ವಿಟ್ಲ ಸಮೀಪ ಕನ್ಯಾನ ದೇಲಂತಬೆಟ್ಟಿನಲ್ಲಿ ನೂತನವಾಗಿ ನಿರ್ಮಿಸಲಾದ ಸೈಂಟ್ ಪಾವ್ಲ್ ಚರ್ಚ್ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮ ಸೋಮವಾರ ನಡೆಯಿತು.
ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಎಲೋಶಿಯಸ್ ಪಾವ್ಲ್ ಡಿ ಸೋಜಾ ಉದ್ಘಾಟಿಸಿ, ಆಶೀರ್ವಚನ ನೀಡಿ, ಬಲಿ ಪೂಜೆ ನೆರವಾರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಸಚಿವರಾದ ರಮಾನಾಥ ರೈ, ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಜಿ ಪಂ ಸದಸ್ಯ ಎಂ.ಎಸ್. ಮಹಮ್ಮದ್, ಕನ್ಯಾನ ಪಂಚಾಯತ್ ಅಧ್ಯಕ್ಷೆ ದೇವಕಿ, ಉಪಾಧ್ಯಕ್ಷ ಕೆ ಪಿ ಅಬ್ದುಲ್ ರಹಿಮಾನ್, ಮಾಜಿ ಅಧ್ಯಕ್ಷ ರಘುರಾಮ ಶೆಟ್ಟಿ, ಎನ್ ಜೆ ಬಿಲ್ಡರ್‍ಸ್ ಮತ್ತು ಪ್ರೋಮೋಟರ್‍ಸ್‌ನ ನೋಯಲ್ ಎಫ್ ಸಿ ಪಿಂಟೊ, ವಿಟ್ಲ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಲೂವಿಸ್ ಮಸ್ಕರೇನಸ್ ಮತ್ತು ಕಾರ್ಯದರ್ಶಿ ಬಿ ವಿ ಮಾಡ್ತಾ ಭಾಗವಹಿಸಿದ್ದರು.
ವಿಟ್ಲ ಶೋಕಮಾತೆ ಚರ್ಚ್‌ನ ಧರ್ಮಗುರು ಎರಿಕ್ ಕ್ರಾಸ್ತಾ ಪ್ರಸ್ತಾವಿಸಿ ಸ್ವಾಗತಿಸಿದರು. ವಿಶ್ರಾಂತ ಧರ್ಮಗುರು ಫಾ| ಪೀಟರ್ ಸೆರಾವೊ ವಂದಿಸಿದರು. ಜೇಸನ್ ಪಿಂಟೊ ವಿಟ್ಲ ಮತ್ತು ದಿಯೋನ್ ರಾಬಿನ್ ವೇಗಸ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.