಂದ್ರ ಜುಮಾ ಮಸೀದಿ ಖತೀಬ್ ಅಶ್ಫಾಕ್ ಫೈಝಿ ಮುಖ್ಯ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ರಾಜಶೇಖರ ನಾಯಕ್, ಆರಾಧನಾ ಸಮಿತಿ ಸದಸ್ಯ ಯೂಸುಫ್ ಕರಂದಾಡಿ, ಪುರಸಭಾ ಸದಸ್ಯ ಮುಹಮ್ಮದ್ ಇಕ್ಬಾಲ್ ಗೂಡಿನಬಳಿ, ಬಂಟ್ವಾಳ ಯುವ ಕಾಂಗ್ರೆಸ್‌ನ ಮಹೇಶ್ ನಾಯಕ್ ಖಂಡಿಗ, ತಾ.ಪಂ. ಮಾಜಿ ಸದಸ್ಯ ಶರೀಫ್ ಆಲಾಡಿ, ನಂದಾವರ ಮಸೀದಿ ಅಧ್ಯಕ್ಷ ಮೂಸಾ ಹಾಜಿ, ಪ್ರಧಾನ ಕಾರ್ಯದರ್ಶಿ ಮಾಲಿಕ್ ಉಸ್ಮಾನ್, ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್, ದ.ಕ. ಜಿಲ್ಲಾ ಉಲಮಾ-ಉಮರಾ ಸಮಿತಿ ಸಂಚಾಲಕ ಶಾಫಿ ಸಅದಿ ನಂದಾವರ, ಎಸ್‌ವೈಎಸ್ ನಂದಾವರ ಶಾಖಾಧ್ಯಕ್ಷ ಬಶೀರ್ ನಂದಾವರ, ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷ ಅಬ್ದುಲ್ ರಶೀದ್ ವಗ್ಗ, ಉದ್ಯಮಿಗಳಾದ ಜಬ್ಬಾರ್ ಹೈವೇ ನಂದಾವರ, ಶಾಫಿ ದುಬೈ, ಗೋಪಾಲ ಆಚಾರ್ಯ ಬಜಾರ್ ಮಾರ್ನಬೈಲ್, ಪಿಡಬ್ಲ್ಯುಡಿ ಗುತ್ತಿಗೆದಾರರಾದ ಪಿ.ಎಸ್. ಮುಹಮ್ಮದ್ ಇಕ್ಬಾಲ್, ಪಿ.ಎಸ್ ಅಬ್ದುಲ್ ಲತೀಫ್, ಸಜಿಪಮುನ್ನೂರು ಗ್ರಾ.ಪಂ. ಸದಸ್ಯರುಗಳಾದ ಕಬೀರ್, ಇದ್ದಿನಬ್ಬ, ಹಂಝ, ಶಮೀರ್, ಜನಾರ್ದನ, ಮಾಜಿ ಸದಸ್ಯ ಶರೀಫ್ ಮಲ್ಪೆ, ಪ್ರಮುಖರಾದ ಮಜೀದ್ ಫೈಝಿ ಮಲೇಷಿಯಾ, ನಂದಾವರ, ಶಾಹುಲ್ ಹಮೀದ್ ಎಸ್‌ಡಿಪಿಐ, ಯೂಸುಪ್ ಬಾಂಬಿಲ, ಆರಿಫ್ ನಂದಾವರ, ಅನ್ವರ್ ನಂದಾವರ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಸಚಿವ ರಮಾನಾಥ ರೈ ಅವರನ್ನು ಸನ್ಮಾನಿಸಲಾಯಿತು. ಎನ್.ಕೆ. ನಂದಾವರ ಸ್ವಾಗತಿಸಿ, ವಂದಿಸಿದರು. ಅಕ್ಬರ್ ಅಲಿ ನಂದಾವರ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಮೌಲಿದ್ ಪಾರಾಯಣ ಹಾಗೂ ಕಮರು ಬಳಗದವರಿಂದ ಬುರ್‌ದಾ ಮಜ್ಲಿಸ್ ಹಾಗೂ ನೆಬಿ ಮದ್‌ಹ್ ಹಾಡು ಕಾರ್ಯಕ್ರಮ ನಡೆಯಿತು. ಬಳಿಕ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಿತು.