ಬಂಟ್ವಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎನ್ನೆಸ್ಸೆಸ್ ಶಿಬಿರವನ್ನು ಸಚಿವ ಬಿ.ರಮಾನಾಥ ರೈ ಬುಡೋಳಿ ಪುಂಚೋಡಿಯಲ್ಲಿ ಉದ್ಘಾಟಿಸಿದರು.
ಇಲ್ಲಿನ ನೇತಾಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರವು 21ರವರೆಗೆ ನಡೆಯಲಿದೆ. ಈ ಸಂದರ್ಭ ಹಲವು ಕಾರ್ಯಕ್ರಮಗಳೂ ಆಯೋಜನೆಗೊಂಡಿವೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವ ರೈ, ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ದಿ ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವ ಗುಣವನ್ನು ಮೈಗೂಡಿಸುವ ಅವಕಾಶ ಎನ್ನೆಸ್ಸೆಸ್ ನಿಂದ ಒದಗುತ್ತದೆ ಎಂದರು.
ಬಂಟ್ವಾಳ ಭೂ ಆಬಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾದ ಸುದರ್ಶನ್ ಜೈನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಎನ್.ಎಸ್.ಎಸ್. ನ ವಿದ್ಯಾರ್ಥಿಗಳಿಗೆ ಸಂಯೋಜನ ಕೌಶಲ್ಯದ ಬಗ್ಗೆ ಕುರಿತು ವಿವರಿಸಿದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಬಂಗೇರ ಹಾಗೂ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿದರು. ನೇತಾಜಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶ್ರೀಪತಿ ಭಟ್ , ಲೋಕಯ್ಯ ಪೂಜಾರಿ, ಸಿಲ್ವೆಸ್ಟರ್ ಫೆರ್ನಾಂಡಿಸ್, ಸುಬ್ಬಣ್ಣ ಭಟ್ ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಯೋಜನಾ ಶಿಬಿರಾಧಿಕಾರಿ ಪ್ರೊ. ಹೈದಾರಾಲಿ ಸ್ವಾಗತಿಸಿದರು. ಪ್ರಾಂಶುಪಾಲರದ ಗಿರೀಶ್ ಭಟ್ ಎನ್.ಎಸ್.ಎಸ್.ನ ತಮ್ಮ ಅನುಭವವನ್ನು ವಿದ್ಯಾರ್ಥಿಗಳಲ್ಲಿ ತಿಳಿಸಿದರು. ಎನ್.ಎಸ್.ಎಸ್. ಶಿಬಿರಾರ್ಥಿ ಅಕ್ಷತ ಹಾಗೂ ಜನಾರ್ಧನ ಕಾರ್ಯಕ್ರಮ ನಿರೂಪಿಸಿದರು ಹಾಗೂ ಪೂಜಾಶ್ರೀ ವಂದಿಸಿದರು.