ಪಾಕಶಾಲೆಯೇ ವೈದ್ಯಶಾಲೆ

ಬಲಶಾಲಿ ಕಡಲೆಬೇಳೆ ದೇಹಕ್ಕೆ ಉಪಕಾರಿ.. ಆದರೆ ಅತಿಯಾದರೆ ಒಳ್ಳೇದಲ್ಲ

  • ಡಾ.ಎ.ಜಿ.ರವಿಶಂಕರ್

www.bantwalnews.com

ಕಡಲೆ ಬೇಳೆ ಅಥವಾ ಹುಡಿ ಎಂದಾಕ್ಷಣ ನೆನಪಿಗೆ ಬರುವುದು ತಿನಿಸುಗಳು. ಇದರಲ್ಲಿ ಕಬ್ಬಿಣದ ಅಂಶ,ತಾಮ್ರ ಜಿಂಕ್,ಫಾಲಿಕ್ ಆಮ್ಲ, ನಾರಿನ ಅಂಶ ಇತ್ಯಾದಿಗಳು ಯಥೆಷ್ಟವಾಗಿವೆ. ಹಿತವಾಗಿ ಮತ್ತು ಮಿತವಾಗಿ ಕಡಲೆ ಬೇಳೆಯನ್ನು ಉಪಯೋಗಿಸುವುದರಿಂದ ದೇಹಕ್ಕೆ ಉತ್ತಮ ಫಲವನ್ನು ನೀಡುತ್ತದೆ. ಅತಿಯಾಗಿ ಬಳಸಿದರೆ ಅಜೀರ್ಣ ಹಾಗು ವಾಯುವಿನ ತೊಂದರೆಯನ್ನು ಎದುರಿಸಬೇಕಾಗುತ್ತದೆ.

  1. ನಿಯಮಿತವಾಗಿ ಸೇವಿಸಿದರೆ ಜೀರ್ಣ ಶಕ್ತಿಯನ್ನು ಅಧಿಕ ಗೊಳಿಸುತ್ತದೆ ಮತ್ತು ಶರೀರಕ್ಕೆ ಬಲವನ್ನು ನೀಡುತ್ತದೆ.
  2. ಯಥೇಷ್ಟವಾಗಿ ನಾರಿನ ಅಂಶ ಇರುವ ಕಾರಣ ಮಲಬದ್ದತೆಯನ್ನು ನಿವಾರಿಸುತ್ತದೆ.
  3. ಕಬ್ಬಿಣದ ಅಂಶ ಇರುವುದರಿಂದಾಗಿ ರಕ್ತಹೀನತೆಯನ್ನು ಹೋಗಲಾಡಿಸುತ್ತದೆ.
  4. ಕಡಲೆ ಹುಡಿಯನ್ನು ಹಾಲಿನಲ್ಲಿ ಕಲಸಿ ಮುಖಕ್ಕೆ ಹಚ್ಚಿದರೆ ಮೊಡವೆಗಳು ವಾಸಿಯಾಗುತ್ತವೆ.
  5. ಮೈ ಮೇಲೆ ತುರಿಕೆ ಹಾಗು ಕಜ್ಜಿಗಳು ಇದ್ದಾಗ ಕಡಲೆ ಹುಡಿ ಹಾಕಿ ಸ್ನಾನ ಮಾಡಬೇಕು.
  6. ಕಡಲೆ ಹುಡಿಯನ್ನು ಉಜ್ಜಿ ಸ್ನಾನ ಮಾಡುವುದರಿಂದ ಶರೀರದಲ್ಲಿ ಬೆವರಿನಿಂದ ಬರುವ ದುರ್ಗಂಧ ನಿವಾರಣೆಯಾಗುತ್ತದೆ.
  7. ತಲೆಗೆ ಕಡಲೆ ಹುಡಿ ಹಾಕಿ ಸ್ನಾನ ಮಾಡುವುದರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ.
  8. ಕಣ್ಣು ಉರಿ ಇದ್ದಾಗ ಕಡ್ಲೆ ಪುಡಿಯನ್ನು ನೀರಿನಲ್ಲಿ ಕಲಸಿ ತೆಳ್ಳಗಿನ ಬಟ್ಟೆಗೆ ಲೇಪಿಸಿ ಕಣ್ಣಿನ ರೆಪ್ಪೆಯ ಮೇಲೆ ಇಡಬೇಕು
  9. ಕಡಲೆ ಬೇಳೆಯನ್ನು ನೀರಿನಲ್ಲಿ ನೆನೆ ಹಾಕಿ ಅದರ ನೀರನ್ನು ಕುಡಿಯುವುದು ಮಧುಮೇಹ ರೋಗಿಗಳಿಗೆ ಉತ್ತಮ ಪಥ್ಯ ಆಹಾರವಾಗಿದೆ.
  10. ಇದು ಹೃದಯಕ್ಕೆ ಬಲದಾಯಕವಾಗಿದ್ದು ರಕ್ತನಾಳಗಳ ರೋಗಗಳ ಸಾಧ್ಯತೆಯನ್ನು ಕಡಿಮೆಮಾಡುತ್ತದೆ.

 

 

Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts