ವಿದ್ಯಾರ್ಥಿಗಳು ಪರಿಸರವನ್ನು ಪ್ರೀತಿಸಲು ಕಲಿಯಬೇಕು. ಪರಿಸರದ ಕೌತುಕವನ್ನು ಅಭ್ಯಾಸ ಮಾಡಬೇಕು. ವಿದ್ಯಾರ್ಥಿ ದೆಸೆಯಲ್ಲಿ ಸಿಕ್ಕುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಕ್ರೀಡಾಚಟುವಟಿಕೆಗಳು ನಿಮ್ಮಲ್ಲಿ ಆರೋಗ್ಯವನ್ನೂ ಮಾನಸಿಕ ಸಾಮರ್ಥ್ಯವನ್ನೂ ವೃದ್ಧಿಸುತ್ತದೆ ಎಂದು ಎಸ್.ವಿ.ಎಸ್ ಕಾಲೇಜಿನ ಜೀವಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥೆ ಭಾರತಿ.ಎಸ್.ಭಟ್ ಹೇಳಿದರು.
ಬಂಟ್ವಾಳ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲೀಕ್ ಶಾಲೆಯಲ್ಲಿ ನಡೆದ ವಾರ್ಷಿಕ ಬಹುಮಾನ ವಿತರಣಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಶಾಲಾ ಸಂಚಾಲಕರಾದ ಭಾಮೀ ವಿಠಲ್‌ದಾಸ್ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ಮಲ್ಯ, ಶಾಲಾ ಪ್ರಾಂಶುಪಾಲೆ ರಮಾಶಂಕರ್ ಸಿ, ಪ್ರೇಮಧಾಮ ಚಾರೀಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟಿ ಅಶೋಕ್ ನಾಯಕ್ ಬಹುಮಾನ ವಿತರಣಾ ಕಾರ್‍ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಂತರ ಮಂಗಳೂರಿನ ’ನೃತ್ಯಾಂಗನ’ ಸಂಸ್ಥೆಯ ಮುಖ್ಯಸ್ಥೆ ವಿದುಷಿ ರಾಧಿಕಾ ಶೆಟ್ಟಿ ಇವರಿಂದ ಉಪನ್ಯಾಸ ಹಾಗೂ ನೃತ್ಯ ಪ್ರಾತ್ಯಕ್ಷಿಕೆ ನೆರವೇರಿತು. ಭರತನಾಟ್ಯದ ವಿವಿಧ ಮುದ್ರೆ, ಭಾವ, ರಸಗಳನ್ನು ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿ ಪ್ರಾಚೀನ ನೃತ್ಯ ಪರಂಪರೆಯನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದರು.
ವಿದ್ಯಾಥಿಗಳಿಂದ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ಪ್ರಸ್ತುತಿ ಕಾರ್‍ಯಕ್ರಮ ’ಸಂಸ್ಕೃತಿ’ ನಡೆಯಿತು. ಅಪರಾಹ್ನ ಮಂಗಳೂರಿನ ಜಾದೂಗಾರರಾದ ರಾಜೇಶ್ ಮಳಿ ಹಾಗೂ ಶುಭಾ ಮಳಿ ಪುತ್ರಿಯರಾದ ಅಂಜನಾ ಮಳಿ ಹಾಗೂ ಅಪೂರ್ವ ಮಳಿ ಇವರ ಜಾದೂ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು. 9ನೇ ತರಗತಿಯ ತರುಣ್ ಪಿ ಹೊಳ್ಳ, ಚಿನ್ಮಯಿ ಡಿ ಕಾರ್‍ಯಕ್ರಮ ನಿರ್ವಹಿಸಿ, ರಿಹಾಮ ಕೌಲ ವಂದಿಸಿದರು.